Homeಸುದ್ದಿಗಳುಗೋಕಾಕ ; ಎರಡು ಗುಂಪುಗಳ ನಡುವೆ ಮಾರಾಮಾರಿ

ಗೋಕಾಕ ; ಎರಡು ಗುಂಪುಗಳ ನಡುವೆ ಮಾರಾಮಾರಿ

Published on

ಗೋಕಾಕ್: ಹಣಕಾಸಿನ ವಿಚಾರಕ್ಕೆ ಹಾಗೂ ಜಾಗವೊಂದರ ವಿಚಾರಕ್ಕೆ ಸಂಬಂಧಿಸಿ ಎರಡು ಗುಂಪಿನ ನಡುವೆ ಮಾರಕಾಸ್ತ್ರಗಳಿಂದ ಭೀಕರ ಮಾರಾಮಾರಿ ನಡೆದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ನಗರದ ಲಕ್ಷ್ಮಿ ಬಡಾವಣೆಯಲ್ಲಿ ನಡೆದಿದ್ದು ವಿಡಿಯೋ ವೈರಲ್ ಆಗಿದೆ.

ಕೊಟ್ಟ ಸಾಲವನ್ನು ಮರಳಿ ಕೇಳಿದ್ದಕ್ಕೆ ಗಲಾಟೆ ಆರಂಭಗೊಂಡಿದ್ದು, ಬಳಿಕ ಎರಡು ಗುಂಪಿನವರು ಕೈಯಲ್ಲಿ ಕಬ್ಬಿಣದ ರಾಡ್, ಮಚ್ಚು ಹಿಡಿದು ಪರಸ್ಪರ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.

ಮಾರಾಮಾರಿಯ ದೃಶ್ಯಗಳು ಮೊಬೈಲ್‌ನಲ್ಲಿ ಸೆರೆಯಾಗಿವೆ. ಘಟನೆಯಲ್ಲಿ ವರುಣ್ ಸಂತೋಷ್ ಗೊಲ್ಲರ್ (16) ಎಂಬ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಘಟನಾ ಸ್ಥಳಕ್ಕೆ ಗೋಕಾಕ್ ಶಹರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸಂಬಂಧ ಗೋಕಾಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಅಪ್ಪಾಸಾಬ ಭಜಂತ್ರಿ, ಅನಿಕೇತ ಭಜಂತ್ರಿ ಹಾಗೂ ರಬಕವಿಯ ಆನಂದ ಭಜಂತ್ರಿ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ ಎಂಬುದಾಗಿ ಪೊಲಿಸ್ ಪ್ರಕಟಣೆ ತಿಳಿಸಿದೆ.

Latest articles

More like this