ನಾವು ನಮ್ಮವರು
“ಮುದುಡದ ಭಾವ ಪುಷ್ಪ” ಎನ್ನುವುದು ಪ್ರೀತಿ ಮತ್ತು ಭಾವನೆಗಳ ಶಾಶ್ವತತೆಯನ್ನು ಸೂಚಿಸುವ ಒಂದು ಸುಂದರವಾದ ನುಡಿಗಟ್ಟು. ಇದರ ಅರ್ಥ “ಬಾಡದ ಮನಸ್ಸಿನ ಹೂವು” ಎಂದಾಗುತ್ತದೆ.ಸಾಹಿತ್ಯಿಕ ಮತ್ತು ಸಾಂಸ್ಕೃತಿಕ
ಬದುಕು ಕಟ್ಟಿಕೊಳ್ಳುವ ಸಂದರ್ಭಗಳಲ್ಲಿ ಭಾಗ್ಯಶ್ರೀ ಕೋಟಿ ಇದಕ್ಕೆ ಸೂಕ್ತ ಪದ.
ಭಾವ ಪರವಶ ಮಾನವ ಪ್ರೇಮ ಹೆಚ್ಚಾಗಿ ಮುಪ್ಪಡರಿದರೂ ಬಾಡದ ಅಥವಾ ಕ್ಷೀಣಿಸದ ತೀವ್ರವಾದ ಪ್ರೀತಿಯನ್ನು ಗೆಳತಿ ಭಾಗ್ಯ ಹೊಂದಿದ್ದಾರೆ .ಬದುಕಿನಲ್ಲಿ ತಮ್ಮ ಪ್ರೀತಿಯ ಪತಿ ಸಂಗಮೇಶ ಅವರನ್ನು ಕಳೆದುಕೊಂಡು ಮಾನಸಿಕ ಖಿನ್ನತೆಗೆ ಒಳಗಾದಾಗ ಪ್ರೀತಿಯು ಎಂದಿಗೂ ಸಾಯುವುದಿಲ್ಲ ಮತ್ತು ಅದು ಯಾವಾಗಲೂ ತಾಜಾತನದಿಂದ ಕೂಡಿರುವ ‘ಭಾವ ಪುಷ್ಪ’ದಂತೆ ಎಂದು ತೋರಿಸಿ ಕೊಟ್ಟ ದಿಟ್ಟ ಮಹಿಳೆ ಭಾಗ್ಯಶ್ರೀ ಕೋಟಿ.
ಕಾಲಚಕ್ರದಲ್ಲಿ ಎಲ್ಲವೂ ಬದಲಾದರೂ, ಕೆಲವು ನೆನಪುಗಳು ಅಥವಾ ಸಂಬಂಧಗಳು ಮನಸ್ಸಿನಲ್ಲಿ ‘ಮುದುಡದ ಹೂವಿನಂತೆ’ ಅಚ್ಚಳಿಯದೆ ಉಳಿಯುತ್ತವೆ ಎಂಬ ಭಾವವನ್ನು ಹೊತ್ತು ಮಕ್ಕಳನ್ನು ಸಲಹಿ ಉನ್ನತ ಶಿಕ್ಷಣ ಕೊಡಿಸಿ ಅವರನ್ನು ತಮ್ಮ ಕಾಲ ಮೇಲೆ ನಿಲ್ಲಲು ಪ್ರೇರಣೆ ನೀಡಿದ ಮಹಾತಾಯಿ. ಸಾಹಿತಿ, ಲೇಖಕಿ, ವಿಮರ್ಶಕಿ, ಕವಯಿತ್ರಿ, ವಾಗ್ಮಿ, ನಮ್ಮೆಲ್ಲರ ಮಧ್ಯದ ಸ್ಫೂರ್ತಿಯ ಜೀವ ಸೆಲೆ ಭಾಗ್ಯಶ್ರೀ ಕೋಟಿ.
ತಮ್ಮ ವಿಜ್ಞಾನ ಪದವಿ ಪಡೆದು ಡಿಪ್ಲೊಮಾ ಔಷಧ ವಿಜ್ಞಾನದಲ್ಲಿ ಕೋರ್ಸ್ ಮುಗಿಸಿ ಉದ್ಯೋಗದ ಜೊತೆಗೆ ಕ್ರಿಯಾಶೀಲತೆಯಿಂದ ತಮ್ಮನ್ನು ತಾವು ಸಂಪೂರ್ಣವಾಗಿ ಜೀವನದಲ್ಲಿ ತೊಡಗಿಸಿಕೊಂಡ ಅಪರೂಪದ ಬದುಕಿನ ಯಶೋಗಾಥೆ ಅರ್ಥಪೂರ್ಣ. ಭಾಗ್ಯಶ್ರೀ ಕೋಟಿಯವರು ನಮ್ಮ ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಇದರ ಆಜೀವ ಸದಸ್ಯರು ಮತ್ತು ದತ್ತಿ ದಾಸೋಹಿಗಳು.
ಬಸವ ಜಯಂತಿಯ ದಿನ 55 ವರ್ಷಗಳ ಹಿಂದಿನ ಮಾತು ಇನ್ನು ಕಾರ್ಯಕ್ರಮ ಪ್ರಾರಂಭವಾಗಲು ಸಮಯ ಇದ್ದುದರಿಂದ ಯಾರಾದರೂ ವಚನ ಹಾಡುವಿರಾ?ಎಂದು ಕೇಳಿದ್ದಕ್ಕೆ 3 ವರ್ಷದ ಪುಟ್ಟ ಬಾಲಕಿ ಯಾವ ಭಯ ಇಲ್ಲದೆ ವೇದಿಕೆಗೆ ಬಂದು “ತಂದೆ ನೀನು ತಾಯಿ ನೀನು”ಬಸವಣ್ಣನವರ ವಚನ ಹೇಳಿ ಒಂದು ಸ್ಟೀಲ ಗ್ಲಾಸ್ ಬಹುಮಾನವಾಗಿ ಪಡೆದಿದ್ದಳು. ಮುಂದೆ ಇದೇ ತರಹ ಪೈಗಂಬರ, ಅಂಬೇಡಕರ, ಅಗಸ್ಟ್ 15 ಮತ್ತು ಜನವರಿಯ 26ರಂದು ಭಾಷಣ, ಹಾಡುವುದು ,ನೃತ್ಯ ಮತ್ತು ಅಭ್ಯಾಸದಲ್ಲಿ ತೊಡಗಿಸಿಕೊಂಡು ಮನೆಯ ಅಕ್ಕರೆಯ ಮಗಳಾಗಿ ಸ್ನೇಹಿತೆಯರಿಗೆ ಪ್ರೀತಿಯ ಗೆಳತಿ ಭಾಗ್ಯ ಆಗಿ ಇದ್ದವಳು ಬೇರೆ ಯಾರು ಅಲ್ಲ ಈಗಿನ ಭಾಗ್ಯಶ್ರೀ.ಸಂ.ಕೋಟಿ ಎಂದು ಅವರ ಸಂಬಂಧಿಕರು, ಆಪ್ತರು, ಸ್ನೇಹಿತೆಯರು ಹೆಮ್ಮೆಯಿಂದ ನೆನಪು ಮಾಡಿಕೊಳ್ಳುತ್ತಾರೆ.
9.3.1971ರಲ್ಲಿ ಜಮಖಂಡಿಯ ಪ್ರತಿಷ್ಠಿತ ಮುರಗೋಡ ಮನೆತನದಲ್ಲಿ ಭಾಗ್ಯ ಅವರ ಜನನ. ಅಜ್ಜಿಯ ಒಡನಾಟದಲ್ಲಿ ಜನಪದ ಹಾಡುಗಳನ್ನು ಕಲಿತು,ಮನೆಯಲ್ಲಿ ಎಲ್ಲರಿಗಿಂತ ಚಿಕ್ಕವರಾದ ಇವರು ಸೌಮ್ಯ, ಮ್ರದು ಸ್ವಭಾವದವಳು.ಕೂಡು ಕುಟುಂಬದಿಂದ ಬಂದ ಭಾಗ್ಯ ಎಲ್ಲರಿಗೂ ಅಚ್ಚು ಮೆಚ್ಚು. ಅಕ್ಕಂದಿರ ಮತ್ತು ಅಣ್ಣಂದಿರ ಪ್ರೀತಿಯ ಭಾಗಿ ಆಗಿ ಬೆಳೆದವರು.
ಭಾಗ್ಯ ಅವರು ಪ್ರಾಥಮಿಕ ಶಿಕ್ಷಣವನ್ನು ಬನಶಂಕರಿಯ ಸರಕಾರಿ ಶಾಲೆಯಲ್ಲಿ ಮುಗಿಸಿ 91% ಮಾಡಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದವರು. ಮುಂದೆ GG ಸರಕಾರಿ ಹೆಣ್ಣು ಮಕ್ಕಳ ಶಾಲೆಯಲ್ಲಿ ತಮ್ಮ ಅಭ್ಯಾಸವನ್ನು ಮುಂದುವರೆ ಸಿದರು. ಗಣಿತ ಮತ್ತು ವಿಜ್ಞಾನ ಇವರ ಅಚ್ಚು ಮೆಚ್ಚಿನ ವಿಷಯಗಳಾಗಿದ್ದವು. ಇದರ ಜೊತೆಗೆ ಸಂಸ್ಕೃತ. ಸಂಗೀತ, ಆಟಗಳಲ್ಲಿ ಎತ್ತಿದ ಕೈ. ಅಲ್ಲಿಯೂ ಗುರುಗಳ ಮಾರ್ಗದರ್ಶನದಂತೆ SSLCಯಲ್ಲಿ 84%ಮಾಡುವುದರ ಮೂಲಕ ಶಾಲೆಗೆ ದ್ವಿತೀಯ ಸ್ಥಾನ ಪಡೆದುಕೊಂಡರು.
BLDE TGP arts and science college ಸೇರ್ಪಡೆಯಾಗಿ ಅಲ್ಲಿಯೂ ಕೂಡ ಉನ್ನತ ಶ್ರೇಣಿಯಲ್ಲಿ ಪಾಸುಮಾಡಿ, ತಂದೆಯ ಅನಾರೋಗ್ಯದ ಕಾರಣ ಮೆಡಿಕಲ್ ಇಂಜನಿಯರಿಂಗ ಹೋಗದೆ BSc ಗೆ ಸೇರಿಕೊಂಡರು .
ಹುನಗುಂದದ ಚೆನ್ನಪ್ಪ ಕೋಟಿ ಶಿಕ್ಷಕರ ಮಗನಾದ ಸಂಗಮೇಶ ಕೋಟಿಯವರ ಧರ್ಮಪತ್ನಿಯಾಗಿ ಸಂಸಾರ
ಶುರುವಾಯಿತು.
ಅವರ ಪ್ರೀತಿಯ ಪತಿ LIC ಆಫೀಸರ ಆಗಿ ಕೆಲಸ ಮಾಡುತ್ತಿದ್ದರು. ಬಸವಣ್ಣನ ವಚನದಂತೆ ಸತಿಪತಿಗಳಲ್ಲಿ ಒಂದಾದ ಭಕ್ತಿ ಶಿವನಿಗೊಪ್ಪುವುದು ಎಂಬಂತೆ ಇದ್ದರು. ಮನೆಯ ಹಿರಿಯ ಸೊಸೆಯಾಗಿ ಎಲ್ಲ ಜವಾಬ್ದಾರಿಯನ್ನು ಹೊತ್ತು ಒಂದು ಸುಂದರ ಗಂಡು ಮಗು ಶ್ರೀಶ ಮತ್ತು ಹೆಣ್ಣು ಮಗಳು ಸ್ರಷ್ಠಿಗೆ ಜನ್ಮ ನೀಡಿದರು.ದೇವರು ಕೇಳದೆ ಎಲ್ಲವನ್ನೂ ಕೊಟ್ಟಿದ್ದ,
ಅವರ ಪತಿ ಒಬ್ಬ ಸಾಹಿತಿಯಾಗಿ ಸಮಾಜದಲ್ಲಿ ಉನ್ನತ ಸ್ಥಾನಮಾನವನ್ನು ಕಾಪಾಡಿಕೊಂಡುವರು. ಎಂಟು ಪುಸ್ತಕಗಳನ್ನು ಬರೆದು, ಸಾಕಷ್ಟು ಪ್ರಶಸ್ತಿಗಳನ್ನು ಪಡೆದುಕೊಂಡವರು, ಅದರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,ಅತ್ತಿಮಬ್ಬೆ ಪ್ರಶಸ್ತಿ,ಯುವ ಲೇಖಕರ ಪ್ರಶಸ್ತಿ.ಚಿಕ್ಕೋಡಿ ತಮ್ಮಪ್ಪಣ್ಣ ಇನ್ನೂ ಅನೇಕ ಪ್ರಶಸ್ತಿಗಳು ಇವರ ಮುಡಿಗೇರಿದ್ದವು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿಯಾಗಿ, ಕರ್ನಾಟಕ ಸರ್ಕಾರ ಅಕಾಡೆಮಿಯ ಸದಸ್ಯರಾಗಿ. ದುಬೈ ನಲ್ಲಿ ಕವಿಗೋಷ್ಠಿ. ಮೈಸೂರಿನ ದಸರೆಯ ಕವಿಗೋಷ್ಠಿ,ದೆಹಲಿಯ ಕನ್ನಡ ಸಂಘದಲ್ಲಿ ಅಧ್ಯಕ್ಷ ರಾಗಿ ಭಾಗವಹಿಸಿದ್ದರು.
ಹೀಗೆ ಅನೇಕ ಸಾಹಿತಿಗಳ ಒಡನಾಟ. ಸಂಗೀತಕಾರರ ಒಡನಾಟ. ಶ್ರೀ ಸಿದ್ಧೇಶ್ವರ ಅಪ್ಪಾಜಿಯವರ ನೆಚ್ಚಿನ ಶಿಷ್ಯನಾಗಿ ಬಸವಣ್ಣರ ಕಾಯಕ ವೇ ಕೈಲಾಸ ಎಂದು ನಂಬಿ ದುಡಿದು ದಿನಾಲೂ ತಮ್ಮ ಮಡದಿ ಮಕ್ಕಳ ಜೊತೆಗೆ ದಾಸೋಹವನ್ನು ದಾನವನ್ನು ತಪ್ಪದೆ ಮಾಡುತ್ತಿದ್ದರು. ಮಕ್ಕಳಿಬ್ಬರು ಒಳ್ಳೆಯ ಶಿಕ್ಷಣ ವನ್ನು ಪಡೆದು ಮಗ ಇಂಜಿನಿಯರ ಆಗಿ ಬೆಂಗಳೂರಿನಲ್ಲಿ ಕೆಲಸಮಾಡುತ್ತಿದ್ದನು. ಮಗಳು ಬಿಜಾಪುರದಲ್ಲಿ ಮೆಡಿಕಲ್ ಓದುತ್ತಿದ್ದಳು.
ಪತಿ ಪತ್ನಿಯರ ಸ್ವಭಾವದಂತೆ ದೇವರು ಎಲ್ಲವನ್ನೂ ಕೊಟ್ಟು ಮರೆತಿದ್ದ. ಚೆoದದ ಸುಂದರ ಸಂಸಾರದಲ್ಲಿ ಸಿಡಿಲು ಬಡಿಯಿತು. ಭಾಗ್ಯಳ ಪತಿ ಸಂಗಮೇಶರ ಸಕ್ಕರೆಯ ಕಾಯಿಲೆಯಿಂದ 2 ಕಿಡ್ನಿಗಳು ಕೆಲಸ ಮಾಡುವುದನ್ನು ನಿಲ್ಲಿಸಿದ್ದವು. ಯಾವಾಗಲೂ I am on the wheels ಎಂದು ಹೇಳುತ್ತಿದ್ದ ಪತಿಯ ಅನಾರೋಗ್ಯದಿಂದ ಭಾಗ್ಯ ಮತ್ತು ಮಕ್ಕಳು ಎಲ್ಲ ಸಂಬಂಧಿಕರು, ಡಾಕ್ಟರಗಳ ಗುಂಪು ಅವರನ್ನು ಉಳಿಸಿಕೊಳ್ಳಲಾಗಲಿಲ್ಲ.
ಭಾಗ್ಯ ಅವರ ಬದುಕಾಗಿದ್ದ ಜೀವನ ಸಂಗಾತಿಯ ನಿರ್ಗ ಮನದಿಂದ ಭಾಗ್ಯ ಅವರು ಚಿಂತಿತರಾಗಿ ಮನೋರೋಗಕ್ಕೆ ತಿರುಗಿದರು.
ಅಂದಿನಿಂದ ಔಷಧಗಳನ್ನು ತೆಗೆದುಕೊಂಡು ಮಕ್ಕಳ ಸಲುವಾಗಿ ಜೀವನ ಸಾಗಿಸುತ್ತಿದ್ದರು. ಇಲಕಲ್ ಮಹಾಂತ ಗುರುಗಳ ನಿರ್ಣಯದಂತೆ ಭಾಗ್ಯಅವರನ್ನು ಕರ್ನಾಟಕ ಸರ್ಕಾರ ವಚನ ಸಾಹಿತ್ಯದ ಮಹಾಲಿಂಗಪೂರ ಘಟಕದ ಅಧ್ಯಕ್ಷೆಯನ್ನಾಗಿ ನೇಮಕ ಮಾಡಲಾಯಿತು. ಪತಿಯ ಸಾಹಿತ್ಯ ಗರಡಿಯಲ್ಲಿ ಬೆಳದ ಭಾಗ್ಯ ಅವರು ಮನೆಯಲ್ಲಿ ಮಹಾಮನೆ, ಶಾಲೆ ಶಾಲೆಗೆ ವಚನ ಪ್ರಚಾರವನ್ನು ಮಾಡುತ್ತ, ವಚನಕಾರರ ಜೀವನ ಚರಿತ್ರೆಯನ್ನು ಹೇಳುತ್ತ ಮುನ್ನಡೆದರು.
ಮಗನ ನೌಕರಿಯ ನಿಮಿತ್ತ ಜಮಖಂಡಿಗೆ ಬಂದ ಭಾಗ್ಯ ಅವರು,ಅನೇಕ ಸಂಘ ಸಂಸ್ಥೆಗಳ ಸದಸ್ಯೆಯಾಗಿ ಜೀವನವನ್ನು ಮುನ್ನೆಡೆಸಿದರು.
ಡಾ ಶಶಿಕಾಂತ ಪಟ್ಟಣ – ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ ಪುಣೆಯ ಸಂಸ್ಥಾಪಕರಾದ ಇವರು, ಸಂಗಮೇಶ ಕೋಟಿಯವರ ಸ್ನೇಹಿತರು ಭಾಗ್ಯ ಅವರಿಗೆ ಬರೆಯಲು ಪ್ರೋತ್ಸಾಹಿಸಿದವರೇ ಇವರು. ಏನೂ ಬರೆಯಲು, ಟೈಪ ಮಾಡಲು ಬರದ ಇದ್ದ ಭಾಗ್ಯಅವರನ್ನು ತಿದ್ದಿ ,ಬರೆಯಲು ಹಚ್ಚಿ ಈಗ ಸಾಹಿತಿ ಭಾಗ್ಯಶ್ರೀಯನ್ನು ಮಾಡಿದ ಶ್ರೇಯಷ್ಯು ಪಟ್ಟಣ ಸರ್ ಗೆ ಸಲ್ಲುತ್ತದೆ. ಸದ್ಯ ಭಾಗ್ಯ ಅವರು ಜಮಖಂಡಿಯ ಜಾಗತಿಕ ಲಿಂಗಾಯತ ಸಮುದಾಯದ ಮಹಿಳಾ ಸಂಘದ ಅಧ್ಯಕ್ಷೆಯಾಗಿ,ಫ ಗು ಹಳಕಟ್ಟಿ ಪ್ರತಿಷ್ಠಾನದ ಜಮಖಂಡಿ ತಾಲ್ಲೂಕಿನ ಅಧ್ಯಕ್ಷೈಯಾಗಿ, ಜ್ಞಾನ ವಿಜ್ಞಾನ ಪರಿಷತ್ತಿನ ಜಿಲ್ಲಾ ಉಪಾಧ್ಯಕ್ಷೆಯಾಗಿ. ವಿಜ್ಞಾನ ಸಂಶೋಧನ ಕೇಂದ್ರ ಜಮಖಂಡಿಯ ಉಪಾಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮಗ ಮತ್ತು ಮಗಳ ಮದುವೆ ಮಾಡಿ ಮೊಮ್ಮಗಳೊಂದಿಗೆ ತಮ್ಮ ಪತಿ ನಡೆದ ದಾರಿಯನ್ನು ಅನುಸರಿಸುತ್ತಿರುವ ಭಾಗ್ಯ ಅವರು ಮತ್ತೊಬ್ಬರಿಗೆ ಮಾದರಿಯ ಹೆಣ್ಣು ಮಗಳಾಗಿದ್ದಾರೆ.
ಭಾಗ್ಯ ಅವರಿಗೆ ಬೆಳಗಾವಿಯ ವಕೀಲರ ಸಂಘದಿಂದ “ಗಂಗಾಬಿಕೆ ಪ್ರಶಸ್ತಿ” ಮುಧೋಳದ ಮಲಘಾಣ ಶಾಲೆಯಿಂದ “ಸಂಗಮನಾಥ ಪ್ರಶಸ್ತಿ” Book of records ಶ್ರೀ ಸಿದ್ಧೇಶ್ವರ ಅಪ್ಪಾಜೀಯವರ ಪ್ರಶಸ್ತಿ.ಬಸವ ಕಾಯಕ ರತ್ನ ಪ್ರಶಸ್ತಿ ಕೂಡಲಸಂಗಮ ಶರಣ ಸಾಹಿತ್ಯ ವೇದಿಕೆಯಿಂದ, ಸಮಾಜ ರತ್ನ ಮತ್ತು ಕಾವ್ಯ ರತ್ನ ಪ್ರಶಸ್ತಿಗಳನ್ನು ಪ್ರೊಫೆಸರ ಮಟೋಳಿ ಗುರುಗಳಿಂದ. ಅಕ್ಕನ ಅರಿವು ವಿಜಯಪುರ ಜಿಲ್ಲಾ ಘಟಕದಿಂದ ಬಸವ ಕಾಯಕ ರತ್ನ ಪ್ರಶಸ್ತಿಗಳು ಲಭಿಸಿವೆ.
ಜಮಖಂಡಿಯ ಬಸವಕೇಂದ್ರದ ರವಿಯಣ್ಣ, ಅವರ ಮಗ, ಮಗಳು, ಸೊಸೆ,ಅಳಿಯ ಮತ್ತು ಮೊಮ್ಮಗಳು .ಕನ್ನಡ ಕವನ ಕಾವ್ಯ ಕೊಟದ ಎಲ್ಲ ಶರಣರಿಗೂ ಮತ್ತು ಮಹಾಂತೇಶ ಗಜೇಂದ್ರಗಡ ಅ ಣ್ಣ ಅವರಿಗೂ, ಶಶಿಕಾಂತ ಪಟ್ಟಣ ಸರ್ ಗೂ ಭಾಗ್ಯ ಅವರು ಯಾವಾಗಲೂ ಚಿರಋಣಿಯಾಗಿದ್ದಾರೆ.ಭಾಗ್ಯ ಅವರು ಸದ್ಯದಲ್ಲೇ ಕವನ ಸಂಕಲನ ಮತ್ತು ಅನೇಕ ಅಂಕಣಗಳ ಪುಸ್ತಕಗಳನ್ನು ಹೊರತರಲಿದ್ದಾರೆ.
ಯಾವತ್ತೂ ನಗುಮೊಗದ ಉತ್ಸಾಹಿ, ಸರಳ, ಸುಂದರ ಮನದ, ನಿಷ್ಕಲ್ಮಶ ಸ್ವಭಾವದ, ಸಕಾರಾತ್ಮಕ ನಿಲುವುಳ್ಳ, ಎಲ್ಲರ ಜೊತೆಗೆ ಚೆಂದದಿಂದ ಬೆರೆಯುವ ಭಾಗ್ಯ ಅವರನ್ನು ನಿಮಗೆಲ್ಲರಿಗೂ ಪರಿಚಯ ಮಾಡುತ್ತಿರುವುದು ಅತ್ಯಂತ ಸಂತೋಷದ ವಿಚಾರ.
ಸುಧಾ ಪಾಟೀಲ
ವಿಶ್ವಸ್ಥರು ( Trustee )
ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ