Homeಸುದ್ದಿಗಳುಹರಿದು ಬಿದ್ದ ಎಲ್ ಟಿ ವೈರ್ : ವಿದ್ಯುತ್ ಸ್ಪರ್ಶಿಸಿ ದಂಪತಿ ಸಾವು

ಹರಿದು ಬಿದ್ದ ಎಲ್ ಟಿ ವೈರ್ : ವಿದ್ಯುತ್ ಸ್ಪರ್ಶಿಸಿ ದಂಪತಿ ಸಾವು

Published on

ಮೂಡಲಗಿ – ವಿದ್ಯುತ್ ಪ್ರವಹಿಸುವ ಎಲ್ ಟಿ ಲೈನ್ ಹರಿದು ಬಿದ್ದಿದ್ದರಿಂದ ಹೊಲದಲ್ಲಿ ಕಸ ತೆಗೆಯುತ್ತಿದ್ದ ದಂಪತಿಗಳಿಬ್ಬರೂ ಮೃತಪಟ್ಟ ಆಘಾತಕಾರಿ ಘಟನೆ ನಾಗನೂರ ಗ್ರಾಮದಲ್ಲಿ ನಡೆದಿದೆ

ಮುತ್ತಪ್ಪ ಶ್ರೀಶೈಲ ಮುಗಳಖೋಡ ಹಾಗೂ ಅವರ ಪತ್ನಿ ರಾಜಶ್ರೀ ಮುಗಳಖೋಡ ವಿದ್ಯುತ್ ಸ್ಪರ್ಶದಿಂದ ಮೃತರಾದವರು.

ಎಲ್ ಟಿ ವೈರ್ ಗಳು ಈಗಾಗಲೇ ಸಾಕಷ್ಟು ಜೋತು ಬಿದ್ದಿದ್ದು ಅವುಗಳನ್ನು ಸರಿಮಾಡದೇ ಇರುವ ಹೆಸ್ಕಾಂ ಇಲಾಖೆಯ ನಿರ್ಲಕ್ಷ್ಯದಿಂದಲೇ ಈ ಘಟನೆ ನಡೆದಿದೆ ಎಂದು ಮೃತ ದಂಪತಿಗಳ ಸಂಬಂಧಿಕರು ಆರೋಪಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಮೂಡಲಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Latest articles

More like this