Homeಸುದ್ದಿಗಳುಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಸ್ತ್ರೀ ಛಾಪಿದೆ: ಸಂಗೀತಾ ಮಜ್ಜಿಗಿ

ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಸ್ತ್ರೀ ಛಾಪಿದೆ: ಸಂಗೀತಾ ಮಜ್ಜಿಗಿ

Published on

ಕಂದಗಲ್ಲ ಗ್ರಾಮದ ರುದ್ರುಸ್ವಾಮಿ ಮಠದಲ್ಲಿ ನೆಡೆದ 67 ನೆ ಶಿವಾನುಭವ ಕಾರ್ಯಕ್ರಮ.

ಇಲಕಲ್ಲ : ಇತಿಹಾಸದುದ್ದಕ್ಕೂ ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಧೃಢ ಸಂಕಲ್ಪದಿಂದ ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಛಾಪು ಮೂಡಿಸಿದ್ದು ಸಾಮಾಜಿಕ, ರಾಜಕೀಯ, ಆರ್ಥಿಕ ಹಾಗೂ ವೈಜ್ಞಾನಿಕವಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರ ಸಾಧನೆಗಳು ಗಮನಾರ್ಹ ಎಂದು ಲಿಂಗಸುಗೂರಿನ ಸ್ಕೌಟ್ಸ್ ಮತ್ತು ಗೈಡ್ಸ ನ ಉಪಾಧ್ಯಕ್ಷರಾದ ಸಂಗೀತ ಮಜ್ಜಿಗಿ ಹೇಳಿದರು

ತಾಲೂಕಿನ.ಕಂದಗಲ್ಲ ಗ್ರಾಮದ ಶ್ರೀ ರುದ್ರಸ್ವಾಮಿ ಮಠದಲ್ಲಿ ನಡೆದ 67 ನೆ ಶಿವಾನುಭವದ ಗೋಷ್ಠಿಯಲ್ಲಿ ಅನುಭಾವದ ನುಡಿಗಳನ್ನಾಡಿದರು. ಗೋಷ್ಠಿಯ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು ಓರ್ವ ಪ್ರಬುದ್ಧ ಮಹಿಳೆ ಕುಟುಂಬದ ನಿರ್ವಹಣೆಯೊಂದಿಗೆ ಸಮಾಜದ ಪ್ರತಿಯೊಂದು ರಂಗಗಳಲ್ಲಿ ತೊಡಗಿಸಿಕೊಂಡು ಉತ್ತಮ ಸಮಾಜ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾಳೆ ಎಂದರು.

ಸೇವಾರ್ಥಿ ಈರಯ್ಯ ತೋಟದಸ್ವಾಮಿಮಠ. ಡಾ ಮಲ್ಲಿಕಾರ್ಜುನ ಗಡಿಯಣ್ಣವರ, ಡಾಕ್ಟರೇಟ ಪದವಿ ಪಡೆದ ಬಾಲಕ ವೀರಭದ್ರ ಮಜ್ಜಿಗಿ ಇವರನ್ನು ಸನ್ಮಾನಿಸಲಾಯಿತು.

ಗ್ರಾಮದ ಗುರುಬಸವ ವಿದ್ಯಾ ಸಂಸ್ಥೆಯ ವಿಶ್ವ ಚೇತನ ಪಬ್ಲಿಕ್ ಶಾಲೆಯ ಗುರುಮಾತೆ ರಾಜೇಶ್ವರಿ ಕಮತರ ಸ್ವಾಗತಿಸಿದರು. ಕು ಸೌಮ್ಯ ಆನೆಗುಂದಿ ಪ್ರಾರ್ಥನೆ ಮಾಡಿದರು. ಮೀನಾಕ್ಷಿ ನಾಯಕರ ನುಡಿನಮನ ಸಲ್ಲಿಸಿದರು, ಭವ್ಯ ಭಂಢಾರಿ ಕಾರ್ಯಕ್ರಮ ನಿರೂಪಿಸಿದರು. ನಂದಿನಿ ನಾಯಕ ವಂದನಾರ್ಪಣೆ ಮಾಡಿದರು.ಕಂದಗಲ್ಲ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ಮಹಿಳೆಯರು, ಮಕ್ಕಳು, ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Latest articles

More like this