Homeಸುದ್ದಿಗಳುಅನ್ನನೀಡುವ ಕೈಗೆ ಯಾವಾಗಲೂ ಅನ್ನ ಕಡಿಮೆ ಆಗುವುದಿಲ್ಲ: ಸುಭಾಷ ಮುಧೋಳ

ಅನ್ನನೀಡುವ ಕೈಗೆ ಯಾವಾಗಲೂ ಅನ್ನ ಕಡಿಮೆ ಆಗುವುದಿಲ್ಲ: ಸುಭಾಷ ಮುಧೋಳ

Published on

ಬೆಟಗೇರಿ: ಜನ ಮೆಚ್ಚುಗೆಗೆ ಪಾತ್ರವಾದ ಇಲ್ಲಿಯ ಗಜಾನನ ಗೆಳೆಯರ ಬಳಗದವರು ಹಲವು ವರ್ಷಗಳಿಂದ ಡಾ. ಅಂಬೇಡ್ಕರ ವ್ರತ್ತದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಭಯ, ಭಕ್ತಿಯಿಂದ ಪೂಜಿಸಿ ಗಣಪತಿಯ ಕೃಪೆಗೆ ಪಾತ್ರರಾಗುತ್ತಿರುವ ಸೇವಾಕಾರ್ಯ ಮೆಚ್ಚುವಂತಹದಾಗಿದೆ ಎಂದು ಬೆಟಗೇರಿ ಯುವ ಧುರೀಣ ಸುಭಾಷ ಮುಧೋಳ ಹೇಳಿದರು.

ಗೋಕಾಕ ತಾಲೂಕಿನ ಬೆಟಗೇರಿ ಗಜಾನನ ಗೆಳೆಯರ ಬಳಗದವರ ಸಹೋಗದಲ್ಲಿ ಸ್ಥಳೀಯ ಡಾ.ಬಿ.ಆರ್.ಅಂಬೇಡ್ಕರ ವೃತ್ತದಲ್ಲಿ ಪ್ರತಿಷ್ಠಾಪಿಸಿದ ಗಣಪತಿ ಮೂರ್ತಿ ಪ್ರಯುಕ್ತ ಸೆ.೧೯ರಂದು ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಅನ್ನನೀಡುವ ಕೈಗೆ ಯಾವಾಗಲೂ ಅನ್ನ ಕಡಿಮೆ ಆಗುವುದಿಲ್ಲ, ಎಲ್ಲರೂ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಅನ್ನ ನೀಡುವ ಪ್ರವೃತ್ತಿ ಮೈಗೂಡಿಸಿಕೊಳ್ಳಬೇಕು ಎಂದರು.

ಸೆ.೧೪ರಿಂದ ಸೆ.೨೦ ತನಕ ಸತತ ೭ದಿನಗಳ ಕಾಲ ಮುಂಜಾನೆ-ಸಂಜೆ ಸಮಯ ಪ್ರತಿಷ್ಠಾಪಿಸಿದ ಗಣೇಶನಿಗೆ ಪೂಜೆ-ಪುನಸ್ಕಾರ, ಆರಾಧನೆ ಭಕ್ತಿಯಿಂದ ಜರುಗಿತು. ಸೆ.೧೯ರಂದು ಮಧ್ಯಾಹ್ನ ೧೨ಗಂಟೆಯಿಂದ ಸಾಯಂಕಾಲ ೪ ಗಂಟೆ ತನಕ ಸಕಲರಿಗೂ ಅನ್ನಪ್ರಸಾದ ಕಾರ್ಯಕ್ರಮ ಜರುಗಿತು. ಸೆ.೨೦ರಂದು ರಾತ್ರಿ ೧೦ಗಂಟೆಗೆ ಗಣೇಶ ಮೂರ್ತಿ ವಿಸರ್ಜನೆ ಸಡಗರದಿಂದ ನಡೆಯಲಿದೆ.

ಈ ವೇಳೆ  ಸದಾಶಿವ ದಂಡಿನ, ಸಂತೋಷ ಕುಡಚಿ, ಚೆನ್ನಪ್ಪ ದಂಡಿನ, ಶಂಕರ ಕಡಕಭಾಂವಿ, ಮಲ್ಲಿಕಾರ್ಜುನ ದಂಡಿನ, ಶಿವಾನಂದ ಮುಧೋಳ, ಈರಪ್ಪ ದೇಯಣ್ಣವರ, ಪ್ರಕಾಶ ಹಾದಿಮನಿ, ಈಶ್ವರ ಮೇಳೆಣ್ಣವರ, ರಾಜು ದಂಡಿನ, ಮಲ್ಲಿರ್ಕಾಜುನ ಬಳಿಗಾರ, ಚಂದು ಕುಡಚಿ, ರಮೇಶ ದೇಯಣ್ಣವರ, ರವಿ ಬೆನ್ನಾಳೆ, ರಮೇಶ ಬಳಿಗಾರ, ಶಂಕರ ಮುಧೋಳ, ವಿನೋದ ಬಳಿಗಾರ, ಇಲ್ಲಿಯ ಗಜಾನನ ಗೆಳೆಯರ ಬಳಗದ ಪದಾಧಿಕಾರಿಗಳು, ಯುವಕರು, ಸ್ಥಳೀಯರು ಇದ್ದರು.

ವರದಿ : ಅಡಿವೇಶ ಮುಧೋಳ

Latest articles

More like this