Homeಕವನಕವನ : ಬಿಸಿಲ ಬೇಗೆ

ಕವನ : ಬಿಸಿಲ ಬೇಗೆ

Published on

ಬಿಸಿಲ ಬೇಗೆ

ಭುಗಿಲೆದ್ದಿದೆ ನೆಲಕೆ ಸೂರ್ಯನ ತಾಪ,
ಪ್ರಕೃತಿಗೂ ತಟ್ಟಿದೆಯೆ ಪ್ರಳಯದ ಶಾಪ?
ಬೆಂಕಿಯ ಉಂಡೆಯ ಉಗುಳುತ ಬಾನು,
ಬಸವಳಿದು ನಿಂತಿದೆ ಜೀವಸಂಕುಲದ ಪ್ರಾಣ.

ನೆತ್ತಿಯ ಸುಡುವ ಬಿರು ಬಿಸಿಲಿಗೆ,
ಬೆವರಿಳಿದು ಬಳಲುತ್ತಿದೆ ಜೀವ.
ತಂಗಾಳಿಯ ಸುಳಿವಿಲ್ಲ ಜಗದಿ,
ಉಸಿರಾಟ ಕಷ್ಟವಾಗಿದೆ ಧಗಧಗ ಉರಿಯಲ್ಲಿ.

ಹಳ್ಳ ಕೊಳ್ಳಗಳು ಬತ್ತಿ ಹೋದವು,
ಹಸಿರೆಲೆಗಳೆಲ್ಲ ಒಣಗಿ ಉದುರಿದವು.
ನೆರಳನು ಹುಡುಕುತ ದಣಿದ ಹಕ್ಕಿಗಳು,
ನೀರಿಗಾಗಿ ಹಂಬಲಿಸುತಿವೆ ಮೂಕ ಪ್ರಾಣಿಗಳು.

ಏನಿದು ಒಣ ಹವೆ, ಒಳಗೂ ಹೊರಗೂ ಸೆಕೆ,
ಮನುಜನ ದುರಾಸೆಗೆ ಪ್ರಕೃತಿಯ ಮುನಿಸೇಕೆ?
ಮರಗಳ ಕಡಿದು ನಾಶ ಮಾಡಿದ ಪಾಪ,
ಇಂದಿನ ಜಗಕ್ಕೆ ಬಿಸಿಲಿನ ರೂಪ.

ಬೇಗನೆ ಬಾರೋ ಮಳೆರಾಯ ,
ಭೂಮಿಯ ತಂಪಾಗಿಸು ಕರುಣೆ ಕಾಯ.
ಗಿಡಮರ ಬೆಳೆಸಿ ಪರಿಸರ ಉಳಿಸೋಣ,
ಮುಂದಿನ ಪೀಳಿಗೆಗೆ ತಂಪನ್ನು ನೀಡೋಣ.
_________________________

ಗಂಗಮ್ಮ ಕಟ್ಟಿಮನಿ ಲಿಂಗಸೂರು

Latest articles

More like this