ಮೂಡಲಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮೂಡಲಗಿ ಘಟಕದ ನೂತನ ಗೌರವಾಧ್ಯಕ್ಷರಾಗಿ ಸರ್ವೋತ್ತಮ ಜಾರಕಿಹೊಳಿ, ಅಧ್ಯಕ್ಷರಾಗಿ ವೆಂಕಟೇಶ ಎಚ್. ಬಾಲರಡ್ಡಿ, ಉಪಾಧ್ಯಕ್ಷರಾಗಿ ಶಂಕರ ಹಾದಿಮನಿ ಮತ್ತು ರಾಜಶೇಖರ ಮಗದುಮ್ಮ , ಪ್ರಧಾನ ಕಾರ್ಯದರ್ಶಿಯಾಗಿ ಸುಧಾಕರ ಉಂದ್ರಿ, ಕಾರ್ಯದರ್ಶಿಗಳಾಗಿ ಸುಭಾಷ ಗೋಡ್ಯಾಗೊಳ, ಮಹಾದೇವ ನಡುವಿನಕೇರಿ ಹಾಗೂ ಖಜಾಂಚಿಯಾಗಿ ಶಿವಾನಂದ ಮರಾಠೆ ಅವರು ಆಯ್ಕೆಯಾಗಿರುವರು.
ಸದಸ್ಯರಾಗಿ ಬಾಲಶೇಖರ ಬಂದಿ, ಎಲ್.ಸಿ. ಗಾಡವಿ, ಕೃಷ್ಣಪ್ಪ ಗಿರೆಣ್ಣವರ, ಮಲ್ಲು ಬೋಳನವರ, ಲಕ್ಷ್ಮಣ ಅಡಿಹುಡಿ, ಸುರೇಶ ಬಿ. ಪಾಟೀಲ, ಹಣಮಂತ ಸತರಡ್ಡಿ, ಅಲ್ತಾಪ ಹವಾಲ್ದಾರ, ಶಿವಾನಂದ ಹಿರೇಮಠ, ಈಶ್ವರ ಢವಳೇಶ್ವರ, ಮಧು ಪಿ ಗೌಡ, ಶೋಭಾ ವಿ. ಬಾಲರಡ್ಡಿ ಅವರು ಇರುವರು.
ಪತ್ರಿಕಾ ದಿನಾಚರಣೆ ಮತ್ತು ಪದಗ್ರಹಣ : ಮೂಡಲಗಿ ತಾಲ್ಲೂಕು ಮಟ್ಟದ ಪತ್ರಿಕಾ ದಿನಾಚರಣೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಪಟ್ಟಣದ ಸಾಯಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದ ಆಶ್ರಯದಲ್ಲಿ ಜುಲೈ ೨೦ರಂದು ಬೆಳಿಗ್ಗೆ ೧೧ಕ್ಕೆ ಮಹಾವಿದ್ಯಾಲಯದಲ್ಲಿ ಸಭಾ ಭವನದಲ್ಲಿ ಜರುಗಲಿದೆ.
ಸಮಾರಂಭದ ಉದ್ಘಾಟನೆಯನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ನೆರವೇರಿಸುವರು. ಅಧ್ಯಕ್ಷತೆಯನ್ನು ಬೆಳಗಾವಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಡಾ. ಭೀಮಶಿ ಜಾರಕಿಹೊಳಿ ಅವರು ವಹಿಸುವರು. ಮುಖ್ಯ ಅತಿಥಿ ಹಾಗೂ ಪದಗ್ರಹಣ ಅಧಿಕಾರಿಯಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ ಭಾಗವಹಿಸುವರು.
ಮುಖ್ಯ ಅತಿಥಿಯಾಗಿ ಮೂಡಲಗಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಗೌರವ ಅಧ್ಯಕ್ಷ ಸರ್ವೋತ್ತಮ ಜಾರಕಿಹೊಳಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಪುಂಡಲೀಕ ಬಾಳೋಜಿ, ಸದಸ್ಯ ಮಲ್ಲಿಕಾರ್ಜುನ ಗೊಂದಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಮಠದ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಸನತ್ ಜಾರಕಿಹೊಳಿ, ಗೋಕಾಕ ಸಂಘದ ಅಧ್ಯಕ್ಷ ಗುರುರಾಜ ಪೂಜೇರಿ, ಸಾಯಿ ಮಹಾವಿದ್ಯಾಲಯದ ಅಧ್ಯಕ್ಷ ಪುಲಕೇಶ ಸೋನವಾಲಕರ ಭಾಗವಹಿಸುವರು.
ಗೌರವ ಅತಿಥಿಗಳಾಗಿ ತಹಶೀಲ್ದಾರ್ ಶ್ರೀಶೈಲ ಗುಡಮೆ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಸನ್ನ ನೇರಲೆಕರ, ಸಿಡಿಪಿಒ ಯಲ್ಲಪ್ಪ ಗದಾಡಿ, ಸಿಪಿಐ ಶ್ರೀಶೈಲ ಬ್ಯಾಕೂಡ, ಹೆಸ್ಕಾಂ ಅಧಿಕಾರಿ ಎಂ.ಎಸ್. ನಾಗನ್ನವರ, ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಭಾರತಿ ಕೋಣಿ , ಪಶು ಸಂಗೋಪನೆ ಇಲಾಖೆಯ ಡಾ. ಎಂ.ಬಿ. ವಿಭೂತಿ, ಡಾ. ಮೋಹನ ಕಮತ, ಉಪ ನೋಂದಣಿಯಾಧಿಕಾರಿ ಡಿ.ಕೆ. ಕುಳ್ಳೂರ, ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ, ಪಿಎಸ್‌ಐ ರಾಜು ಪೂಜೇರಿ ಭಾಗವಹಿಸುವರು.
ಇದೇ ಸಂದರ್ಭದಲ್ಲಿ ಮೂಡಲಗಿ ತಾಲ್ಲೂಕು ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಇರುವುದು ಎಂದು ಬೆಳಗಾವಿ ಜಿಲ್ಲಾ ಘಟಕದ ಕಾರ್ಯಕಾರಿಣಿ ಸಮಿತಿ ಸದಸ್ಯ ಕೃಷ್ಣಪ್ಪ ಗಿರೆಣ್ಣವರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.