ಸಿಂದಗಿ: ನಿತ್ಯ ಲಿಂಗಪೂಜೆ ಮಾಡಿಕೊಳ್ಳುವುದರಿಂದ ಆರೋಗ್ಯ ಕೊಡುತ್ತೆ, ಲಿಂಗಪೂಜೆ ದೇಹದ ಆಲಸ್ಯ ವನ್ನು ದೂರ ಮಾಡುತ್ತೆ ಅದಕ್ಕೆ ಲಿಂಗಾಯತ ಧರ್ಮವು ಲಿಂಗ ಪೂಜೆ ಮಾಡುವ ಮೂಲಕ ಧರ್ಮ ಕಟ್ಟೋಣ, ಸಂಘಟಿತರಾಗಿ ಮುಂದಿನ ಪೀಳಿಗೆಗೆ ಮಿಸಲಾತಿ ಸೌಲಭ್ಯ ಕೊಡಿಸೋಣ ಎಂದು ದಿವ್ಯ ಸಾನಿದ್ಯ ವಹಿಸಿದ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಪ್ರಥಮ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿಯವರು ಹೇಳಿದರು.
ಪಂಚಮಸಾಲಿ ಸಮಾಜದ ಸಧೃಢತೆ ಹಾಗೂ ಮೀಸಲಾತಿ ಚಳವಳಿಗಾರರ ಬಲವರ್ಧನೆಗಾಗಿ ಶ್ರಾವಣ ಮಾಸದ ಪ್ರಯಕ್ತ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಮನೆಮನದಲ್ಲಿ ಇಷ್ಟ ಲಿಂಗಪೂಜಾ -ದೀಕ್ಷಾ ಅಭಿಯಾನಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ, ಲಿಂಗಾಯತ ಪಂಚಮಸಾಲಿ ಸಮಾಜವೆಂದರೆ ಒಕ್ಕಲಿಗ ಸಮಾಜ ಶುದ್ಧ ಕಾಯಕಯೋಗಿ ಸಮಾಜವಾಗಿದ್ದು. ಸಂಸ್ಕಾರದ ಕೊರತೆಯಿತ್ತು ಅದನ್ನು ಇಡೀ ರಾಜ್ಯಾದ್ಯಂತ ಲಿಂಗಪೂಜೆ ಹಾಗೂ ಇಷ್ಠಲಿಂಗ ಪೂಜೆ ಮಾಡುವ ಮೂಲಕ ಸಮಾಜದ ಸಂಘಟನೆ ಮಾಡಲಾಗುತ್ತಿದೆ. ನಮ್ಮ ಮುಂದಿನ ಯುವ ಪೀಳಿಗೆಗೆ ಶಿಕ್ಷಣ, ಉದ್ಯೋಗ ಪಡೆದುಕೊಳ್ಳಲು ಮಿಸಲಾತಿ ಅವಶ್ಯಕತೆಯಿದ್ದು. ಹೋರಾಟ ಮಾಡಿ ಪಡೆದುಕೊಳ್ಳುವ ಅನಿವಾರ್ಯತೆಯಿದೆ ಕಾರಣ ಎಲ್ಲರು ಸಮಾಜದ ಜಗದ್ಗುರುಗಳು ಕರೆ ಕೊಟ್ಟಾಗ ಒಟ್ಟಿನಿಂದ ಸಂಘಟತರಾಗಿ ಒಗ್ಗಟ್ಟು ಪ್ರದರ್ಶಿಸೋಣ ಎಂದು ಕರೆ ನೀಡಿ ಇಷ್ಠಲಿಂಗಪೂಜೆಯ ತತ್ವಸಾರವನ್ನು ವಿವರಿಸಿದರು.
ಸಮ್ಮುಖ ವಹಿಸಿದ ಆಸಂಗಿಹಾಳ ಆರೂಢಮಠದ ಶಂಕರಾನಂದ ಮಹಾಸ್ವಾಮಿಗಳು, ಪಂಚಮಸಾಲಿ ಸಮಾಜದ ಅಧ್ಯಕ್ಷ ಎಂ ಎಂ ಹಂಗರಗಿ, ನಾಗರಳ್ಳಿ ಬಸವ ಸಮಿತಿ ಅಧ್ಯಕ್ಷ ನಾನಾಗೌಡ ಪಾಟೀಲ, ಆಲಮೇಲ ಗ್ಯಾರೆಂಟಿ ಸಮಿತಿ ಅಧ್ಯಕ್ಷ ಅಶೋಕ ಕೊಳಾರಿ, ಎ ಪಿ ಎಂ ಸಿ ಅಧ್ಯಕ್ಷ ಬಸವರಾಜ ಬಾಗೇವಾಡಿ, ಜಿಪಂ ಮಾಜಿ ಉಪಾಧ್ಯಕ್ಷ ಸಿದರಾಮ್ದ ಪಾಟೀಲ ಹೂನಳ್ಳಿ. ನಿವೃತ್ತ ನೌಕರರ ಸಂಘದ ಅದ್ಯಕ್ಷ ವಿ. ಬಿ ಕುರುಡಿ, ವಕೀಲರ ಸಂಘದ ಅಧ್ಯಕ್ಷ ಎಸ್ ಬಿ ಪಾಟೀಲ, ಎಂ. ಎಸ್ ಪಾಟೀಲ ವಕೀಲರು, ನೌಕರರ ಸಂಘದ ಅಧ್ಯಕ್ಷ ಅಶೋಕ ತೆಲ್ಲೂರ, ಬಾಳುಗೌಡ ಪಾಟೀಲ. ಗೋಪಾಲಗೌಡ ಪಾಟೀಲ, ಪಿಕೆಪಿಎಸ್ ಅಧ್ಯಕ್ಷ ಧರ್ಮುಗೌಡ ಹಚ್ಚಡದ, ಹಣಮಂತ್ರಾಯ ಬಾಗೇವಾಡಿ, ಮುತ್ತು ಅಣವಿ, ಅಪ್ಪುಗೌಡ ಪಾಟೀಲ, ಆನಂದ ಶಾಬಾದಿ, ಬಸವರಾಜ ಐರೋಡಗಿ, ದಾದಾಗೌಡ ಅಳ್ಳೋಳ್ಳಿ, ಶ್ರೀಶೈಲ ಪೂಜಾರಿ,ಗೋಲ್ಲಾಳಪ್ಪಗೌಡ ಬಿರಾದಾರ, ಪಂಡಿತ ಯಂಪೂರೆ, ಶಿವರಾಜ ಪೋ.ಪಾಟೀಲ, ಶಂಕರಗೌಡ ಭಂಥನಾಳ, ಸಂಗಮೇಶ ನರಬೋಳಿ, ಜಿ.ಜಿ.ಮಾರ್ಸನಳ್ಳಿ ವಕೀಲರು ಸೇರಿದಂತೆ ಗ್ರಾಮಸ್ಥರು ಇದ್ದರು.
ವೇತಾಳ ಜೋಶಿ, ಶ್ರೀದೇವಿ ಪತ್ತಾರ. ಸಂಗೀತ ಸೇವೆ ಸಲ್ಲಿಸಿದರು, ಸದಾಶಿವ ಬಿರಾದಾರ ಶಿಕ್ಷಕರು ತಬಲಾ ಸಾಥ ನೀಡಿದರು.