Homeಕವನಕವನ : ಆರು ದಶಕದ ಪಯಣ

ಕವನ : ಆರು ದಶಕದ ಪಯಣ

Published on

ಆರು ದಶಕದ ಪಯಣ

ಬಾಳ ಬಂಡಿಯ ಹೂಡಿ ಹೊರಟು,
ಆರು ದಶಕದ ಹಾದಿ ಸವೆಸಿ;
ನೆನಪುಗಳ ಮೂಟೆಯನು ಬೆನ್ನಿಗೇರಿಸಿ,
ನಿಂತಿದೆ ಜೀವನ ನಗುನಗುತ ಹರಸಿ.

ಹಸಿರು ಹರೆಯದ ಕನಸಿನ ದಿನಗಳು,
ಹೊಸತು ಜವಾಬ್ದಾರಿಯ ಹೆಗಲ ಹೊರೆಗಳು;
ಬಿಸಿಲು-ನೆರಳಿನ ಆಟದ ನಡುವೆ,
ಸಾಗುತ ಬಂದಿದೆ ಸಂಸಾರದ ಹಡಗು.

ಕಷ್ಟದ ಮಳೆಗೆ ಧೃತಿಗೆಡದೆ ನಿಂತು,
ಸುಖದ ನಸುಬೆಳಕಿಗೆ ಮನಸಾರೆ ನಕ್ಕು;
ಮಕ್ಕಳು-ಮರಿಗಳ ಒಲವಿನ ನಡುವೆ,
ತುಂಬಿ ಹರಿದಿದೆ ಪ್ರೀತಿಯ ಒರತೆ.

ಅರವತ್ತರ ಈ ಸಂಭ್ರಮದ ಕವಲಿನಲ್ಲಿ,
ಹಿಂತಿರುಗಿ ನೋಡಲು ಧನ್ಯತೆಯ ಭಾವ;
ನಡೆದು ಬಂದ ಆ ಕಲ್ಲು-ಮುಳ್ಳಿನ ಹಾದಿ,
ಇಂದು ತಂದಿದೆ ಬದುಕಿಗೆ ಸಾಫಲ್ಯದ ಹೂವ.

ಮುಂದಿನ ಪಯಣವೂ ಹೀಗೆಯೇ ಇರಲಿ,
ಆರೋಗ್ಯ, ನೆಮ್ಮದಿ ಜೊತೆಯಾಗಿ ಬರಲಿ;
ನೂರು ವಸಂತ ಕಾಣುವ ಮುನ್ನ,
ಬಾಳ ಹಾದಿಗೆ ದೇವರ ದೀಪವಿರಲಿ.

ಸುಧಾ ಪಾಟೀಲ ಬೆಳಗಾವಿ

Latest articles

More like this