Homeಸುದ್ದಿಗಳುಬೀದರ್ ನಲ್ಲಿ ಝೂಡಿಯಾ ಮಾಲ್ ಮ್ಯಾನೇಜರ್ ಕಿರುಕುಳಕ್ಕೆ ಉದ್ಯೋಗಿ ಬಲಿ.

ಬೀದರ್ ನಲ್ಲಿ ಝೂಡಿಯಾ ಮಾಲ್ ಮ್ಯಾನೇಜರ್ ಕಿರುಕುಳಕ್ಕೆ ಉದ್ಯೋಗಿ ಬಲಿ.

Published on

ಬೀದರ – ಮಾಲ್ ಹಣ ತಿಂದಿದ್ದೀಯಾ ಎಂದು ಜೂಡಿಯಾ‌ ಮಾಲ್ ಉದ್ಯೋಗಿಗೆ ಮ್ಯಾನೇಜರ್ ಕಿರುಕುಳ ಕೊಟ್ಟಿದ್ದರಿಂದ ಮನ ನೊಂದು ಝೂಡಿಯಾದಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮಿಕಾಂತ್ ( 22 ) ಆತ್ಮಹತ್ಯೆ ಮಾಡಿಕೊಂಡಿದ್ದಾನೆ

ಮನೆಯಲ್ಲಿ ಯಾರೂ ಇಲ್ಲದೆ ವೇಳೆ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಅದಕ್ಕಿಂತ ಮುಂಚೆ ತನ್ನ ಮಾತುಗಳನ್ನು ರೆಕಾರ್ಡ್ ಮಾಡಿದ್ದಾನೆ

ಝೂಡಿಯಾ ಮಾಲ್ ಮಾಲೀಕ ಕಿಶೋರ್ ಎಂಬವರು ಉದ್ಯೋಗಿಗೆ ಮಾಲ್ ನಲ್ಲಿ ಹಣ ತಿಂದಿದ್ದಿಯಾ ಎಂದು ಕಿರುಕುಳ ಕೊಡುತ್ತಿದ್ದುದರಿಂದ ಬೇಸತ್ತು ಬೀದರ್ ನಗರದ ರಾಂಪೂರೆ ಕಾಲೋನಿಯ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ

ಬ್ರಿಮ್ಸ್ ಶವಾಗಾರಕ್ಕೆ ಮೃತದೇಹ ರವಾನೆ ಮಾಡಲಾಗಿದೆ. ಬ್ರಿಮ್ಸ್ ಶವಾಗಾರದ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆಯ ಬಗ್ಗೆ ಮೃತನ
ತಂದೆ ಬಸವರಾಜ್ ಎಂಬುವರಿಂದ ಗಾಂಧಿ ಗಂಜ್ ಠಾಣೆಗೆ ದೂರು ಬಂದಿದ್ದು ಗಾಂಧಿ ಗಂಜ್ ಪೊಲೀಸರರು ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿದರು.

ವರದಿ : ನಂದಕುಮಾರ ಕರಂಜೆ, ಬೀದರ

Latest articles

More like this