ಹಳ್ಳೂರ – ಕೃಷ್ಣಾ ಸಹಕಾರ ಸಕ್ಕರೆ ಕಾರ್ಖಾನೆಯ ರೈತ ಭವನ ಅಥಣಿಯಲ್ಲಿ ನಡೆದ 73ನೇ ಸಹಕಾರ ಸಪ್ತಾಹ ಆಚರಣೆ-2026 ಹಾಗೂ ಹೊಸದಾಗಿ ಸ್ಥಾಪನೆಯಾದ ಸಹಾಯಕ ನಿಬಂಧಕರ ಕಛೇರಿ ಉದ್ಘಾಟನಾ ಸಮಾರಂಭದಲ್ಲಿ ಉತ್ತಮ ರೀತಿಯ ಸಹಕಾರ ಸಾರ್ವಜನಿಕರ ಜೊತೆ ಒಳ್ಳೆಯ ವ್ಯವಹಾರ ಮತ್ತು ಆಡಳಿತವನ್ನು ಗುರುತಿಸಿ ಕರ್ನಾಟಕ ಕ್ರೆಡಿಟ್ ಸೌಹಾರ್ಧ ಸಹಕಾರಿ ಸಂಘ ಹಳ್ಳೂರ ಸಂಘಕ್ಕೆ”ಬೆಳಗಾವಿ ಜಿಲ್ಲೆಯ ಉತ್ತಮ ಸಹಕಾರಿ ಸಂಘ “ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ಸಹಕಾರ ಸಚಿವರಾದ ಲಕ್ಷ್ಮಣ್ ಸಂಗಪ್ಪ ಸವದಿ ಅವರು ಉದ್ಘಾಟಿಸಿದರು. ಅತಿಥಿಗಳಾಗಿ ಜಗದೀಶ ಕವಟಗಿಮಠ ಮಾನ್ಯ ನಿರ್ದೇಶಕರು, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಬೆಂಗಳೂರು, ರಮೇಶ್ ಕತ್ತಿ ಮಾಜಿ ಸಂಸದರು ಹಾಗೂ ಬಿಡಿಸಿಸಿ ಬ್ಯಾಂಕ ನಿರ್ದೇಶಕರು ಬೆಳಗಾವಿ. ಪರಪ್ಪ ಸವದಿ ಅಧ್ಯಕ್ಷರು ಕೃಷ್ಣ ಸಹಕಾರ ಸಕ್ಕರೆ ಕಾರ್ಖಾನೆ ಅಥಣಿ, ಬಸಗೌಡ ಪಾಟೀಲ ಅಧ್ಯಕ್ಷರು ಜಿಲ್ಲಾ ಸಹಕಾರ ಯೂನಿಯನ್ ಬೆಳಗಾವಿ, ಮುತ್ತಣ್ಣ ಕಾತ್ರಾಳ, ಅಪೇಕ್ಸ್ ಬ್ಯಾಂಕ್ ಪ್ರತಿನಿಧಿ,ಬಿಡಿಸಿ ಬ್ಯಾಂಕ್ ಬೆಳಗಾವಿ, *ಜಿ ಎಂ ಪಾಟೀಲ ವ್ಯವಸ್ಥಾಪಕ ನಿರ್ದೇಶಕರು ಕೃಷ್ಣ ಸಹಕಾರ ಸಕ್ಕರೆ ಕಾರ್ಖಾನೆ ಅಥಣಿ, *ಎನ್ ಜಿ ಕಲಾವಂತ. ಕಲ್ಲಪ್ಪ ಓಬಣ್ಣಗೊಳ ಸಹಕಾರ ಸಂಘಗಳ ಜಂಟಿ ನಿಬಂಧಕರು ಬೆಳಗಾವಿ, ರವೀಂದ್ರ ಪಾಟೀಲ್ ಸಹಕಾರ ಸಂಘಗಳ ಉಪ ನಿಬಂಧಕರು ಬೆಳಗಾವಿ ಹಾಗೂ ಬೆಳಗಾವಿ ಜಿಲ್ಲೆಯ ಎಲ್ಲ ಉಪ ವಿಭಾಗಗಳ ಸಹಾಯಕ ನಿಬಂಧಕರು ಉಪಸ್ಥಿತರಿದ್ದರು.
ಉತ್ತಮ ಸಹಕಾರ ಸಂಘಗಳಿಗೆ, ಸೌಹಾರ್ದ ಸಹಕಾರ ಸಂಘಗಳಿಗೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ, ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಸುರೇಶ ಬೆಳಗಲಿ, ಉಪಾಧ್ಯಕ್ಷ ಶಿವನಪ್ಪ ಶಿವಾಪೂರ, ಕಾರ್ಯದರ್ಶಿ ಸಂಜಯ್ ಹೊಸಟ್ಟಿ, ನಿರ್ದೇಶಕರಾದ ಸಿದ್ರಾಯ ಬೆನಚಿನಮರಡಿ, ಬಸಪ್ಪಾ ಮಾಲಗಾರ, ಬಸಪ್ಪಾ ದಾಸನ್ನವರ, ಬಸಪ್ಪಾ ಹೊಸಟ್ಟಿ, ಸದಾಶಿವ ಮಾಲಗಾರ, ಕರೆಪ್ಪ ಹನ ಗಂಡಿ ಸಿದ್ದಪ್ಪ ಮಾಳಿ, ನಿಂಗಪ್ಪ ಮಾಂಗ, ಮಂಜುಳಾ ಅಂಗಡಿ, ಸುನಂದಾ ರಗಟಿ. ಸೇರಿದಂತೆ ಪ್ರತಿನಿಧಿಗಳು ಭಾಗವಹಿಸಿದ್ದರು.