Homeಸುದ್ದಿಗಳುನೀಟ್ ನಲ್ಲಿ 355ನೆಯ Rank ಗಳಿಸಿದ ಅಂಕಿತ ಅಶೋಕ ದೊಡವಾಡಗೆ ಸನ್ಮಾನ

ನೀಟ್ ನಲ್ಲಿ 355ನೆಯ Rank ಗಳಿಸಿದ ಅಂಕಿತ ಅಶೋಕ ದೊಡವಾಡಗೆ ಸನ್ಮಾನ

Published on

ಬೈಲಹೊಂಗಲ – 2026 ನೇ ಸಾಲಿನ ನೀಟ್ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು ಬೈಲಹೊಂಗಲ ನಗರದ ಮಲಪ್ರಭಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಸ್ತ್ರೀ ರೋಗ ಮತ್ತು ಹೆರಿಗೆ ತಜ್ಞ ವೈದ್ಯರಾದ ಡಾ.ವಿಜಯಲಕ್ಷ್ಮಿ ಅಶೋಕ ದೊಡವಾಡ, ಡಾ.ಅಶೋಕ ಮಲ್ಲಪ್ಪ ದೊಡವಾಡ ದಂಪತಿಗಳ ಪುತ್ರನಾದ ಅಂಕಿತ ಅಶೋಕ ದೊಡವಾಡ ಇವನು ನೀಟ್ ನಲ್ಲಿ 720 ರಲ್ಲಿ 676 ಅಂಕ ಪಡೆದು ದೇಶಕ್ಕೆ 355 ನೇ ರ್ಯಾಂಕ್ ಗಳಿಸಿ ಬೆಳಗಾವಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ನೀಟ್ ಯುಜಿ 2026 ರ ಪರೀಕ್ಷೆಯಲ್ಲಿ 11,21,185 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ, ಅವರಲ್ಲಿ ಅಂಕಿತನು 355 ನೇ ರ್ಯಾಂಕ್ ಗಳಿಸಿ ಸಾಧನೆ ಮಾಡಿದ್ದಾನೆ. ಮಂಗಳೂರಿನ ಎಕ್ಸಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯಾದ 355 ನೇ ರ್ಯಾಂಕ್ ಗಳಿಸಿ ಬೆಳಗಾವಿ ಜಿಲ್ಲೆಗೆ ಕೀರ್ತಿತಂದ ಅಂಕಿತ ಅಶೋಕ ದೊಡವಾಡ ಅವರನ್ನು ಕರ್ನಾಟಕ ಸರ್ಕಾರದ ಧಾರವಾಡ ರಂಗಾಯಣದ ನಿಕಟಪೂರ್ವ ನಿರ್ದೇಶಕರಾದ ರಮೇಶ ಸೂರನಾಯ್ಕ ಪರವಿನಾಯ್ಕರ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷ ಮೋಹನ ಬಸನಗೌಡ ಪಾಟೀಲ, ತಾಲೂಕಾ ಕಜಾಪ ವಕ್ತಾರ ಮಹಾಂತೇಶ ರಾಜಗೋಳಿ, ಹಾಗೂ ಗೆಳೆಯರ ಬಳಗ ಕಿತ್ತೂರು ಚೆನ್ನಮ್ಮ ನಗರದ ಅವರ ನಿವಾಸದಲ್ಲಿ ಸನ್ಮಾನಿಸಿ ಅಭಿನಂದಿಸಿ, ಶುಭ ಕೋರಿ ಅಂಕಿತ ಅವರು ವೈದ್ಯಕೀಯ ಕ್ಷೇತ್ರದಲ್ಲಿ ವಿಶ್ವಮಟ್ಟದಲ್ಲಿ ಸಾಧನೆ ಮಾಡುವರೆಂದು ತಿಳಿಸಿದರು.

Latest articles

More like this