Homeಸುದ್ದಿಗಳುಹಂಪಿ ಕನ್ನಡ ವಿವಿಯಿಂದ ಶರಣರ ಚರಿತ್ರೆಗೆ ಅಪಚಾರ

ಹಂಪಿ ಕನ್ನಡ ವಿವಿಯಿಂದ ಶರಣರ ಚರಿತ್ರೆಗೆ ಅಪಚಾರ

Published on

ಕಳೆದ ಹಲವು ವರ್ಷಗಳಿಂದ ಹಲವು ಸಂಶಯ ಮತ್ತು ಅನುಮಾನಗಳನ್ನು ಹುಟ್ಟು ಹಾಕಿದ ದೇವರ ದಾಸಿಮಯ್ಯ ಮರುಚಿಂತನೆ ಎಂಬ ಪ್ರೊ ವಾಸುದೇವ ಬಡಿಗೇರ ಕೃತಿಯ ಕುರಿತು ಮತ್ತು ಅವರ ಅನೇಕ ಅಪ್ರಭುಧ್ಧ ಅವೈಜ್ಞಾನಿಕ ಲೇಖನಗಳ ಕೆಲ ಪ್ರಮುಖ ಅಂಶಗಳನ್ನು ಈಗಾಗಲೇ ಸಾದರ ಪಡಿಸಿದ್ದೇನೆ.

ದೇವರ ದಾಸಿಮಯ್ಯ ಮರು ಚಿಂತನೆ ಎಂಬ ಕೃತಿಯ ವಿಮರ್ಶೆ ಮತ್ತು ಸಾವಿರಾರು ಜನರ ಆಕ್ಷೇಪದ ಪಾತ್ರಗಳು ರಾಜಭವನ ಹಂಪಿ ಕುಲಪತಿಗಳು ಕುಲಸಚಿವರಿಗೆ ತಲುಪಿವೆ. ಈ ಕೃತಿಯ ವಿರುದ್ಧ ಘನವೆತ್ತ ರಾಜ್ಯಪಾಲರು ಹೊರಡಿಸಿದ ಆದೇಶ ಈ ಕೃತಿಯ ಬಗ್ಗೆ ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಲಾಗಿದ್ದರೂ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.

ದೇವರ ದಾಸಿಮಯ್ಯ ಮರು ಚಿಂತನೆ ಎಂಬ ಮುಚ್ಚಿದ ಲಕೋಟೆಯಲ್ಲಿ ಪ್ರೊ ವಾಸುದೇವ ಬಡಿಗೇರ ಅವರು ಬಸವಣ್ಣನವರನ್ನು ವಿಶ್ವಕರ್ಮ ಎಂತಲೂ ಬಸವ ಸಮಕಾಲೀನ ಅನೇಕ ಶರಣರನ್ನು ಬಸವ ಪೂರ್ವಯುಗದ ಶರಣರು ಎಂದು ಅತ್ಯಂತ ಗೊಂದಲ ಸೃಷ್ಟಿಸುವ ಸ್ವಯಂ ಶೋಧನೆ ಮಾಡಿ ಅದನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ಪ್ರಕಟ ಮಾಡಿದ್ದಾರೆ.

ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಇಬ್ಬರೂ ಬೇರೆ ಬೇರೆ ಎಂಬ ಅತ್ಯಂತ ಸತ್ಯ ಸಂಗತಿ ತಿರುಚಿ ಮನಸ್ಸಿಗೆ ಬಂದಂತೆ ಏನೇನೋ ಬರೆದು ಸಮಗ್ರ ವಚನ ಕ್ರಾಂತಿಗೆ ದ್ರೋಹ ಬಗೆದಿದ್ದಾರೆ.

ದೇವರ ದಾಸಿಮಯ್ಯ ಮರುಚಿಂತನೆ -ಪ್ರೊ ವಾಸುದೇವ ಬಡಿಗೇರ ಅವರ ಕೃತಿಯನ್ನು ಕನ್ನಡ ವಿಶ್ವ ವಿದ್ಯಾಲಯ ಹಂಪಿಯ ಪ್ರಸಾರಂಗದಿಂದ ಪ್ರಕಟಗೊಂಡ ಕೃತಿಯಾಗಿದೆ. 238 ಪುಟಗಳ ಈ ಕೃತಿಯ ಈ ಕೃತಿಯನ್ನು ಪ್ರಕಟಗೊಳಿಸಿದವರು ಡಾ ಎಚ್ ಡಿ ಪ್ರಶಾಂತ ನಿರ್ದೇಶಕರು ಪ್ರಸಾರಾಂಗ ಕನ್ನಡ ವಿಶ್ವ ವಿದ್ಯಾಲಯ ಹಂಪಿ.

ಇಂತಹ ಅಪ್ರಬುದ್ಧ ಹುರುಳಿಲ್ಲದ ಬಸವ ಭಕ್ತರ ಭಾವನೆಗೆ ಧಕ್ಕೆ ಉಂಟು ಮಾಡುವ ಜನರಲ್ಲಿ ಗೊಂದಲ ಉಂಟು ಮಾಡುವ ಕೃತಿಗಳ ಪ್ರತಿಬಂಧದ ಮಾನ್ಯ ಕುಲಪತಿಗಳು ಕುಲಸಚಿವರು ಈ ಕೂಡಲೇ ನಿರ್ಣಯ ತೆಗೆದುಕೊಳ್ಳಬೇಕು

ನಮ್ಮ ಬೇಡಿಕೆ
—————————
ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಮತ್ತು ಇತರ ಅನೇಕ ಬಸವ ಪರ ಸಂಘಟನೆಗಳಿಂದ ಮತ್ತು ನೂರಕ್ಕೂ ಅಧಿಕ ಜನರು ಮಾನ್ಯ ಕುಲಪತಿಗಳು ಕುಲಸಚಿವರು ಮತ್ತು ಘನವೆತ್ತ ಮಾನ್ಯ ರಾಜ್ಯಪಾಲರಿಗೆ ಇಂತಹ ವಿವಾದಾಸ್ಪದ ಕೃತಿಯ ಕುರಿತು ಮತ್ತು ಪ್ರೊ ವಾಸುದೇವ ಬಡಿಗೇರ ಅವರ ಮೇಲೆ ಕಟ್ಟು ನಿಟ್ಟಿನ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಪತ್ರ ಬರೆದಿದ್ದಾರೆ .

ಘನವೆತ್ತ ರಾಜ್ಯಪಾಲರೂ ಸಹಿತ ಮಾನ್ಯ ಕುಲಪತಿಗಳು ಕನ್ನಡ ವಿಶ್ವ ವಿದ್ಯಾಲಯ ಹಂಪಿ ಇವರಿಗೆ ಪ್ರೊ ವಾಸುದೇವ ಬಡಿಗೇರ ಅವರ ದೇವರ ದಾಸಿಮಯ್ಯ ಮರು ಚಿಂತನೆ ಕುರಿತು ಪ್ರಮಾದಗಳ ತನಿಖೆ ನಡೆಸಿ ಸೂಕ್ತ ಕ್ರಮವನ್ನು ತೆಗೆದುಕೊಳ್ಳಲು ಹೇಳಿದ್ದಾರೆ, ಇಲ್ಲಿಯವರೆಗೆ ಅಂತಹ ಯಾವುದೇ ಪ್ರಗತಿಯನ್ನು ಕಂಡಿಲ್ಲ.

1 ಪ್ರೊ ವಾಸುದೇವ ಬಡಿಗೇರ ಅವರು ತಮ್ಮ ಅಪ್ರಬುಧ್ಧ ಸಂಶೋಧನೆ ಪ್ರಕಟಣೆಗೆ ಬಸವ ಭಕ್ತರ ಸಾರ್ವಜನಿಕ ಕ್ಷಮೆ ಕೇಳಬೇಕು

2 ಕನ್ನಡ ವಿಶ್ವ ವಿದ್ಯಾಲಯ ದೇವರ ದಾಸಿಮಯ್ಯ ಮರು ಚಿಂತನೆಯ ಕೃತಿಯ ಕುರಿತು ಸತ್ಯ ಶೋಧ ತಜ್ಞರ ಸಮಿತಿ ರಚಿಸಿ ಒಂದು ತಿಂಗಳೊಳಗಾಗಿ ವರದಿಯನ್ನು ಪಡೆಯಬೇಕು. ಸತ್ಯಾಸತ್ಯತೆಯನ್ನು ಘನವೆತ್ತ ರಾಜ್ಯಪಾಲರಿಗೆ , ಕನ್ನಡ ಸಾಹಿತ್ಯ ಪರಿಷತ್ತಿಗೆ , ಪ್ರಸಾರಾಂಗ ಕನ್ನಡ ವಿಶ್ವ ವಿದ್ಯಾಲಯ ಹಂಪಿ ಇವರಿಗೆ ಸಲ್ಲಿಸ ಬೇಕು. ಈ ಕೃತಿಯನ್ನು ಹಿಂದೆ ಪಡೆಯಬೇಕು

3 ಪ್ರಸಾರಂಗವು ಇಂತಹ ವಿವಾದಾಸ್ಪದ ಕೃತಿಯನ್ನು ಪ್ರಕಟಿಸುವ ಮುನ್ನ ತನ್ನ ಜವಾಬ್ದಾರಿಯನ್ನು ಎಚ್ಚರದಿಂದ ನಿಭಾಯಿಸಬೇಕು .

ಒಂದು ವೇಳೆ ಕನ್ನಡ ವಿಶ್ವ ವಿದ್ಯಾಲಯದ ಮಾನ್ಯ ಕುಲಪತಿಗಳು , ಕುಲಸಚಿವರು ಮೇಲ್ಕಂಡ ವಿನಮ್ರ ಬೇಡಿಕೆಗಳನ್ನು ಆದಷ್ಟು ಬೇಗನೆ ಇತ್ಯರ್ಥಗೊಳಿಸದಿದ್ದರೆ ನಮ್ಮ ಬಸವ ಪರ ಸಂಘಟನೆಗಳ ಕಾರ್ಯಕರ್ತರು ತಜ್ಞರೊಂದಿಗೆ ಕನ್ನಡ ವಿಶ್ವವಿದ್ಯಾಲಕ್ಕೆ ಬಂದು ಸಂಬಂಧಿತ ಅಧಿಕಾರಿಗಳ ಜೊತೆಗೆ ಚರ್ಚಿಸುತ್ತೇವೆ. ಅನಿವಾರ್ಯವೆನಿಸಿದಲ್ಲಿ ಪ್ರತಿಭಟನೆಯನ್ನು ಮಾಡುತ್ತೇವೆ ಎಂದು ಈ ಮೂಲಕ ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಲು ಇಚ್ಛೆ ಪಡುತ್ತೇವೆ

ಡಾ.ಶಶಿಕಾಂತ ರುದ್ರಪ್ಪ ಪಟ್ಟಣ, ರಾಮದುರ್ಗ, ಪುಣೆ       ಅಧ್ಯಕ್ಷರು, ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ, ಪುಣೆ                        9552002338  

( ಇಲ್ಲಿ ವ್ಯಕ್ತಪಡಿಸಲಾದ ಅಭಿಪ್ರಾಯಗಳು ಲೇಖಕರ ಸ್ವಂತ ಅಭಿಪ್ರಾಯಗಳು. ನಿಮ್ಮ ಪ್ರತಿಕ್ರಿಯೆಗಳನ್ನು 9448863309 ಇಲ್ಲಿಗೆ ವಾಟ್ಸಪ್ ಮಾಡಬಹುದು – ಸಂ. )

 

Latest articles

More like this