ಸಿಂದಗಿ :ಪ್ರಸ್ತುತ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿದ್ದು ಪರೀಕ್ಷೆ ಮುಗಿದ ಮೇಲೆ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಗಳಿವೆ ಕಾರಣ ಪೋಷಕರು ತಮ್ಮ ಹೆಣ್ಣು ಮಕ್ಕಳ ಕಡೆಗೆ ವಿಶೇಷ ಗಮನ ಹರಿಸಬೇಕೆಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಧರ್ಮಚಾರ್ಯ ಸಂಪರ್ಕ ಸಹ ಪ್ರಮುಖ ಶೇಖರಗೌಡ ಹರನಾಳ ಕರೆ ನೀಡಿದ್ದಾರೆ.
ಪತ್ರಿಕಾ ಹೇಳಿಕೆಯಲ್ಲಿ ವಿನಂತಿಸಿರುವ ಅವರು ಪ್ರತಿ ವರ್ಷ 60 ಸಾವಿರಕ್ಕಿಂತ ಹೆಚ್ಚು ಹಿಂದೂ ಯುವತಿಯರು ಲವ್ ಜಿಹಾದಿಗೆ ಬಲಿಯಾಗುತ್ತಿದ್ದು ಅಲ್ಲದೆ ಮತಾಂತರಕ್ಕೆ ಒಳಗಾಗುತ್ತಿದ್ದಾರೆ ಈ ವಿಷಯ ಇಡೀ ಹಿಂದೂ ಸಮಾಜಕ್ಕೆ ಎಚ್ಚರಿಕೆಯ ಘಂಟೆ ಇದನ್ನು ಅರಿತು ನಮ್ಮ ನಮ್ಮ ಮನೆಯಲ್ಲಿಯೇ ನಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಡುವುದು ತಂದೆ ತಾಯಿಯರ ಕರ್ತವ್ಯವಾಗಿದೆ ಹಾಗೆಯೇ ನಿಮ್ಮ ನಿಮ್ಮ ಮಕ್ಕಳ ಬಗ್ಗೆ ಗಮನ ಹರಿಸಿ ಲವ್ ಜಿಹಾದ್ ಮತ್ತು ಮೋಸದ ಮತಾಂತರಕ್ಕೆ ಒಳಗಾಗದಂತೆ ಎಚ್ಚರ ವಹಿಸಬೇಕೆಂದು ಹೇಳಿದರು.
ಲವ್ ಜಿಹಾದ್ ಮತ್ತು ಮತಾಂತರ ಭೀಕರತೆ ನಮ್ಮ ಹಿಂದೂ ಹೆಣ್ಣು ಮಕ್ಕಳಿಗೆ ಅರ್ಥವಾಗಬೇಕಾದರೆ ಈಗ ಬಂದಿರುವ ಕೇರಳ ಸ್ಟೋರಿ ಭಾಗ 2 ಚಲನ ಚಿತ್ರ ತೋರಿಸಿ ಎಂದು ಹರನಾಳ ಮನವಿ ಮಾಡಿದ್ದಾರೆ