Homeಕವನಕವನ : ಅಲ್ಲ ನಾನು ಅಬಲೆ

ಕವನ : ಅಲ್ಲ ನಾನು ಅಬಲೆ

Published on

ಅಲ್ಲ ನಾನು ಅಬಲೆ!

ಅಲ್ಲ ನಾನು ಅಬಲೆ, ಕಣ್ಣೀರಿನ ಕಡಲಲ್ಲ,
ನೋವಿಗೆ ಮಣಿದು ಕೂರುವ ಹೆಣ್ಣಲ್ಲ.
ಸಹನೆಯ ತಾಯಿ , ದುರ್ಬಲೆಯಲ್ಲ,
ನನ್ನ ಮೌನವ ನೀವು ಕೀಳೆಂದು ತಿಳಿಯ ಬೇಡಿ.

ಕೋಮಲ ಕೈಗಳಲ್ಲಿ ಸೃಷ್ಟಿಯ ಸೂತ್ರವ,
ನನ್ನ ಹೆಜ್ಜೆಯ ಹಿಂದೆ ಧೀಶಕ್ತಿಯ ಪಾತ್ರ.
ಅಡುಗೆ ಮನೆ ಹೊಗೆಯಲ್ಲಿ ಬೆಳಕಾಗುವೆನು,
ಸಂಸಾರದ ನೊಗ ಹೊತ್ತು ಜಗ ಗೆಲ್ಲುವೆನು.

ಬಾಗಿದಷ್ಟೂ ಮೇಲೆ ಸವಾರಿ ಮಾಡದಿರು,
ನನ್ನೊಳಗಿನ ಜ್ವಾಲೆಯ ಕೆಣಕಿ ನೀ ಕೆಡದಿರು.
ಸಂಕಷ್ಟದ ಸುಳಿಗೆ ಸಿಲುಕಿದರೂ ಈಜಬಲ್ಲೆ,
ಕತ್ತಲೆಯ ಹಾದಿಯಲಿ ನಕ್ಷತ್ರವಾಗಬಲ್ಲೆ.

ಅಬಲೆಯ ಪಟ್ಟವನ್ನು ಕಳಚಿ ಬಂದಿರುವೆ,
ಸ್ವಾಭಿಮಾನದ ಬಾನಲಿ ರೆಕ್ಕೆ ಬಿಚ್ಚಿ ಹಾರಿರುವೆ.
ನಾನೀಗ ಅಬಲೆಯಲ್ಲ, ಧೀಮಂತ ಸಬಲೆ,
ಸವಾಲುಗಳ ಸದೆಬಡಿಯುವ ಸಾಹಸದ ಕವಿತೆ!

ಸುಧಾ ಪಾಟೀಲ
ಬೆಳಗಾವಿ

Latest articles

More like this