Homeಸುದ್ದಿಗಳುಹಳ್ಳೂರ ಗ್ರಾಮದಲ್ಲಿ ತಹಶೀಲ್ದಾರ ಶ್ರೀಶೈಲ ಗುಡುಮೆ ನೇತೃತ್ವದಲ್ಲಿ ಯಶಸ್ವಿ ‘ಪ್ರಜಾಸೇವೆ ಅಭಿಯಾನ’

ಹಳ್ಳೂರ ಗ್ರಾಮದಲ್ಲಿ ತಹಶೀಲ್ದಾರ ಶ್ರೀಶೈಲ ಗುಡುಮೆ ನೇತೃತ್ವದಲ್ಲಿ ಯಶಸ್ವಿ ‘ಪ್ರಜಾಸೇವೆ ಅಭಿಯಾನ’

Published on

ಗ್ರಾಮಸ್ಥರಿಂದ ಒಟ್ಟು 42 ಅರ್ಜಿಗಳ ಸಲ್ಲಿಕೆ

ಹಳ್ಳೂರ – ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಪ್ರಜಾಸೇವೆ ಅಭಿಯಾನ’ ಸಭೆಯು ಮೂಡಲಗಿ ತಾಲೂಕಿನ ಅರಭಾವಿ ಹೋಬಳಿಯ ಹಳ್ಳೂರ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಿ ದೇವಸ್ಥಾನದ ಆವರಣದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.

ಮೂಡಲಗಿ ತಹಶೀಲ್ದಾರ್ ಹಾಗೂ ತಾಲೂಕಿನ ಕಾರ್ಯನಿರ್ವಾಹಕ ದಂಡಾಧಿಕಾರಿಗಳಾದ ಶ್ರೀಶೈಲ ಗುಡುಮೆ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಅಭಿಯಾನದಲ್ಲಿ, ಸಾರ್ವಜನಿಕರಿಂದ ವಿವಿಧ ಬೇಡಿಕೆ ಹಾಗೂ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ಒಟ್ಟು 42 ಅರ್ಜಿಗಳು ಸ್ವೀಕೃತವಾದವು. ತಾಲೂಕು ಮತ್ತು ಹೋಬಳಿ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳ ವೃಂದದವರು ಈ ಸಭೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು.

ಗ್ರಾಮಸ್ಥರ ಪ್ರಮುಖ ಬೇಡಿಕೆಗಳು:
ಅಭಿಯಾನದಲ್ಲಿ ಹಳ್ಳೂರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡು, ತಮ್ಮ ಗ್ರಾಮ ಎದುರಿಸುತ್ತಿರುವ ಹಲವು ಜ್ವಲಂತ ಸಮಸ್ಯೆಗಳನ್ನು ಅಧಿಕಾರಿಗಳ ಮುಂದೆ ಮುಕ್ತವಾಗಿ ತೋಡಿಕೊಂಡರು. ಸ್ವೀಕೃತವಾದ 42 ಅರ್ಜಿಗಳಲ್ಲಿ ಪ್ರಮುಖವಾಗಿ ಈ ಕೆಳಗಿನ ಬೇಡಿಕೆಗಳನ್ನು ಈಡೇರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು.

* ಸಾರಿಗೆ ಸೌಕರ್ಯ: ಗ್ರಾಮಕ್ಕೆ ಸಮರ್ಪಕವಾದ ಸರ್ಕಾರಿ ಬಸ್ ಸೌಕರ್ಯವನ್ನು ಕಲ್ಪಿಸಬೇಕು.
* ವಿದ್ಯುತ್ ಪೂರೈಕೆ: ಗ್ರಾಮೀಣ ಭಾಗಕ್ಕೆ ನಿರಂತರ ಹಾಗೂ ಸರಿಯಾದ ಕ್ರಮದಲ್ಲಿ ವಿದ್ಯುತ್ ಸರಬರಾಜು ಮಾಡಬೇಕು.
* ಸಾಮಾಜಿಕ ಭದ್ರತೆ: ಅರ್ಹ ಫಲಾನುಭವಿಗಳಿಗೆ ವೃದ್ಧಾಪ್ಯ, ವಿಧವಾ ಹಾಗೂ ವಿಕಲಚೇತನ ಪಿಂಚಣಿ ಯೋಜನೆಗಳನ್ನು ಶೀಘ್ರವಾಗಿ ತಲುಪಿಸಬೇಕು.
* ಸುರಕ್ಷತೆ: ಗ್ರಾಮದ ಸುರಕ್ಷತೆಯ ದೃಷ್ಟಿಯಿಂದ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳು ನಿರಂತರವಾಗಿ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕು.
* ಆರೋಗ್ಯ ಮತ್ತು ಮೂಲಸೌಕರ್ಯ: ಗ್ರಾಮಸ್ಥರ ಆರೋಗ್ಯ ರಕ್ಷಣೆಗೆ ಸೂಕ್ತ ವೈದ್ಯಕೀಯ ಸೌಲಭ್ಯ ಒದಗಿಸಬೇಕು ಹಾಗೂ ಹದಗೆಟ್ಟಿರುವ ರಸ್ತೆಗಳ ಸುಧಾರಣೆ ಮತ್ತು ಹೊಸ ರಸ್ತೆಗಳ ನಿರ್ಮಾಣವಾಗಬೇಕು.
* ಶಿಕ್ಷಣ: ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಶಿಕ್ಷಣ ಇಲಾಖೆಯು ಹೆಚ್ಚಿನ ಪ್ರೋತ್ಸಾಹ ಮತ್ತು ಸೌಲಭ್ಯ ನೀಡಬೇಕು.

ಅಧಿಕಾರಿಗಳಿಗೆ ತಹಶೀಲ್ದಾರ್ ಖಡಕ್ ಸೂಚನೆ:
ಸಾರ್ವಜನಿಕರಿಂದ ಬಂದ ಈ ಎಲ್ಲಾ 42 ಅರ್ಜಿಗಳನ್ನು ಸ್ಥಳದಲ್ಲಿಯೇ ಐಪಿಜಿಆರ್‌ಎಸ್ (IPGRS) ತಂತ್ರಾಂಶದಲ್ಲಿ ದಾಖಲಿಸಿಕೊಳ್ಳಲಾಯಿತು. ಸಾರ್ವಜನಿಕರ ಅಹವಾಲುಗಳನ್ನು ಆಯಾ ಇಲಾಖೆಯ ಅಧಿಕಾರಿಗಳು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಕಾಲಮಿತಿಯೊಳಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಹಶೀಲ್ದಾರ್ ಶ್ರೀಶೈಲ ಗುಡುಮೆ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ವಿವಿಧ ಇಲಾಖೆಗಳ ಭಾಗಿ:
ಸರ್ಕಾರದ ಸುತ್ತೋಲೆಯನ್ವಯ ತಾಲೂಕು ಪಂಚಾಯತ್, ಭೂ ದಾಖಲೆಗಳ ಇಲಾಖೆ, ಶಿಕ್ಷಣ, ಆರೋಗ್ಯ, ಕೃಷಿ, ತೋಟಗಾರಿಕೆ, ಸಮಾಜ ಕಲ್ಯಾಣ, ರೇಷ್ಮೆ, ಅರಣ್ಯ, ಪೊಲೀಸ್ ಹಾಗೂ ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಮುಖ ಅಧಿಕಾರಿಗಳು ತಮ್ಮ ಇಲಾಖೆಯ ಅಗತ್ಯ ಮಾಹಿತಿಗಳೊಂದಿಗೆ ಸಭೆಗೆ ಹಾಜರಾಗಿದ್ದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪ್ರಕಾಶ ಹಿರೇಮಠ, ಉಪ ತಹಶೀಲ್ದಾರ್ ಪರಸಪ್ಪ ನಾಯ್ಕ, ಕಂದಾಯ ನಿರೀಕ್ಷಕ ಸುರೇಶ ತುಪ್ಪದ, ವೈದ್ಯಾಧಿಕಾರಿಗಳಾದ ಡಾ. ಭಾರತಿ ಕೋಣಿ, ಕಾರ್ಯನಿರ್ವಾಹಕ ಅಧಿಕಾರಿ ಪ್ರಸನ್ನ ನೆರ್ಲೀಕರ್, ಪಿಎಸ್ಐ ರಾಜೀವ್ ಪೂಜಾರಿ, ಬಿ ಎಲ್ ನಿಲಾಲಿಜ್ಯೋತಿ. ಎಂ ಎಲ್ ಜಿಣಮಟ್ಟಿ. ಗೋ ತಾ ಪ ಪಂ ಕ ಅಧಿಕಾರಿ ಎಸ್ ಕೆ ಆಸಂಗಿ.ಸಮಾಜ ಕ.ಸ.ನಿ ನಿರ್ದೇಶರಾದ ಎಂ ಎಸ್ ಪಾಟಿಲ. .ಪಿ ವಿ ಮಾವರಕರ. ಎಸ್ ಎಸ್ ನಾಯ್ಕ್. ಎಸ್ ಎಸ್ ಸೊರಗಾಂವಿ. ಡಾ ವಿಶ್ವನಾಥ ಹುಕ್ಕೇರಿ. ಡಾ ಎಂ ಎಸ್ ಹಂಚಿನಾಳ. ಬಸನಗೌಡ ಈಶ್ವರಪ್ಪಗೋಳ.ಮಹಾಂತೇಶ ಹಿಪ್ಪರಗಿ. ಎಂ ಎಸ್ ನಾಗನ್ನವರ. ಎಚ್ ಎನ್ ಮುರನಾಳ. ಮುಜಸ್ಮಾ ಪಿರಜಾದೆ. ರೇಣುಕಾ ಗುಡದರಿ. ಸುರೇಶ್ ಮುಧೋಳ.ಮಾಂತೇಶ ಕರಿಗಾರ. ಸುನೀಲ ದೇಸಾಯಿ. ನವೀನ ಕೌಜಲಗಿ.ರಂಗಣ್ಣ ಗುಜನಟ್ಟಿ. ಸಂಜು ಅಗ್ನೇಪ್ಪಗೊಳ.ಸೇರಿದಂತೆ ಅನೇಕರಿದ್ದರು.

ಕಾರ್ಯಕ್ರಮವನ್ನು ಮುರಿಗೆಪ್ಪ ಮಾಲಗಾರ ಸ್ವಾಗತಿಸಿ,  ಪರಸಪ್ಪ ನಾಯ್ಕ ನಿರೂಪಿಸಿದರು.

Latest articles

More like this