Homeಸುದ್ದಿಗಳುಮೂಡಲಗಿ ಪೊಲೀಸ್ ಠಾಣೆಗೆ ಗ್ರಾಮೀಣ ಕೂಟದಿಂದ 10 ಬ್ಯಾರಿಕೇಡ್‌ಗಳ ವಿತರಣೆ

ಮೂಡಲಗಿ ಪೊಲೀಸ್ ಠಾಣೆಗೆ ಗ್ರಾಮೀಣ ಕೂಟದಿಂದ 10 ಬ್ಯಾರಿಕೇಡ್‌ಗಳ ವಿತರಣೆ

Published on

ಮೂಡಲಗಿ: ಕ್ರೆಡಿಟ್ ಆಕ್ಸೆಸ್ ಗ್ರಾಮೀಣ ಲಿಮಿಟೆಡ್ (ಗ್ರಾಮೀಣ ಕೂಟ) ಮೂಡಲಗಿ ಶಾಖೆಯ ವತಿಯಿಂದ ಮೂಡಲಗಿ ಪೊಲೀಸ್ ಠಾಣೆಗೆ 10 ಬ್ಯಾರಿಕೇಡ್‌ಗಳನ್ನು ಗುರುವಾರ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮೀಣ ಕೂಟದ ವಲಯ ವ್ಯವಸ್ಥಾಪಕ ಚಂದ್ರಗೌಡ ಪಾಟೀಲ್ ಮಾತನಾಡಿ, ನಮ್ಮ ಪ್ರಧಾನ ಶಾಖೆಯ ವತಿಯಿಂದ ಪ್ರತಿವರ್ಷವೂ ವಿವಿಧ ಪ್ರದೇಶಗಳಲ್ಲಿ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜದ ಅಭಿವೃದ್ಧಿಗೆ ಕೈಜೋಡಿಸುವ ಕಾರ್ಯ ಮಾಡಲಾಗುತ್ತಿದೆ. ಸಾರ್ವಜನಿಕರ ಅನುಕೂಲ ಹಾಗೂ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ಪೊಲೀಸ್ ಇಲಾಖೆಗೆ ಬ್ಯಾರಿಕೇಡ್‌ಗಳನ್ನು ವಿತರಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮೂಡಲಗಿ ಪೊಲೀಸ್ ಠಾಣೆಯ ಪಿಎಸ್ಐ ಸಿದ್ದಪ್ಪ ಯಡಹಳ್ಳಿ, ಎಎಸ್ಐ ವಿ. ಎನ್.ಹೆಬ್ಬಾಳ, ಲಕ್ಷ್ಮಣ ಗೋಡೆರ, ಕಲ್ಮೇಶ ಬಗಲಿ, ಗ್ರಾಮೀಣ ಕೂಟದ ಶಾಖಾ ವ್ಯವಸ್ಥಾಪಕ ಸಚಿನ್ ಮಠದ, ಕ್ಷೇತ್ರ ಅಧಿಕಾರಿ ನಚಿಕೇತ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Latest articles

More like this