ಗೋಕಾಕ – ಸಾಧನೆ ಎನ್ನುವುದು ಶ್ರಮದಿಂದ ಬರುತ್ತದೆ. ವಿದ್ಯಾರ್ಥಿಗಳು ಶ್ರಮಪಟ್ಟು ಓದುವ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು.ಅದರ ಜೊತೆಗೆ ಅನೇಕ ಸಾಹಸಿಗರು ಸಾಧಿಸಿದ ವ್ಯಕ್ತಿ ಚಿತ್ರಣಗಳನ್ನು ಅಧ್ಯಯನ ಮಾಡಬೇಕು ಜೀವನದಲ್ಲಿ ಏನಾದರೊಂದು ಸಾಧಿಸಬೇಕು ಎಂದು ಹಿರಿಯ ಸಾಹಿತಿ ಪ್ರೊ. ಚಂದ್ರಶೇಖರ ಅಕ್ಕಿ ಹೇಳಿದರು.
ಸರಕಾರಿ ಪದವಿಪೂರ್ವ ಕಾಲೇಜು ಖನಗಾಂವದಲ್ಲಿ (ಕೆಪಿಎಸ್ )ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರೊ ಚಂದ್ರಶೇಖರ ಅಕ್ಕಿ ಅವರು ಆಗಮಿಸಿ ವಿದ್ಯಾರ್ಥಿಗಳಿಗೆ ಹಿತ ನುಡಿಗಳನ್ನು ಹೇಳಿದರು. ಸ್ಥಳೀಯ ಶಿಕ್ಷಣ ಪ್ರೇಮಿಗಳಾದ ಸಿದ್ದಪ್ಪ ದೇಸಾಯಿ ,ಪಿ ಎಮ್ ವನ್ನೂರ ಅವರು ಮಾತನಾಡಿದರು.
ಎಸ್ ಡಿ ಎಮ್ ಸಿ ಉಪಾಧ್ಯಕ್ಷರಾದ ಶಂಕರ ನಾಯಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಹಿರಿಯರಾದ ಸಿದ್ದಗೌಡ ಪಾಟೀಲ, ಚಂದ್ರಪ್ಪ ಗಸ್ತಿ, ಮುಖ್ಯೋಪಾಧ್ಯಾಯರಾದ ಶ್ರೀಕಾಂತ್ ನ್ಯಾಮಗೌಡ, ಬಿ ಎನ್ ಬಸಟ್ಟಿ , ಹೂಲಿ, ಗಾಣಗಿ, ಹಕಾರಿ, ಹಾಜರಿದ್ದರು.
ಸ್ವಾಗತ ಹಾಗೂ ಪ್ರಾಸ್ತಾವಿಕವಾಗಿ, ಡಾ ಸಾವಿತ್ರಿ ಕಮಲಾಪೂರ ಪ್ರಾಚಾರ್ಯರು ಮಾತನಾಡಿ, ವಿದ್ಯಾರ್ಥಿಗಳ ಸಾಧನೆಗೆ ತಂದೆ ತಾಯಿ, ಪರಿಸರ ಕಾರಣವಾಗಿದ್ದು , ಅಭ್ಯಾಸದತ್ತ ಆಸಕ್ತಿ ಮೂಡಿಸಿಕೊಂಡು , ಉತ್ತಮ ಸಂಸ್ಕಾರ ದೊಂದಿಗೆ ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾಗಿ, ತಂದೆ ತಾಯಿ ಹಾಗೂ ಶಿಕ್ಷಕರಿಗೆ ಕೀರ್ತಿವಂತರಾಗಿ ಎನ್ನುವ ಕಳಕಳಿಯನ್ನು ವ್ಯಕ್ತಪಡಿಸಿದರು.
ಅತಿಥಿಗಳಿಂದ ವಿವಿಧ ಚಟುವಟಿಕೆಗಳ ಉದ್ಘಾಟನೆ ಮಾಡಿಸಲಾಯಿತು . ಯಲ್ಲಪ್ಪ ಬಾರಿಮರದ ಕಾರ್ಯಕ್ರಮ ನಿರೂಪಿಸಿದರು.ಪ್ರೇಮಾ ದಿನ್ನಿಮನಿ ವಂದಿಸಿದರು.