ಬೀದರ – ಬೀದರ್ನ ಎಲ್ಐಸಿ ಕಾಲನಿಯಲ್ಲಿರುವ ಜನಸೇವಾ ಖಾಸಗಿ ಶಾಲೆಯ ಶಿಕ್ಷಕರ ಕಿರುಕುಳದಿಂದ ಬೇಸತ್ತು ಹತ್ತನೇ ತರಗತಿಯ ವಿದ್ಯಾರ್ಥಿ ಶಾಲೆಯ ನಾಲ್ಕನೆಯ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಬೀದರ್ನ ಶಾಂತಿನಗರದ ನಿವಾಸಿ ಸಮೀರ್(15) ಮೃತ ಬಾಲಕನಾಗಿದ್ದು ಜನಸೇವಾ ಶಾಲೆಯ ನಾಲ್ಕನೇ ಅಂತಸ್ತಿನಿಂದ ಬಿದ್ದು ಸಾವನ್ನಪ್ಪಿದ್ದಾನೆ
ಜನಸೇವಾ ಖಾಸಗಿ ಶಾಲೆಯಲ್ಲಿ ಎಸ್ಎಸ್ಎಲ್ಸಿ ವ್ಯಾಸಂಗ ಮಾಡುತ್ತಿದ್ದ ಬಾಲಕ ಶಾಲಾ ಸಿಬ್ಬಂದಿಗಳ ಕಿರುಕುಳದಿಂದ ಸಾವನ್ನಪ್ಪಿದ್ದಾನೆಂದು ಮೃತನ ಕುಟುಂಬಸ್ಥರ ಆರೋಪ ಮಾಡಿದ್ದಾರೆ ಪ್ರತಿನಿತ್ಯ ಮೃತ ಬಾಲಕನಿಗೆ ಕಿರುಕುಳ ನೀಡುತ್ತಿದ್ದರಂತೆ, ಸಗಣಿ ತೆಗೆಸುತ್ತಿದ್ದರಂತೆ ಈ ಬಗ್ಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಶಿಕ್ಷಕಿಯರ ಮೇಲೆ ಎಫ್ಆಯ್ಆರ್ ಆಗಬೇಕು ಎಂದೆಲ್ಲ ಮೃತ ಬಾಲಕನ ಮಾವ ಹೇಳಿದ್ದಾನೆ.
ಸಂದೇಹಕ್ಕೆ ಕಾರಣವಾದ ಇನ್ನೊಂದು ಸಂಗತಿಯೆಂದರೆ, ಬಾಲಕ ಕಟ್ಟಡದಿಂದ ಬಿದ್ದ ಬಗ್ಗೆ ಮನೆಯವರಿಗೆ ಫೋನ್ ಬಂದಿದ್ದು ಅವರು ಶಾಲೆಗೆ ಬರುವಷ್ಟರಲ್ಲಿ ಬಾಲಕನ ಹೆಣವನ್ನು ನಮಗೆ ಮಾಹಿತಿ ನೀಡದೇ, ನಮ್ಮ ಅನುಮತಿ ಕೇಳದೇ ಪೋಸ್ಟ್ಮಾರ್ಟಂಗೆ ತೆಗೆದುಕೊಂಡು ಹೋಗಿದ್ದಾರೆ ಎಂದೂ ಆರೋಪ ಬಂದಿದೆ.
ಶಾಲೆಯಲ್ಲಿ ಕಿರುಕುಳ ನೀಡುತ್ತಿರುವ ಬಗ್ಗೆ ಪೋಷಕರಿಗೆ ಬಾಲಕ ತಿಳಿಸಿದ್ದನಂತೆ ಮೃತ ಬಾಲಕ ಸಮೀರ. ಬ್ರಿಮ್ಸ್ ಆಸ್ಪತ್ರೆಯ ಶವಾಗಾರದ ಮುಂದೆ ಮೃತ ಬಾಲಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ : ನಂದಕುಮಾರ ಕರಂಜೆ, ಬೀದರ