Homeಸುದ್ದಿಗಳುಬೆಂಗಳೂರಿನಲ್ಲಿ ಸರ್ವ ಸೇವಾ ಸಂಘದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆ

ಬೆಂಗಳೂರಿನಲ್ಲಿ ಸರ್ವ ಸೇವಾ ಸಂಘದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆ

Published on

ಬೆಂಗಳೂರು –  ವರ್ಧಾದ ಸರ್ವ ಸೇವಾ ಸಂಘದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯು ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯಿತು.

   ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಚಂದನ್‌ಪಾಲ್ ವಹಿಸಿ ಪ್ರಾರಂಭಿಕ ಮಾತುಗಳನ್ನಾಡಿದರು. ಗಾಂಧಿ ಚಿಂತನೆ ಮತ್ತು ಸರ್ವೋದಯ ತತ್ವಗಳ ಪ್ರಸ್ತುತತೆ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಗಾಂಧಿ ಭವನದ ಕಾರ್ಯದರ್ಶಿ ಎಂ.ಸಿ. ನರೇಂದ್ರ ಹಾಗೂ ಗಾಂಧಿ ಸ್ಮಾರಕ ನಿಧಿ, ನವದೆಹಲಿಯ ಮಹಾ ಕಾರ್ಯದರ್ಶಿ ಸಂಜಯ್ ಸಿಂಗ್ ಮಾತನಾಡಿ, ಗಾಂಧೀಜಿ ಅವರ ಮೌಲ್ಯಗಳು ಇಂದಿನ ಸಮಾಜದಲ್ಲಿ ಇನ್ನಷ್ಟು ಪ್ರಸ್ತುತವಾಗಿವೆ ಎಂದು ಅಭಿಪ್ರಾಯಪಟ್ಟರು.

ಡಾ. ಎಚ್.ಎಸ್. ಸುರೇಶ್ ಎಲ್ಲರನ್ನು ಸ್ವಾಗತಿಸಿದರು. ಕರ್ನಾಟಕ ರಾಜ್ಯ ಸರ್ವೋದಯ ಮಂಡಳಿಯ ಅಧ್ಯಕ್ಷ ಡಾ. ವೈ.ಸಿ. ದೊಡ್ಡಯ್ಯ ಮತ್ತುರಾಷ್ಟ್ರೀಯ ಯುವ ಪ್ರಕೋಷ್ಟದ ಸಂಘಟಕ ಡಾ.ವಿ.ಪ್ರಶಾಂತ ಉಪಸ್ಥಿತರಿದ್ದರು.

ಎರಡು ದಿನಗಳ ಈ ಸಭೆಯಲ್ಲಿ ಸಂಘದ ವಿವಿಧ ಚಟುವಟಿಕೆಗಳು, ಭವಿಷ್ಯದ ಕಾರ್ಯಕ್ರಮಗಳು ಹಾಗೂ ಸರ್ವೋದಯ ಚಳವಳಿಯ ಬಲವರ್ಧನೆ ಕುರಿತಂತೆ ಚರ್ಚೆಗಳು ನಡೆಯಿತು

Latest articles

More like this