Homeಸುದ್ದಿಗಳುಗಣೇಶ ವಿಸರ್ಜನೆಯನ್ನು ಭಾವೈಕ್ಯತೆಯಿಂದ ಆಚರಿಸಿ -  ಮಹಾಂತ ಶ್ರೀ

ಗಣೇಶ ವಿಸರ್ಜನೆಯನ್ನು ಭಾವೈಕ್ಯತೆಯಿಂದ ಆಚರಿಸಿ –  ಮಹಾಂತ ಶ್ರೀ

Published on

ಸಿಂದಗಿ: ಜ್ಯಾತ್ಯತೀತ ರಾಷ್ಟ್ರ ನಮ್ಮದು ಗಣೇಶ ಪ್ರತಿಷ್ಠಾಪನೆ ಸ್ವಾತಂತ್ರ ಪೂರ್ವದಿಂದಲೂ ನಡೆದುಕೊಂಡು ಬಂದಿದೆ ಗಣೇಶ ವಿಸರ್ಜನೆಯನ್ನು ಭಾವೈಕ್ಯತೆಯಿಂದ ವಿಸರ್ಜಿಸಿ ಎಂದು ಜೇರಟಗಿ ವೀರಕ್ತಮಠ ಪೂಜ್ಯರಾದ ಶ್ರೀ ಮಹಾಂತಸ್ವಾಮಿಜಿ ಹೇಳಿದರು.

ಮೋರಟಗಿ ಗ್ರಾಮದ ನೂರಂದೇಶ್ವರ ಕಾಲೂನಿಯಲ್ಲಿ ಶ್ರೀ ಪಂಚಮುಖಿ ಗಜಾನನ ಮಂಡಳಿ ವತಿಯಿಂದ ಹಮ್ಮಿಕೊಂಡ ನಿವೃತ್ತ ಶಿಕ್ಷಕರಿಗೆ ಸನ್ಮಾನ ಹಾಗೂ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿ ಅವರು ಮಾತನಾಡಿದರು.

ಪೂರ್ವಜರು ಹಬ್ಬ ಹರಿದಿನಗಳನ್ನು ಯಾವುದೇ ಜಾತಿಭೇದವಿಲ್ಲದೆ ಆಚರಿಸುತ್ತಿದ್ದರು ಇಂದು ಹಬ್ಬ ಹರಿದಿನಗಳಲ್ಲಿ ರಾಜಕೀಯ ಪ್ರವೇಶ ಮಾಡಿ ಧರ್ಮ ಧರ್ಮದ ಮಧ್ಯೆ ಜಗಳ ಹಚ್ಚುವ ಕಾರ್ಯ ನಡೆಯುತ್ತಿದೆ ನಾವೆಲ್ಲರೂ ಇದನ್ನು ಅರ್ಥೈಸಿಕೊಂಡು ಇದು ನಮ್ಮ ದೇಶ ನಮ್ಮ ನಾಡು ನಮ್ಮ ಊರು ನಮ್ಮ ಸಂಸ್ಕೃತಿ ನಾವೆಲ್ಲರೂ ಒಂದೇ ಎನ್ನುವ ಮನೋಭಾವನೆ ಇಟ್ಟುಕೊಂಡು ಒಗ್ಗಟ್ಟಿನಿಂದ ಹಬ್ಬ ಹರಿದಿನಗಳನ್ನು ಆಚರಿಸಬೇಕು ಗಣೇಶ ವಿಸರ್ಜನೆಗೆ ಕೆಲವೊಂದು ಕಾನೂನು ನಿಮ್ಮ ನಿಯಮಾವಳಿಗಳಿವೆ ಅಧಿಕಾರಿಗಳಿಗೆ ಭೇಟಿ ನೀಡಿ ಎಲ್ಲ ಮಾಹಿತಿಯನ್ನು ಪಡೆದುಕೊಳ್ಳಬೇಕು ಯಾರು ಕಾನೂನು ಕೈಗೆ ತೆಗೆದುಕೊಳ್ಳಬಾರದು ಅದರ ಜೊತೆಗೆ ಹಿರಿಯರ ಮಾರ್ಗದರ್ಶನ ಪಡೆದುಕೊಂಡು ಕೆರೆ ಅಥವಾ ಬಾವಿಯಲ್ಲಿ ಗಣೇಶ ವಿಸರ್ಜನೆ ಮಾಡುವಾಗ ಚಿಕ್ಕ ಮಕ್ಕಳು ಬರದ ಹಾಗೆ ನೋಡಿಕೊಳ್ಳುವುದು ಕಮಿಟಿಯವರು ಜವಾಬ್ದಾರಿಯಿಂದ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಮಧ್ಯದಲ್ಲಿ ಪಂಚಮುಖಿ ಗಜಾನನ ಮಂಡಳಿ ವತಿಯಿಂದ ನಿವೃತ್ತ ಶಿಕ್ಷಕರಿಗೆ ಹಾಗೂ ಪೂಜ್ಯರಿಗೆ ಮತ್ತು ಪ್ರಗತಿಪರ ರೈತರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಶಾಲಾ ಮಕ್ಕಳಿಂದ ವಿವಿಧ ರೀತಿಯ ಮನರಂಜನೆ ನೃತ್ಯ ಕಾರ್ಯಕ್ರಮಗಳು ಅದ್ದೂರಿಯಾಗಿ ಜರುಗಿದವು.

ಇದೆ ಸಂದರ್ಭದಲ್ಲಿ ಶ್ರೀ ಬಿಳಿಯಾನಿಸಿದ್ದ ಒಡಿಯರ್, ಹಿರಿಯರಾದ ನಿಂಗನಗೌಡ ಪಾಟೀಲ್, ಬಾಗಪ್ಪಗೌಡ ಪಾಟೀಲ್, ರಮೇಶ ಬರಡೊಲ್, ಸತೀಶ ಮರಾಠೆ, ನಿರಂಜನ ತೆಗ್ಗಿನಮಠ, ಪದ್ಮರಾಜ ಪಾಟೀಲ, ಸಂತೋಷ ಸಿನ್ನೂರ, ಭೀಮನಗೌಡ ಪಾಟೀಲ, ಸೇರಿದಂತೆ ಶ್ರೀ ಪಂಚಮುಖಿ ಗಜಾನನ ಮಂಡಳಿ ಹಾಗೂ ಗ್ರಾಮಸ್ಥರು ಇದ್ದರು.

 

Latest articles

More like this