ಸಿಂದಗಿ: ಬಾಗಿಲಿಗೆ ಬಂತು ಸರಕಾರ ಸೇವೆಗೆ ಇರಲಿ ಸಹಕಾರ ಎಂಬ ದೇವ ವಾಕ್ಯದೊಂದಿಗೆ ಮಾನ್ಯ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಕನಸ್ಸಿನ ಕೂಸಾದ ಪ್ರಜಾಸೇವೆ ಮಹತಾಂಕ್ಷಿ ಯೋಜನೆಗೆ ಅಧಿಕಾರಿಗಳು ಸದ್ಬಾವನೆಯಿಂದ ಕಾರ್ಯನಿರ್ವಹಿಸಿದರೆ ಜನರ ಕಣ್ಣೀರು ಒರೆಸುವಂತಾಗಿದ್ದು ಅರ್ಜಿ ಸಲ್ಲಿಸಿದ ಮೂರು ತಿಂಗಳಲ್ಲಿ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬೇಕು ಇಲ್ಲದಿದ್ದರೆ ಆ ಅಧಿಕಾರಿಯನ್ನು ಸೇವೆಯಿಂದ ಅಮಾನತ್ತುಗೊಳಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ.ಪಾಟೀಲರು ಖಡಕ್ ಎಚ್ಚರಿಕೆ ನೀಡಿದರು.
ನಗರದ ಮಾಂಗಲ್ಯ ಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ, ನಗರಸಭೆ ಸಿಂದಗಿ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡ ಪ್ರಜಾಸೇವೆ ಆಂದೋಲನಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ, ಜನರು ನೀಡಿದ ಅರ್ಜಿಗಳಿಗೆ ಗ್ರಾಪಂ ಯಿಂದ ತಾಲೂಕು ಮಟ್ಟದ ಅಧಿಕಾರಿಗಳಲ್ಲಿಯೇ ಇತ್ಯರ್ಥಗೊಳ್ಳುತ್ತವೆ. ಇಲ್ಲದಿದ್ದರೆ ಜಿಲ್ಲಾ ಹಂತದಲ್ಲಿ ಬಗೆಹರಿಸಿ ಜನತೆ ಅನುಕೂಲ ಮಾಡಿ ಎಂದು ಹೇಳೀದ ಅವರು, ಚಿಮ್ಮಲಗಿ, ಏತ ನೀರಾವರಿ ಯೋಜನೆಯ ಕಾಲುವೆ ಅರ್ಧಕ್ಕೆ ನಿಂತಿದೆ ಎನ್ನುವ ರೈತರ ಪ್ರಶ್ನೆಯಾಗಿದ್ದು ಕೂಡಲೇ ಅಧಿಕಾರಗಳ ಜೊತೆ ಸಮಾಲೋಚನೆ ನಡೆಸಿ ನೀರಾವರಿ ಸಚಿವರಲ್ಲಿ ಮನವಿ ಮಾಡಿಕೊಂಡು ಅನುದಾನಕ್ಕೆ ಒತ್ತಾಯಿಸಲಾಗುವುದು. ಕಾನೂನು ಚೌಕಟ್ಟಿನಲ್ಲಿ ಸಮಸ್ಯೆಗಳಿದ್ದರೆ ಜನರು ಅದಿಕಾರಗಳ ಹತ್ತಿರ ಬರೊದಿಲ್ಲ. ಮಾನವೀಯತೆ ದೃಷ್ಠಿಯಿಂದ ಸಮಸ್ಯೆಗೆ ಸ್ಪಂದಿಸಿ ಎಂದರು.
ಶಾಸಕ ಅಶೋಕ ಮನಗೂಳಿ ಮಾತನಾಡಿ, ಸರಕಾರ ಕೆಲ ತಿಂಗಳ ಹಿಂದೆ ೮೪೨ರಲ್ಲಿರುವ ೮೨ ಫಲಾನುಭವಿಗಳು ಮನೆ ಕಳೆದುಕೊಂಡಿದ್ದು ಪಟ್ಟಣದಲ್ಲಿ ೫೫೦ ನಿವೇಶನ ಹಂಚಿಕೆಯಲ್ಲಿ ಅವರಿಗೆ ಮೊದಲ ಆದ್ಯತೆ ನೀಡುತ್ತೇನೆ ಅಲ್ಲದೆ ಅವರಿಗೆ ಮನೆ ಕಟ್ಟಿಕೊಳ್ಳಲು ವಿಶೇಷ ಅನುದಾನ ತಂದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಾಗಿ ಹೇಳುತ್ತ ಈ ಬಾಗದಲ್ಲಿ ಕೆರೆ ತುಂಬುವ ಯೋಜನೆ ಇನ್ನೂ ಪರಿಪೂರ್ಣವಾಗಿಲ್ಲ ಮತ್ತು ಈ ಕ್ಷೇತ್ರದಲ್ಲಿ ೨೭೦ ಎಕರೆ ಸರಕಾರಿ ಜಮೀನು ಅಲ್ಲಿ ಈ ಬಾಗದ ಯುವಕರಿಗೆ ಉದ್ಯೋಗ ಸೃಷ್ಠಿವಂತ ಬ್ರಹತ್ ಕೈಗಾರಿಗೆ ಘಟಕ ಸ್ಥಾಪಿಸುವಂತೆ ಹಾಗೂ ಪಟ್ಣಣದ ಜನದಟ್ಟ ಕಡಿಮೆ ಮಾಡಲು ಸಿಂದಗಿಗೆ ರಿಂಗ್ ರೋಡ ವ್ಯವಸ್ಥೆ ಅತ್ಯವಶ್ಯಕವಾಗಿದೆ ಎಂದು ಸಚಿವರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ೬೦ ಅರ್ಜಿಗಳ ಪೈಕಿ ೩೦ ಅರ್ಜಿಗಳನ್ನು ಅವಲೋಕಿಸಿ ಪರಿಹಾರ ಕಂಡುಕೊಳ್ಳಲಾಯಿತು.
ನಗರ ಸುಧಾರಣಾ ಸಮಿತಿ ಅಧ್ಯಕ್ಷ ಅಶೋಕ ಅಲ್ಲಾಪುರ ಮಾತನಾಡಿ, ರಮಾನಂದ ತೀರ್ಥರ ಸ್ಮಾರಕ ಭವನಕ್ಕೆ ಕಾಯಕಲ್ಪ ನೀಡಲು ವಿಶೇಷ ಅನುದಾನ ನೀಡಿ ಗ್ರಂಥಾಲಯ ಮಾಡುವಂತೆ ಆಗ್ರಹಿಸಿದರು.
ಸಾಯಬಣ್ಣ ಪುರದಾಳ ಮಾತನಾಡಿ, ಈ ಬಾಗದ ರೈತರ ಕಬ್ಬು ಸೇರಿದಂತೆ ವಿವಿಧ ಸಲಕರಣೆ ಸಾಗಿಸಲು ರಿಂಗ ರಸ್ತೆ ಮಂಜೂರು ಮಾಡುವಂತೆ ಮನವಿ ಮಾಡಿಕೊಂಡರು.
ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಅಹವಾಲು ಸ್ವೀಕರಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸಿದರು.
ಈ ವೇಳೆ ಜಿಲ್ಲಾಧಿಕಾರಿ ಕೆ.ಆನಂದ, ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ, ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ಸಂತೋಷ ಸಾಲಿ ವೇದಿಕೆ ಮೇಲಿದ್ದರು.
ಜ್ಞಾನಭಾರತಿ ವಿಧ್ಯಾರ್ಥಿನಿಯರು ಒಂದೇ ಮಾತರಂ ಗೀತೆ ಹಾಗೂ ನಾಡಗೀತೆ ಹಾಡಿದರು. ತಹಶೀಲ್ದಾರ ಕರೆಪ್ಪ ಬೆಳ್ಳಿ ಸ್ವಾಗತಿಸಿದರು. ಶಿಕ್ಷಕ ಎಂ.ಆರ್.ಡೋಣಿ ನಿರೂಪಿಸಿದರು. ತಾಪಂ ಎಇಇ ಅನೀಲ ಹಳ್ಳಿ ವಂದಿಸಿದರು.