ನಾವು – ನಮ್ಮವರು
ಬಸವಣ್ಣನವರ ತತ್ವ: 12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರು ಸ್ಥಾಪಿಸಿದ ಸಮಾನತೆ, ಕಾಯಕ (ಕೆಲಸ) ಮತ್ತು ದಾಸೋಹದ ತತ್ವಗಳನ್ನು ಈ ನಾಡಿನಲ್ಲಿ ಬಿತ್ತಿ ಬೆಳೆದಿದ್ದಾರೆ.
ಬಸವ ಬೆಳೆ: ಇಲ್ಲಿ ‘ಬೆಳೆ’ ಎಂದರೆ ಕೇವಲ ಕೃಷಿಯ ಉತ್ಪನ್ನವಲ್ಲ, ಬದಲಿಗೆ ಬಸವಣ್ಣನವರ ವಿಚಾರಧಾರೆಗಳಿಂದ ನಾಡಿನ ಮಣ್ಣಿನಲ್ಲಿ (ಜನಮನದಲ್ಲಿ) ಬೆಳೆದು ಬಂದಿರುವ ಮಾನವೀಯ ಮೌಲ್ಯಗಳು, ಭಕ್ತಿ ಮತ್ತು ಸಾಮಾಜಿಕ ಕ್ರಾಂತಿ ಎಂದರ್ಥ. ಇವುಗಳನ್ನು ಡಾ. ಬಸಮ್ಮ ಗಂಗನಳ್ಳಿ ಅವರು ತಮ್ಮ ವೃತ್ತಿಯಲ್ಲಿ, ಬೋಧನೆಯಲ್ಲಿ, ಸಮಾಜದಲ್ಲಿ, ನಿರಂತರವಾಗಿ ಬಸವ ತಿಳಿವಳಿಕೆ ಮೂಡಿಸುವ ಕಾರ್ಯ ನಿಜಕ್ಕೂ ಅರ್ಥಪೂರ್ಣ.
ಶರಣ ಪರಿಸರ: ಬಸವಣ್ಣನವರು ನಡೆದಾಡಿದ ಕರ್ನಾಟಕದ ಭೂಮಿಯನ್ನು ‘ಬಸವ ಭೂಮಿ’ ಎಂದು ಕರೆಯಲಾಗುತ್ತದೆ. ಈ ಭೂಮಿಯಲ್ಲಿ ಬೆಳೆದ ‘ಬೆಳೆ’ ಎಂದರೆ ಇಲ್ಲಿನ ಸಂಸ್ಕೃತಿ ಮತ್ತು ವಚನ ಸಾಹಿತ್ಯದ ಪ್ರಭಾವ. ಇಂತಹ ಮಣ್ಣಿನಲ್ಲಿ ಹುಟ್ಟಿ ರೈತಾಪಿ ವರ್ಗದ ಮಹಿಳೆಯರಲ್ಲಿ ಹೆಚ್ಚಿನ ವ್ಯಾಸಂಗ ಮಾಡಿ ಪ್ರಾಥಮಿಕ ಶಾಲೆಯ ಶಿಕ್ಷಕಿಯಿಂದ ಕಾಲೇಜಿನ ಪ್ರಾಧ್ಯಾಪಕಿಯಾಗಿದ್ದು ಡಾ. ಬಸಮ್ಮ ಗಂಗನಳ್ಳಿ ಅವರ ಅಪಾರವಾದ ಸಾಧನೆ ಎಂದೇ ಹೇಳಬೇಕು. ಕನ್ನಡ ಭಾಷೆ, ಸಾಹಿತ್ಯ, ಶರಣ ಸಂಸ್ಕೃತಿ ಮೈಗೂಡಿಸಿಕೊಂಡು ನಿತ್ಯ ಕನ್ನಡ ತಾಯಿಯ ಸೇವೆ ಸಲ್ಲಿಸುತ್ತಿದ್ದಾರೆ.
ಇಂತಹ ಅಪರೂಪದ ಪ್ರಬುದ್ಧ ಪ್ರಾಮಾಣಿಕ ಪ್ರಾಧ್ಯಾಪಕಿ ಶಿಕ್ಷಕಿ. ಸಮಾಜಪರ ಜೀವಿಯ ಪರಿಚಯ ಮಾಡುವುದು ಅಕ್ಕನ ಅರಿವು ತಂಡದ ಹೆಮ್ಮೆಯ ವಿಷಯ. ಇವರು ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ -ಪುಣೆಯ ಆಜೀವ ಸದಸ್ಯರು ಮತ್ತು ದತ್ತಿ ದಾಸೋಹಿಗಳು.
ಡಾ. ಬಸಮ್ಮ ಗಂಗನಳ್ಳಿ ಅವರ ತಂದೆ ಶ್ರೀಶೈಲ ಅವರು ಮತ್ತು
ತಾಯಿ ಲಕ್ಷ್ಮೀಬಾಯಿಯವರು. ಇವರ ಊರು ವಿಜಯಪುರ ಜಿಲ್ಲೆಯ “ನಾಗಠಾಣ”. ಅವರು ತಮ್ಮ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ತಮ್ಮಹುಟ್ಟೂರಾದ ನಾಗಠಾಣದಲ್ಲಿ , ಪದವಿಪೂರ್ವ ಶಿಕ್ಷಣ ಮತ್ತು ಶಿಕ್ಷಕರ ತರಬೇತಿ ,ಇಂಡಿಯಾ ಜಿ.ಆರ್ ಗಾಂಧೀ ಆರ್ಟ್ಸ್ ಕಾಲೇಜಿನಲ್ಲಿ, ಎಂ.ಎ, ಕನ್ನಡ ಎಂ.ಫಿಲ್,ಪಿ.ಎಚ್ ಡಿ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಪೂರೈಸಿದರು .ಶಿವಮೊಗ್ಗ ವಿ.ವಿ. ಅವರು ನಡೆಸಿದ ಸೆಟ್ ಎಕ್ಸಾಂ, ೨೦೦೬ ರಲ್ಲಿ ಉತ್ತೀರ್ಣರಾದರು. ಈಗ ಸದ್ಯ ಡಾ.ಬಸಮ್ಮ ಗಂಗನಹಳ್ಳಿ ಅವರು ಬೆಳಗಾವಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸಹಪ್ರಾಧ್ಯಾಪಕರು ಮತ್ತು ಕನ್ನಡ ವಿಭಾಗದ ಮುಖ್ಯಸ್ಥರಾಗಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
*ಡಾ. ಬಸಮ್ಮ ಗಂಗನಳ್ಳಿ ಅವರ ಸೇವಾ ಅನುಭವ* ಒಟ್ಟು ೨೭ವರ್ಷಗಳು. ಇವರ ಎಂಟು ಪುಸ್ತಕ, ಹಾಗೂ ೭೦ ಲೇಖನಗಳು ಪ್ರಕಟವಾಗಿವೆ . ಇವರು ಹಲವಾರು ಅಂತರರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡನೆ ಮಾಡಿದ್ದಾರೆ.
ಡಾ. ಬಸಮ್ಮ ಗಂಗನಳ್ಳಿ ಅವರಿಗೆ ಸಂದ ಪ್ರಶಸ್ತಿ ಗಳು
೧-ಬಸವಜ್ಯೋತಿ ರಾಜ್ಯ ಪ್ರಶಸ್ತಿ
೨-ವಿದ್ಯಾ ವಿಭೂಷಣ ಪ್ರಶಸ್ತಿ
೩-ಗುರುಕುಲ ತಿಲಕ ಪ್ರಶಸ್ತಿ
೪-ನಾರೀ ಶಕ್ತಿ ಪ್ರಶಸ್ತಿ,
೫-ಸುವರ್ಣ ಕರ್ನಾಟಕ ಕಣ್ಮಣೀ ಪ್ರಶಸ್ತಿ,
೬- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ , ವಿಶ್ವ ಕನ್ನಡಿಗರ ಸಂಘ ಬೀದರ್
೭-ಕನ್ನಡ ರತ್ನ ಪ್ರಶಸ್ತಿ, ವೀರ ಕನ್ನಡಿಗರ ಸೇನೆ,ಕಲಬುರ್ಗಿ, ಇವರಿಂದ
೮- ಸುವರ್ಣ ಕರ್ನಾಟಕ, ರಾಜ್ಯೋತ್ಸವ ಪ್ರಶಸ್ತಿ ವಿಶ್ವ ಕನ್ನಡ ಬಳಗ ಹುಬ್ಬಳ್ಳಿ ಇವರಿಂದ,
ಸಂಘ ಸಂಸ್ಥೆಗಳ ಸದಸ್ಯತ್ವ:
೧- ಕನ್ನಡ ಸಾಹಿತ್ಯ ಪರಿಷತ್ತು , ಬೆಂಗಳೂರು
೨-ಉತ್ತರ ಕರ್ನಾಟಕ ಲೇಖಕಿಯರ ಸಂಘದ ಸದಸ್ಯತ್ವ
೩-ಅಖಿಲ ಭಾರತ ಲೇಖಕಿಯರ ಸಂಘದ, ಸದಸ್ಯತ್ವ
೪-ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ಸದಸ್ಯತ್ವ
೫- ಅಕ್ಕಮಹಾದೇವಿ ವಿಶ್ವ ವಿದ್ಯಾಲಯ ಅಧ್ಯಾಪಕರ ಸಂಘದ ಮಹಿಳಾ ಪ್ರತಿನಿಧಿ
೬-ಅಕ್ಕನ ಅರಿವು ಸಂಘಟನೆಯ
ಸದಸ್ಯರು
ಒಟ್ಟಿನಲ್ಲಿ ಡಾ. ಬಸಮ್ಮ ಗಂಗನಳ್ಳಿ ಅವರು ಕಾಯಕನಿಷ್ಠೆ ಎನ್ನುವ ಮನಸ್ಸುಳ್ಳ, ತಮ್ಮ ಕೆಲಸವನ್ನು ಪ್ರೀತಿಸುವ, ಸೇವಾ ಮನೋಭಾವನೆಯ ವ್ಯಕ್ತಿತ್ವವುಳ್ಳವರು. ನಮ್ಮ ವೇದಿಕೆಯಲ್ಲಿ ಹಲವಾರು ಅದ್ಭುತವಾದ ಉಪನ್ಯಾಸಗಳನ್ನು ನೀಡಿದ್ದಾರೆ. ಪ್ರತಿವಾರ ಕನ್ನಡ ಕವನ ಕಾವ್ಯ ಕೂಟದಲ್ಲಿ ತಮ್ಮ ಕವನಗಳನ್ನು ಬರೆಯುವುದರ ಮೂಲಕ ಸಹ ಅವರು ಸಕ್ರಿಯ ರಾಗಿದ್ದಾರೆ. ತಮ್ಮ ಕೆಲಸ -ಕಾರ್ಯಗಳ ಜೊತೆಗೆ ನಮ್ಮ ವೇದಿಕೆಯಲ್ಲೂ ವಿಶೇಷ ಆಸಕ್ತಿ ಹೊಂದಿರುವ ಬಸವನಾಡಿನ ಮಗಳು ನಮ್ಮ ವೇದಿಕೆಯಲ್ಲಿ ಕ್ರಿಯಾಶೀಲರಾಗಿ ಇರುವುದು ಮೆಚ್ಚುವಂತಹದು.
ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ -ಪುಣೆ