Homeಕವನಕವನ : ನನ್ನೊಳಗಿನ ಪ್ರೀತಿ

ಕವನ : ನನ್ನೊಳಗಿನ ಪ್ರೀತಿ

Published on

ನನ್ನೊಳಗಿನ ಪ್ರೀತಿ

ನನ್ನೊಳಗಿನ ಪ್ರೀತಿ ಮೌನವಾಗಿದೆ
ನಿನ್ನ ಒಂದು ನೋಟಕ್ಕೆ ಕಾಯುತ್ತಿದೆ.
ಹೇಳಲಾಗದ ನೂರು ಮಾತುಗಳು,
ಕಣ್ಣಲ್ಲೇ ಕವಿತೆಯಾಗಿ ಮೂಡುತ್ತಿದೆ.

ಹರಿಯುವ ನದಿಯಂತೆ ಈ ಒಲವು,
ನಿನ್ನ ಹೃದಯವ ಸೇರಲು ಹಂಬಲಿಸಿದೆ.
ನನ್ನ ಪ್ರತಿ ಉಸಿರಿನ ರಾಗದಲ್ಲೂ,
ನಿನ್ನದೇ ಹೆಸರಿನ ನಿನಾದ ಕೇಳಿದೆ .

ಕತ್ತಲ ದಾರಿಗೆ ನೀನೇ ಬೆಳಕು,
ಬಾಡದ ಹೂವಿನ ಸಿಹಿ ಬಳುಕು.
ಜನ್ಮ ಜನ್ಮದ ಈ ನಂಟು,
ನನ್ನೊಳಗಿನ ಪ್ರೀತಿ ನಿನಗುಂಟು

ಭಾವದ ಪೈರಿನ ಹಸಿರೆಲೆ ನೀನು
ಶಬ್ದದ ಅಕ್ಷರ ಬೀಜವು ನಾನು
ತನುವಿನ ಸ್ನೇಹದ ಪ್ರೀತಿಯು ನೀನು
ನಿನ್ನೊಲುಮೆಯ ಅಪ್ಪಟ ಸಾಧಕ ನಾನು
_______________________________

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

Latest articles

More like this