ಸಿಂದಗಿ: ಸಾದನೆಗಳು ಸಾಧಕರ ಸ್ವತ್ತು ವಿನಃ ಸೋಮಾರಿಗಳ ಸ್ವತ್ತಲ್ಲ ಕಾರಣ ವಿದ್ಯಾರ್ಥಿಗಳು ಸಾಧನೆಗಳ ಮೆಟ್ಟಿಲೇರಬೇಕಾದರೆ ಗುರುಗಳ ಮಾರ್ಗದರ್ಶನದಲ್ಲಿ ಶ್ರದ್ದಾಭಕ್ತಿಯಿಂದ ವಿದ್ಯೆಯಲ್ಲಿ ತಲ್ಲಿನ ಆದರೆ ಮಾತ್ರ ಗುರಿ ಮುಟ್ಟಲು ಸಾಧ್ಯ ಆ ರೀತಿಯಲ್ಲಿ ಹೆಚ್ಚಿನ ಅಂಕ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಎಂ ಎಂ ಹಂಗರಗಿ ಹೇಳಿದರು.
ತಾಲೂಕಿನ ಯರಗಲ್ಲ ಗ್ರಾಮದ ಶ್ರೀ ಸಿದ್ದ ಶಂಕರಾನಂದ ಸ್ವಾಮೀಜಿ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ನಗದು ರೂಪದಲ್ಲಿ ಧನ ಸಹಾಯ ನೀಡಿ ಮಾತನಾಡಿ, ಈ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ ಮಕ್ಕಳು ಮುಂದಿನ ಶಿಕ್ಷಣದಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾಗಿ ಗ್ರಾಮದ ಹೆಸರು ಹಾಗೂ ಸಂಸ್ಥೆ ಹೆಸರು ತನ್ನಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಮದು, ಕಲಾವತಿ, ಪ್ರಿಯಾಂಕಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಸ್ಥೆ ಆಡಳಿತ ಸದಸ್ಯರಾದ ಎಲ್ ವಿ ಕುಲಕರ್ಣಿ. ಭೀಮಣ್ಣ ಹೇರೂರ, ಅಲ್ಲಿಸಾಬ ಬಂಕಲಗಿ, ಡಾ ಸಂಗು ಅಗಸರ, ಶಾಂತು ಮರಡಿ, ಗುರುರಾಜ ಕುಲಕರ್ಣಿ, ಕಾಳಪ್ಪ ಅಗಸರ, ರಾಮಣ್ಣ ಬಲುಂಡಗಿ, ಮುಖ್ಯಗುರು ಅರುಣ ನಾಯ್ಕೋಡಿ, ದಾನಮ್ಮ ಶಿಂಪಿ, ರಾಜು ಯಡ್ರಾಮಿ, ಅಸ್ವಿನಿ ಲಮಾಣಿ ಸೇರಿದಂತೆ ಪಾಲಕರು ಇದ್ದರು