ರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನಹಡಗಲಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ವತಿಯಿಂದ ಮೈಸೂರು ಪುರಭವನದಲ್ಲಿ ಏರ್ಪಡಿಸಿದ್ದ ಎಸ್.ಎಸ್.ಪುಟ್ಟೇಗೌಡ ವಿರಚಿತ ಮಹಾತ್ಮ ಕನಕದಾಸ ನಾಟಕ, ವಿವಿಧ ತಂಡಗಳ ರಂಗದೃಶ್ಯಾವಳಿ ಮತ್ತು ರಂಗಗೀತೆಗಳ ಕಾರ್ಯಕ್ರಮ ಪ್ರೇಕ್ಷಕರ ಮನಸೆಳೆಯಿತು.
ನಿವೃತ್ತ ಉಪ ಆಯುಕ್ತರು ಹೆಚ್.ಎಸ್.ಗೋವಿಂದೇಗೌಡರು ಕಾರ್ಯಕ್ರಮ ಉದ್ಘಾಟಿಸಿ ರಂಗಗೀತೆ ಹಾಡಿದರು ಮತ್ತು ಏಕವ್ಯಕ್ತಿ ನಾಟಕ ದೃಶ್ಯ ಪ್ರದರ್ಶಿಸಿದರು. ಕರ್ನಾಟಕ ರಾಜ್ಯ ಬರಹಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಚಿಕ್ಕಮಗಳೂರಿನ ವಿಜಯಕುಮಾರ್ ಸಿ.ಆರ್. ಮಾತನಾಡಿ ಕರೋನ ಸಂದರ್ಭ ಜನ್ಮ ತೆಳೆದ ಕರ್ನಾಟಕ ರಾಜ್ಯ ಬರಹಗಾರರ ಸಂಘ ತನ್ನ ಸಾಹಿತ್ಯ ಸಾಂಸ್ಕೃತಿಕ ಕಾರ್ಯ ಚಟುವಟಿಕೆ ರಾಜ್ಯ ಹೊರರಾಜ್ಯಗಳಲ್ಲೂ ಘಟಕಗಳನ್ನು ಹೊಂದಿದೆ. ಸಂಘದ ಕರ್ನಾಟಕ ಧ್ವನಿ ವಿಭಾಗದಲ್ಲಿ ಸಾವಿರಕ್ಕೂ ಹೆಚ್ಚಾಗಿ ಇದ್ದಾರೆ. ಆನ್ ಲೈನ್ ಸ್ಫರ್ಧೆಯಲ್ಲಿ ಭಾಗವಹಿಸಿದವರಿಗೆ ಪ್ರಶಸ್ತಿ ಪತ್ರ ನೀಡಲಾಗುತ್ತಿದೆ. ಸಂಘದ ಮತ್ತೊಂದು ಭಾಗವಗಿ ರಂಗಗೀತೆ ಘಟಕ ಮಾಡಿ ಅದೀಗ ದಕ್ಷಿಣ ಕರ್ನಾಟಕದಲ್ಲಿ ಬಹುಬೇಗ ಜನಪ್ರಿಯವಾಗುತ್ತಿದೆ. ಮೈಸೂರು ಜಿಲ್ಲೆಯ ಸಂಚಾಲಕರು ಎಸ್.ಎಸ್.ಪುಟ್ಟೇಗೌಡರು ಇದೀಗ ರಂಗಕಲರವ ಕಾರ್ಯಕ್ರಮ ಏರ್ಪಡಿಸಿ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದರು.
ಸಂಘದ ಗೌ. ಅಧ್ಯಕ್ಷರು ಸಾಹಿತಿ ಗೊರೂರು ಅನಂತರಾಜು ಮಾತನಾಡಿ ನವೆಂಬರ್ ೧೫ರಂದು ಬೆಂಗಳೂರು ಯಶವಂತಪುರದ ಜ್ಯೋತಿ ಪದವಿಪೂರ್ವ ಕಾಲೇಜಿನಲ್ಲಿ ರಾಜ್ಯಮಟ್ಟದ ನುಡಿವೈಭವ ಕಾರ್ಯಕ್ರಮವು ರಾಜ್ಯಾಧ್ಯಕ್ಷರು ಮಧುನಾಯ್ಕ ಲಂಬಾಣಿ ಸಾರಥ್ಯದಲ್ಲಿ ನಡೆಸಲು ಸಿದ್ಧತೆ ಆಗುತ್ತಿದೆ. ಇಲ್ಲಿ ರಾಜ್ಯಮಟ್ಟದಲ್ಲಿ ಆಯ್ಕೆಯಾದ ಗಾಯಕ/ಗಾಯಕಿಯರಿಗೆ ಕರುನಾಡ ಕೋಗಿಲೆ ಪ್ರಶಸ್ತಿ, ಕವಿಗಳಿಗೆ ಕಾವ್ಯಶ್ರೀ, ಚಿತ್ರ ಕಲಾವಿದರಿಗೆ ಚಿತ್ರಕಲಾ ರತ್ನ ಪ್ರಗತಿಪರ ರೈತರಿಗೆ ಅನ್ನದಾತ ಪ್ರಶಸ್ತಿ, ಭರತನಾಟ್ಯ ಕ್ಷೇತ್ರದಲ್ಲಿ ನಾಟ್ಯರತ್ನ, ರಂಗಭೂಮಿ ಕ್ಷೇತ್ರದಲ್ಲಿ ರಂಗಕಲಾ ರತ್ನ ಮತ್ತು ಸಿನಿಮಾ ರಂಗದಲ್ಲಿ ಸಾಧಕರನ್ನು ಗುರುತಿಸಿ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಸನ್ಮಾನಿಲಾಗುವುದು. ಅರಕಲಗೊಡು ಶಂಭುನಾಥಪುರದ ಎಸ್.ಎಸ್.ಪುಟ್ಟೇಗೌಡರು ಉತ್ತಮ ನಟರು. ಛಲದೋಳ್ ದುರ್ಯೋಧನ, ಶಿವಶರಣ ರಾವಣ, ರಾವಣೇಶ್ವರ, ಸತ್ಯ ಹರಿಶ್ಚಂದ್ರ ಮಹಾತ್ಮ ಕನಕದಾಸ ನಾಟಕ ಬರೆದಿರುವರು. ಇವರ ನಾಟಕಗಳನ್ನು ಮಹಿಳೆಯರು ಕಲಿತು ಪ್ರದರ್ಶಿಸುತ್ತಿರುವುದು ಮೆಚ್ಚುಗೆಯ ವಿಷಯವೆಂದರು.
ಇವರ ಹೊಸ ನಾಟಕ ಕುಮಾರರಾಮ ಪ್ರಕಟಣೆಗೆ ಸಿದ್ಧವಾಗಿದ್ದು ಸಧ್ಯದಲ್ಲೇ ರಂಗದ ಮೇಲೆ ಬರುವುದೆಂದು ತಿಳಿಸಿದರು. ಮಹಾತ್ಮ ಕನಕದಾಸ ನಾಟಕದಲ್ಲಿ ಧನುಶ್ರೀ ಅವರು ಕನಕದಾಸರ ಪಾತ್ರದಲ್ಲಿ ಉತ್ತಮ ನಟನೆಯಿಂದ ಗಮನ ಸೆಳದರು. ನಿರ್ಮಲ ಅವರು ಪುರಂದರದಾಸರ ಪಾತ್ರವನ್ನು ಬಿ.ಲೀಲಾವತಿ-ವ್ಯಾಸರಾಯರು, ಗೌರಮ್ಮ-ರಾಮಚಾರ್ಯ, ಕನಕ-ಭೀಮಚಾರ್ಯ ಮತ್ತು ಹೇಮ ಅವರು ಲಚ್ಚಿ ಪಾತ್ರ ನಿರ್ವಹಿಸಿದರು. ತ್ರಿನಾಮದಾರಿ ಪಾತ್ರ ಕೆ.ಮಂಜುನಾಥ, ಬೀರಪ್ಪನಾಯಕ ಪಾತ್ರ ರೇವಣ್ಣ ನಿಭಾಯಿಸಿದರು. ಸೋಮವಾರಪೇಟೆ ತಾ. ಕೋಣಿಗನಹಳ್ಳಿ ಗ್ರಾಮದ ಕಲಾವಿದರು ಹರಿಭಕ್ತ ಮಹಾಂಧಾತ ನಾಟಕ ದೃಶ್ಯವನ್ನು, ಮಹದೇವಪ್ಪ ನಿರ್ಮಲ ಗಂಗಾತೀರ ದೃಶ್ಯ, ಮೈಸೂರು ಅನಂತು ತಂಡ ದಶರಥ ಕೈಕೆ ಅಂತ:ಪುರ ಮತ್ತು ಹಾಸನದ ಶ್ರೀಮತಿ ರಾಣಿ, ಪುಟ್ಟಮ್ಮ ಮತ್ತು ಗಾಯತ್ರಿಯವರು ಎಸ್.ಎಸ್. ಪುಟ್ಟೇಗೌಡರ ಶಿವಶರಣ ನಾಟಕದ ದೃಶ್ಯ ಪ್ರದರ್ಶಿಸಿದರು. ನಿವೃತ್ತ ಎಸಿಎಫ್, ಬಸವರಾಜು, ವಿ.ಕಿರಗಸೂರು ರಾಜಪ್ಪ ನಾಟಕ ನಿರ್ದೇಶಕರು, ಮರಿಗೌಡರು ಅರಣ್ಯ ಇಲಾಖೆ, ಎಲ್.ಎಸ್.ಮಹದೇವಸ್ವಾಮಿ, ಆರ್.ಎಸ್.ಮಲ್ಲೇಗೌಡರು ಹುಣಸೂರು, ಹೆಚ್.ಜಿ.ಶಿವಕುಮಾರ್, ಚಿನಕುರಳಿ ಸಿದ್ಧಲಿಂಗೇಗೌಡರು, ಮಹದೇವು ಮೊದಲಾದವರು ಇದ್ದರು. ಗೊರೂರು ಅನಂತರಾಜು ಕಾರ್ಯಕ್ರಮ ನಿರೂಪಿಸಿದರು. ಕಲಾವಿದೆ ರಾಣಿಚರಾಶ್ರೀ ವಂದಿಸಿದರು.