Homeಸುದ್ದಿಗಳುಹಾಸನದ ಗಣಪತಿ ಪೆಂಡಾಲಿನಲ್ಲಿ ಕಾವ್ಯ ಗಾನ ನಾಟ್ಯ ಕುಂಚ ಕಾರ್ಯಕ್ರಮ

ಹಾಸನದ ಗಣಪತಿ ಪೆಂಡಾಲಿನಲ್ಲಿ ಕಾವ್ಯ ಗಾನ ನಾಟ್ಯ ಕುಂಚ ಕಾರ್ಯಕ್ರಮ

Published on

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ, ಇನ್ಸೂರೆನ್ಸ್ ಪುಟ್ಟೇಗೌಡ ಟ್ರಸ್ಟ್, ಶ್ರೀ ಗಣಪತಿ ಸೇವಾ ಸಮಿತಿ ಹಾಗೂ ಶ್ರೀ ಹೊಯ್ಸಳ ಚಿತ್ರಕಲಾ ಪರಿಷತ್ ಹಾಸನ ಇವರುಗಳ ಸಹಯೋಗದಲ್ಲಿ ಹಾಸನ ನಗರದ ಹಳೇ ಬಸ್ ಸ್ಟ್ಯಾಂಡ್ ರಸ್ತೆ, ಶ್ರೀ ಗಣಪತಿ ಪೆಂಡಾಲ್ ನಲ್ಲಿ ದಿನಾಂಕ 24.09.2026ರ ಗುರುವಾರ ಸಂಜೆ 7 ಗಂಟೆಗೆ ಕಾವ್ಯ ಗಾನ ನಾಟ್ಯ ಕುಂಚ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಕವಿ/ಕವಯತ್ರಿಯರಾದ ಮಲ್ಲೇಶ್ ಜಿ. ಕಲಾವತಿ ಮಧುಸೂದನ್, ಗೊರೂರು ಅನಂತರಾಜು, ಸುಶೀಲಾ ಸೋಮಶೇಖರ್, ಶೈಲಜಾ ಹಾಸನ್, ಎಸ್. ಎಸ್. ಪುಟೇಗೌಡ, ಜಿ.ಆರ್.ಶ್ರೀಕಾಂತ್ ವೈ.ಬಿ. ಕಾಂತರಾಜು ಗಿರಿಜಾಂಬ ಬಾಳ್ಳುಪೇಟೆ, ರಾಜೇಶ್ವರಿ ಹುಲ್ಲೇನಹಳ್ಳಿ ಸ್ವರಚಿತ ಕವಿತೆ ವಾಚಿಸುವರು. ವಾಚಿಸಲ್ಪಡುವ ಕವಿತೆಗಳಿಗೆ ಗಾಯಕರು ರಾಗ ಸಂಯೋಜಿಸಿ ಹಾಡುವರು ಗಾಯಕರಾದ ಯೋಗೇಂದ್ರ ದುದ್ದ, ಶ್ರೀಕಾಂತ್, ಕಲಾವತಿ ಮಧುಸೂಧನ್, ಉಮಾ ವಿಶ್ವನಾಥ್, ಶೋಭಾ ಹರೀಶ್ ಹಾಡುವರು. ಚಿತ್ರ ಕಲಾವಿದರಾದ ದೇವರಾಜು, ಚಂದ್ರಪ್ರಭ, ಬಸವರಾಜು, ಶಿವಕುಮಾರ್, ಸ್ಪೂರ್ತಿ, ಸಿಂಚನ, ಯಶ್, ಬಸವರಾಜ್ ಭಗತ್, ಹೇಮಲತಾ ವೇದಿಕೆಯಲ್ಲಿ ಗಾಯಕ/ಗಾಯಕಿಯರು ಹಾಡು ಹೇಳುವ ಸಮಯದಲ್ಲಿ ಪ್ರೇಕ್ಷಕರೆದುರು ಕವಿ ಕಲ್ಪನೆಯ ಗಾಯನಕ್ಕೆ ತಕ್ಕುದಾದ ಚಿತ್ರಗಳನ್ನು ಬಿಡಿಸುವರು. ನೃತ್ಯ ಪ್ರದರ್ಶನದಲ್ಲಿ ಸ್ಮಿತಾ ಹೇಮೇಶ್ ಮತ್ತು

ಸುನೀತಾ ಕಿರಣ್ ಭಾಗವಹಿಸುವರು.

Latest articles

More like this