ಬೀದರ – ಈಶ್ವರ ಖಂಡ್ರೆ ಶಾಸಕರಾಗಿ, ಸಚಿವರಾಗಿ ಸಾಕಷ್ಟು ಅಭಿವೃದ್ದಿ ಕೆಲಸಗಳನ್ನ ಮಾಡಿದ್ದಾರೆ.ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರಾಗಿ ಪ್ರಬಾವಿ ನಾಯಕರಾಗಿ ಹೊರಹೊಮ್ಮಿದ್ದಾರೆ.ಎಲ್ಲ ಸಮುದಾಯದವರಿಗೂ ಆದ್ಯತೆ ನೀಡಿ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ ಆದ್ದರಿಂದ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಕೊಡಬೇಕು ಎಂದು ಸ್ವಾಮೀಜಿಗಳ ಒಕ್ಕೂಟ ಒತ್ತಾಯಿಸಿದೆ.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಾಲ್ಕಿ ಹಿರೇಮಠದ ಗುರುಬಸವ ಪಟ್ಟದ್ದೇವರು, ಶಿವನೆ ಶ್ರೀ ಹಲಬರ್ಗಾ, ಹಾವಗಿಲಿಂಗೇಶ್ವರ ಶಿವಾಚಾರ್ಯರು, ಭೇಮಳಖೇಡ ಸ್ವಾಮೀಜಿ, ಮುಚಳಂಬ ಸ್ವಾಮೀಜಿ, ಸೇರಿದಂತೆ ವಿವಿದ ಮಠಾಧೀಶರು ಈ ಆಗ್ರಹ ಮಾಡಿದರು.
ಈ ಭಾಗದಲ್ಲಿ ಖಂಡ್ರೆ ಪರಿವಾರದ ಕೊಡುಗೆ ಅಪಾರವಾಗಿದೆ. ಅವರನ್ನು ಡಿಸಿಎಂ ಮಾಡಿದ್ರೆ ಕಲ್ಯಾಣ ಕರ್ನಾಟಕ ಇನ್ನಷ್ಟು ಅಭಿವೃದ್ದಿ ಆಗುತ್ತದೆ. ಧರ್ಮಸಿಂಗ್ ನಂತರ ಈ ಭಾಗದವರಿಗೆ ಯಾವುದೇ ಪ್ರಭಾವಿ ಹುದ್ದೆ ಸಿಕ್ಕಿಲ್ಲ. ಹಾಗಾಗಿ ಈ ಬಾರಿ ಸಚಿವ ಖಂಡ್ರೆಯವರಿಗೆ ಡಿಸಿಎಂ ಹುದ್ದೆ ನೀಡಲೇಬೇಕು ಎಂದು ಸ್ವಾಮೀಜಿಗಳು ಒತ್ತಾಯಿಸಿದರು.
ವರದಿ : ನಂದಕುಮಾರ ಕರಂಜೆ, ಬೀದರ