Homeಸುದ್ದಿಗಳುಮೊಬೈಲ್ ಕಳೆದರೆ ತಪ್ಪದೆ ಈ ಕೆಲಸ ಮಾಡಿ ; ಮಾಹಿತಿ ನೀಡಿದ ಬಾಗಲಕೋಟೆ ಎಸ್ ಪಿ 

ಮೊಬೈಲ್ ಕಳೆದರೆ ತಪ್ಪದೆ ಈ ಕೆಲಸ ಮಾಡಿ ; ಮಾಹಿತಿ ನೀಡಿದ ಬಾಗಲಕೋಟೆ ಎಸ್ ಪಿ 

Published on

ಮಹಾಲಿಂಗಪುರ : ಮೊಬೈಲ್‌ ಕಳುವಾದಾಗ ಸಾರ್ವಜನಿಕರು ಸಿಇಐಆರ್ ಪೋರ್ಟಲ್ ಮೂಲಕ ಕಂಪ್ಲೇಟ್ ರಿಜಿಸ್ಟರ್ ಮಾಡಿದರೆ ಮೊಬೈಲ್ ಹುಡುಕುವ ಕೆಲಸ ಸಲೀಸಾಗುತ್ತದೆ ಎಂದು ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ್ ಗೋಯಲ್ ಮಾಹಿತಿ ನೀಡಿದರು.

ಮಹಾಲಿಂಗಪುರ ಪೊಲೀಸ್ ಠಾಣೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊಬೈಲ್‌ ಕಳೆದುಕೊಂಡವರು ಸಿಇಐಆರ್ ಪೋರ್ಟಲ್ ನಲ್ಲಿ ರಿಜಿಸ್ಟರ್ ಮಾಡಿದರೆ ಕಳುವಾದ ಫೋನನ್ನು ಬೇರೆ ಯಾರಾದರೂ ಬಳಕೆ ಮಾಡುತ್ತಿದ್ದರೆ ಮೊಬೈಲ್ ಮಾಲೀಕರಿಗೆ ಹಾಗೂ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ರವಾಣೆಯಾಗುತ್ತದೆ ಇದರಿಂದ ಕಳೆದ ಫೋನ ಹುಡುಕಲು ನೆರವಾಗುತ್ತದೆ ಎಂದು ತಿಳಿಸಿದರು.

 ಪತ್ತೆ ಮಾಡಿದ‌ 30 ಮೊಬೈಲ್ ಮಾಲೀಕರಿಗೆ ಹಸ್ತಾಂತರ
ಈ ಮಧ್ಯೆ ಕಳುವು ಪ್ರಕರಣದಲ್ಲಿ ಪತ್ತೆಯಾದ 30 ಮೊಬೈಲ್ ಗಳನ್ನು ಪೊಲೀಸರು ಅವುಗಳನ್ನು ಆಯಾ ಮಾಲೀಕರಿಗೆ ಹಸ್ತಾಂತರಿಸಿದರು.

ಮಹಾಲಿಂಗಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೊಬೈಲ್ ಕಳ್ಳತನಗೊಂಡಿದ್ದು, ಅವುಗಳ ಮಾಲೀಕರು CEIR ಪೋರ್ಟಲ್ ಮೂಲಕ ದೂರು ದಾಖಲಿಸಿದ್ದರು. ಅವುಗಳನ್ನು ಪತ್ತೆ ಹಚ್ಚಿ ಮಾಲೀಕರಿಗೆ ಮರಳಿಸಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ್ ಗೋಯಲ್, ಡಿವೈಎಸ್ಪಿ ಸೈಯ್ಯದ್ ರೋಷನ್ ಜಮೀರ, ಸಿಪಿಐ ಆರ್.ಆರ್. ಪಾಟೀಲ ಪಿಎಸ್ಐಗಳಾದ ಕಿರಣ ಸತ್ತಿಗೇರಿ ಹಾಗೂ ಶಾಂತಾ ಹಳ್ಳಿ ಸೇರಿದಂತೆ ಇತರರು ಇದ್ದರು.

Latest articles

More like this