Homeಸುದ್ದಿಗಳುಕಲ್ಲೋಳಿಯ ಶ್ರೀ ರಾಮಲಿಂಗೇಶ್ವರ ಪ್ರೌಢ ಶಾಲೆಯಲ್ಲಿ ‘ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ’ ಕಾರ್ಯಕ್ರಮ

ಕಲ್ಲೋಳಿಯ ಶ್ರೀ ರಾಮಲಿಂಗೇಶ್ವರ ಪ್ರೌಢ ಶಾಲೆಯಲ್ಲಿ ‘ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ’ ಕಾರ್ಯಕ್ರಮ

Published on

​ಮೂಡಲಗಿ: ತಾಲೂಕಿನ ಕಲ್ಲೋಳಿ‌ ಪಟ್ಟಣದ  ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರೌಢ ಶಾಲೆಯ 2006-07ನೇ ಸಾಲಿನ ಎಸ್.ಎಸ್.ಎಲ್.ಸಿ. ಹಳೆಯ ವಿದ್ಯಾರ್ಥಿಗಳ ವತಿಯಿಂದ “ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ” ಕಾರ್ಯಕ್ರಮವನ್ನು  ಗುರುವಾರ ಮೇ 28 ರಂದು ಬೆಳಿಗ್ಗೆ 10:00 ಗಂಟೆಗೆ ಪದವಿ ಕಾಲೇಜಿನ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲ್ಲೋಳಿಯ ಎಸ್. ಆರ್. ಇ. ಸಂಸ್ಥೆಯ ಚೇರ್ಮನ್ನರಾದ  ಬಸಗೌಡ ಶಿ. ಪಾಟೀಲ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಲ್ಲೋಳಿಯ ಎಸ್. ಆರ್. ಇ. ಎಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ. ಸುರೇಶ ಬಿ. ಹನಗಂಡಿ ಹಾಗೂ ಶ್ರೀ ರಾಮಲಿಂಗೇಶ್ವರ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಎ. ಆರ್. ಪಾಟೀಲ ಅವರು ಉಪಸ್ಥಿತರಿರಲಿದ್ದಾರೆ.

​ಗೌರವಾನ್ವಿತ ಅತಿಥಿಗಳಾಗಿ ಶಿಕ್ಷಕರಾದ ಆರ್. ಪಿ. ಬಾಗೋಜಿ,  ಎ. ಬಿ. ಉಪ್ಪಿನ, ಶ್ರೀಮತಿ ಎಮ್. ಎ. ಹೂಗಾರ, ಶ್ರೀಮತಿ ಜಿ. ಕೆ. ಗೋರೋಶಿ, ಶ್ರೀಮತಿ ಎಮ್. ಎಮ್. ಮಡಿವಾಳರ, ಆರ್. ಪಿ. ಕಂಬಾರ, ಬಿ. ಎಮ್. ಡಬ್ಬನವರ (ದೈಹಿಕ ಶಿಕ್ಷಕರು) ಮತ್ತು ಎಚ್. ಎಸ್. ನಿರ್ಲಿ (ಸಿಪಾಯಿ) ಅವರು ಭಾಗವಹಿಸಲಿದ್ದಾರೆ  ಎಂದು ಸಂಘಟನಾ ಕಾರ್ಯದರ್ಶಿ ಮಂಜುನಾಥ ಗೊರಗುದ್ದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

​2006-07ನೇ ಸಾಲಿನ ಎಸ್.ಎಸ್.ಎಲ್.ಸಿ. ಹಳೆಯ ವಿದ್ಯಾರ್ಥಿ ವೃಂದದವರು ಈ ಸ್ನೇಹ ಸಮ್ಮಿಲನಕ್ಕೆ ಸರ್ವರಿಗೂ ಆದರದ ಸ್ವಾಗತವನ್ನು ಕೋರಿದ್ದಾರೆ.

Latest articles

More like this