ಭರವಸೆ ಈಡೇರಿಸದ ಜನಪ್ರತಿನಿಧಿಗಳ ಮೇಲೆ ಆಕ್ರೋಶ….
ಬೀದರ – ಕಲ್ಯಾಣ ಕರ್ನಾಟಕ ಬಾಗದಲ್ಲಿ ರೈತರು ಮಳೆ ಬೀಳುತ್ತದೆ ಭರವಸೆ ಮೇಲೆ ಆಕಾಶ ಕಡೆ ಮುಖ ಮಾಡಿ ನೋಡುತ್ತಿದ್ದರೆ. ಇನ್ನೊಂದು ಕಡೆ ಅಜ್ಜ ಅಜ್ಜಿ ಹೊಲದಲ್ಲಿ ಬಿತ್ತನೆ ಮಾಡುವುದು ನೋಡಿದರೆ ಅಯ್ಯೋ ಪಾಪ ಅನಿಸುತ್ತದೆ.
ಈ ಅಜ್ಜ ಅಜ್ಜಿ ಬಿತ್ತನೆ ಕೂರಿಗೆಗೆ ಯಾವುದೇ ಎತ್ತು ಅಥವಾ ಟ್ರಾಕ್ಟರ್ ಬಳಸದೆ ತಾವೇ ಕೂರಿಗೆ ಎಳೆದು ಬಿತ್ತನೆ ಮಾಡಿದ್ದಾರೆ.
ರಾಜ್ಯ ಸರ್ಕಾರ ಬಡವರಿಗಾಗಿ ಹಲವು ಯೋಜನೆ ತಂದರು ಕೂಡ ಇನ್ನೂ ಗಡಿ ಜಿಲ್ಲೆಯಲ್ಲಿ ಬಡವರು ಬಡವರಾಗಿಯೇ ಉಳಿದು ಕೊಂಡಿದ್ದು ವ್ಯವಸ್ಥೆಯನ್ನು ಅಣಕಿಸುವಂತಿದೆ.
ರಾಜ್ಯದ ಮುಖ್ಯ ಮಂತ್ರಿ ಗಡಿ ಜಿಲ್ಲೆಗೆ ಭೇಟಿ ಕೊಟ್ಟಾಗ ನಾನು ರಾಜ್ಯದ ಮುಖ್ಯಮಂತ್ರಿಯಲ್ಲ ನಿಮ್ಮ ಸೇವಕ ಎಂದು ಕರೆಯಬೇಕೆಂದು ಹೇಳಿದರು ಈ ಸೇವಕ ಹುಮನಾಬಾದ ಕ್ಷೇತ್ರದಲ್ಲಿ ಏನು ನಡೆಯುತ್ತಿದೆ ಎಂಬುದು ಗಮನಕ್ಕೆ ಇಲ್ಲವೇ ಎಂಬುದನ್ನು ಸೂಚಿಸುತ್ತದೆ.
ಬೀದರ ಜಿಲ್ಲೆಯ ಹಳ್ಳಿಖೇಡ ಬಿ ಗ್ರಾಮದ ತಿಪ್ಪಣ ಬಡ ರೈತನ ಕರುಣಾಜನಕ ಬದುಕು ನೋಡಿದರೆ ಅಯ್ಯೊ ಪಾಪ ಅನಿಸುತ್ತದೆ.. ಐದು ಗಂಡು ಮಕ್ಕಳು ಇದ್ದರು ಕೂಡ ಈ ಅಜ್ಜ ಅಜ್ಜಿ ಗೆ ಅನ್ನ ಹಾಕುವವರಾರೂ ಇಲ್ಲ. ಹಳ್ಳಿಖೇಡ ಗ್ರಾಮದ ಶ್ರೀಮಂತರ ಹತ್ತಿರ ಒಂದು ಎಕರೆ ಭೂಮಿಯನ್ನು ಪಡೆದು ಅದರಲ್ಲಿ ಬೆಳೆದು ಬಂದಿದ್ದರಲ್ಲಿ ಜೀವನ ನಡೆಸುತ್ತಾರೆ ಅಜ್ಜ ಅಜ್ಜಿ..ಇನ್ನೊಂದು ಕಡೆ ಮುಂಗಾರು ಮಳೆ ಕೈ ಕೊಟ್ಟಿದ್ದು ಈ ವಯಸ್ಕರ ಹೊಟ್ಟೆಯ ಮೇಲೆ ಹೊಡೆದಿದೆ.
ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಗುಡಿಸಲು ಮುಕ್ತ ಮಾಡುವ ಸಂಕಲ್ಪ ಮಾಡಿದ್ದಾರೆ ಆದರೆ ಈ ಬಡ ಕುಟುಂಬಕ್ಕೆ ಗ್ರಾಮ ಪಂಚಾಯತಿಯಿಂದ ಒಂದು ಮನೆ ಕೂಡ ಕಟ್ಟಿಕೊಟ್ಟಿಲ್ಲ. ಚುನಾವಣೆಯಲ್ಲಿ ಮನೆ ಕಟ್ಟಿಕೊಡುವ ಭರವಸೆ ನೀಡಿದ್ದರು ಮನೆ ಕೊಟ್ಟಿಲ್ಲ ಎಂದು ಕಣ್ಣೀರು ಹಾಕಿದ ಬಡ ರೈತ ತಿಪ್ಪಣ್ಣ ಹುಮಾನಾಬಾದ ಮತ ಕ್ಷೇತ್ರದ ಪಾಟೀಲ ಕುಟುಂಬದ ವಿರುದ್ಧ ಅಜ್ಜ ಅಜ್ಜಿ ಹಿಡಿ ಶಾಪವನ್ನು ಹಾಕಿದರು. ಪಾಟೀಲ ಕುಟುಂಬ ಕೇವಲ ದೊಡ್ಡವರ ಮನೆಗೇ ಹೊಗುತ್ತದೆ ಬಡವರ ಮನೆಗೆ ಬರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಮ್ಮ ಸರ್ಕಾರ ಬಡವರ ಪರ, ಹಸಿವು ಮುಕ್ತ ಕರ್ನಾಟಕ ಮಾಡುತ್ತೇವೆ ಎನ್ನುವ ಸರ್ಕಾರದ ಆಡಳಿತದಲ್ಲಿ ಇನ್ನೂ ಇಂಥ ವೃದ್ಧರಿಗೆ ಒಂದೂ ಸೂರಾಗಲೀ ಕುಳಿತು ಉಣ್ಣುವ ಪರಿಸ್ಥಿತಿಯಾಗಲಿ ಬರದೇ ಇರುವುದು ರಾಜ್ಯ ಸರ್ಕಾರದ ನಿಜ ಬಣ್ಣ ಬಯಲು ಮಾಡಿದೆ. ಅಧಿಕಾರಕ್ಕೆ ಬರಲು ಅದು ಉಚಿತ ಇದು ಖಚಿತ ಎಂದು ಹೇಳುತ್ತ ಕೇವಲ ತಮ್ಮ ಖಜಾನೆಗಳನ್ನೆ ತುಂಬಿಕೊಳ್ಳುವ ನಾಯಕರು ಇಂಥ ದೃಶ್ಯಗಳತ್ತ ಕಣ್ಣು ಹಾಯಿಸಿ ಬಡವರಿಗೆ ಉಪಕಾರ ಮಾಡಬೇಕು ಇನ್ನಾದರೂ ಸರ್ಕಾರ ಎಚ್ಚತ್ತುಕೊಳ್ಳಲಿ.
ವರದಿ : ನಂದಕುಮಾರ ಕರಂಜೆ, ಬೀದರ