HomeUncategorizedಕವನ : ಮುಖವಾಡ ಮತ್ತು ಮರೀಚಿಕೆ

ಕವನ : ಮುಖವಾಡ ಮತ್ತು ಮರೀಚಿಕೆ

Published on

ಮುಖವಾಡ ಮತ್ತು ಮರೀಚಿಕೆ

​ಬೆನ್ನ ಹಿಂದೆ
ಯಾರೋ ಮಾತಾಡಿದ್ದನ್ನು
ಮನ್ನಿಸಿಬಿಡು
ಹೊಸ ದಾರಿಯಾದರೂ ಸಿಕ್ಕೀತು.

​ಕಣ್ಣ ಮುಂದೆ
ದ್ವೇಷವಾಸಿಗಳ
ತಪ್ಪುಗಳು ಬೆವರಿಸಿದರೂ
ನಿನಗೆ ನೀನು
ಸಂತೈಸಿಕೊಂಡುಬಿಡು
ಗಾಯವಾದರೂ ಮಾದೀತು.

​ನಗುವ ಮೊಗದೊಳಗೆ
ಮುಖವಾಡದ
ನಶೆ ಗಮನಿಸು
ಒಳ ವಿಕಾರವ
ಸಹಿಸಿಬಿಡು
ಸ್ವಂತಿಕೆಯ ಬದುಕಾದರೂ
ಸಿಕ್ಕೀತು

​ಒಳ್ಳೆಯವರ
ಒಲವ ಮಾತೇ ಹೊರತು,
ಸತ್ಯದ ಮರೀಚಿಕೆ
ಗಮನಿಸು
ಮತೀಯ ದ್ವೇಷವ
ಅರಿವಾದೀತು

​ಕುದಿಯುವ ಜಗದಲಿ
ನಿನ್ನತನದ ಮೌನವೇ ಶಸ್ತ್ರ!
ಅರಿವಿನ ಬೆಂಕಿಗೆ ಬಿದ್ದ ಮೇಲಷ್ಟೇ
ಬೂದಿಯಾಗುವುದು ಹುಸಿ ಶತ್ರು.
​ತೋರಿಕೆಯ ಬದುಕಿಗೆ ಕೊನೆ ಇದೆ,

ಯಾರೋ ಮಾತಾಡಿದ ಮಾತುಗಳಿಗೇಕೆ ಚಿಂತೆ
ಇದು ಸಂತೆಯ ಗದ್ದಲ
ನಿರುಮ್ಮಳವಾಗಿಬಿಡು
ಸಂತಸ ಸಾರ
ಅಮೃತವಾದೀತು‌.
••••••••••••••••••••••
ಶರಣಪ್ಪ ತಳ್ಳಿ ಕುಪ್ಪಿಗುಡ್ಡ

Latest articles

More like this