ಹೃದಯದ ಗೂಡಲಿ
ಹೃದಯದ ಗೂಡಲಿ ಕತ್ತಲೆ
ಬೆಳಕನು ತೋರಲು ನೀ ಬಾರೋ;
ಬಳಲಿದ ಕಣ್ಣಲಿ ಕಣ್ಣೀರು ,
ಸಂಕಟ ತೊಲಗಲು ನೀ ಬಾರೋ.
ನೀನೇ ಸೃಷ್ಟಿಯ ಜೀವದ ಚೇತನ,
ನೀನೇ ಅನಾಥರ ಬಂಧು; ಭಾವನಾ
ನಿನ್ನೊಲುಮೆ ಸಾಕು ಬಸವನೆ,
ಕಾಯುವೆ ನಿನ್ನನೆ ಬರುವನ್ನು
ಜಗದ ಜಂಜಡ ಯಾತ್ರೆಯ ಮುಗಿಸಿ,
ಚರಣದ ನೆರಳಲಿ ನೆಲೆ ನೀಡು;
ಶಾಂತಿಯ ಪ್ರೀತಿಯ ಗಾಳಿ ಬೀಸಿ,
ನನ್ನೀ ಮನವನೇ ನಿನ್ನ ಗುಡಿಯ ಮಾಡು.
ಬಾ ಜಗದೊಡೆಯ, ಬೇಗನೇ ಬಾರೋ
ಸಮತೆಯ ಶಾಂತಿಯ ನೀ ತೋರೋ
________________________
ಡಾ.ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ