ಸಾಲದ ಬಂಡಿ
ಬದುಕು ಸಾಲದ
ಬಂಡಿ
ಎಷ್ಟಾದರೂ
ಸಾಲದು
ಈ ಬದುಕಿನ
ಬಂಡಿಗೆ ಮುಂದೆ ಸಾಗಿಸಲು!
ಬೇಕುಗಳು
ಹನುಮಂತನ
ಬಾಲದಂತೆ
ಬೆಳೆಯುತ್ತ
ಹೋಗುವವು
ಬೇಡ ಅಥವಾ
ಸಾಕುಗಳ
ಸುದ್ದಿಯೇ ಇಲ್ಲ!
ಹಾಸಿಗೆ ಇದ್ದಷ್ಟು
ಕಾಲು ಚಾಚೂ
ಎಂಬುದು ಯಾರ ಕಿವಿಗೂ
ತಲೆಗೂ ಹೋಗುವುದಿಲ್ಲ
ಸಾಲ ಮಾಡಿಯಾದರೂ
ತುಪ್ಪವ ಕುಡಿ ಎಂಬ
ನಾಣ್ಣುಡಿ ಮಾತ್ರ
ಅಕ್ಷರಶಃ
ಪಾಲಿಸುವೆವು!
ಜೀವನದಲ್ಲಿ ಸೋಲನ್ನೊಪ್ಪದೇ
ಸಾಲ ಸೋಲವ
ಮಾಡಿ ಬದುಕಲೆತ್ನಿಸುವೆವು!
ಎಷ್ಟು ಸಾಲ
ಮಾಡಿದರು
ಮತ್ತೆ ಮತ್ತೆ ಚಕ್ರಬಡ್ಡಿ
ಯಾಗಿ
ಮತ್ತೆ ಬದುಕು
ಸಾಲದ ಬಂಡಿಯಾಗುವುದು
ಸಾಲದ ಚಕ್ರವ್ಯೂಹದಲಿ
ಬಿದ್ದು ಒದ್ದಾಡುವೆವು!!
ಬದುಕು ಜಟಕಾ ಬoಡಿ
ವಿಧಿ ಅದರ ಸಾಹೇಬ
ಎಂದು ಹೇಳಿಕೊಳ್ಳುತ
ಕೊರಗುವೆವು!
ನೋಡಿಸ್ವಾಮಿ ಹೀಗಿದೆ
ನಮ್ಮ ಬದುಕು
ಸಾಲದ ಬಂಡಿ!
ಡಾ ಜಯಾನಂದ ಧನವಂತ