Homeಸುದ್ದಿಗಳುಎಂದೂ ರಾಜಕಾರಣಕ್ಕಿಳಿಯದ ತಾಯಿ ಚೆನ್ನಮ್ಮ ದೇವೇಗೌಡ

ಎಂದೂ ರಾಜಕಾರಣಕ್ಕಿಳಿಯದ ತಾಯಿ ಚೆನ್ನಮ್ಮ ದೇವೇಗೌಡ

Published on

ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರ ಧರ್ಮಪತ್ನಿ ಶ್ರೀಮತಿ ಚೆನ್ನಮ್ಮ ದೇವೇಗೌಡ ವಯೋಸಹಜ ಕಾಯಿಲೆಯಿಂದ ಅಸುನೀಗಿದ್ದಾರೆ.ಅವರಿಗೆ  ಹೃದಯಪೂರ್ವಕ ಶ್ರದ್ಧಾಂಜಲಿ ಅರ್ಪಿಸುತ್ತೇವೆ.

ನಮಗೆ ಆತ್ಮೀಯರಾಗಿದ್ದರು, ಯಾವತ್ತೂ ದೇವೇಗೌಡರ ಯೋಗಕ್ಷೇಮ ಅವರೇ ನೋಡಿಕೊಳ್ಳುತ್ತಿದ್ದರು, ಆದರೂ ಅವರು ಎಂದು ರಾಜಕೀಯದಲ್ಲಿ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿಲ್ಲ. ನಾವು ವಿಧಾನ ಸಭೆ ಟಿಕೆಟ್ ಕೇಳಲು ಹೋಗಿದ್ದಾಗ, ನಮಗೆ ಟಿಕೆಟ್ ಬಿ ಫಾರ್ಮ್ ಕೊಡಲು ಸಿಫಾರಸ್ಸು ಮಾಡಲು ಕೇಳಿದ್ದೆವು, ಆವಾಗ ಫಾರ್ಮ್ ಹೇಗೆ ಇರುತ್ತದೆ ತೋರಿಸಿ ನಾನು ದೇವೇಗೌಡರ ಹತ್ತಿರ ಇಸಿದುಕೊಳ್ಳುತ್ತೇನೆ, ಏಕೆಂದರೆ ನೀವು ಕುಟುಂಬ ಸದಸ್ಯರು ಇದ್ದ ಹಾಗೆ, ಏನಾದರೂ ಮಾಡಿ ಕೊಡಿಸುತ್ತೇನೆ ಎಂದು ಹೇಳಿದರು. 2008ರಲ್ಲಿ ಬೀದರ ಉತ್ತರ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಶ್ರೀಮತಿ ರಾಜಶ್ರೀ ಶ್ರೀಕಾಂತ ಸ್ವಾಮಿಯವರಿಗೆ ಅವರಿಂದಲೇ ಬಿ ಫಾರ್ಮ ನೀಡಲಾಗಿತ್ತು.

ನಾವು ಅವರ ಮನೆಗೆ ಹೋಗಿದ್ದಾಗ ಜಂಗಮರು ನಮ್ಮ ಮನೆಯಲ್ಲಿ ಊಟ ಮಾಡುತ್ತೀರಾ, ನಾವು ಕೇವಲ ಸಸ್ಯಾಹಾರ ಮಾತ್ರ ತಿನ್ನುತ್ತೇವೆ ಎಂದು ಹೇಳಿದರು, ಯಾವಾಗಲೂ ಊಟ ಉಪಚಾರ ಮಾಡಿಸುತ್ತಿದ್ದರು. 2013ರಲ್ಲಿ ನಾವು ಬೆಂಗಳೂರಿನಲ್ಲಿ mahindra XUV 5OO ಖರೀದಿ ಮಾಡಿದ್ದಾಗ ಅವರ ಕೈಯಿಂದ ಪೂಜೆ ಮಾಡಿಸಿದ್ದೆವು, ಹಾಗೆ ಹೊಸ ವರ್ಷ ಎಂದು 1ಜನವರಿ 2013 ಅವರು ನಮ್ಮ ವೆಹಿಕಲ್ ನಲ್ಲಿ ಕೂತು ಮಂದಿರಕ್ಕೆ ಕರೆದುಕೊಂಡು ಹೋಗಿ ದೇವರ ದರ್ಶನ ಮಾಡಿಸಿದ್ದರು.

ಅವರ ಕುಟುಂಬಕ್ಕೆ ಈ ಒಂದು ದುಃಖ ಸಹಿಸಿಕೊಳ್ಳುವ ಶಕ್ತಿ ನೀಡಲಿ ಎಂದು ದೇವರು ಸೃಷ್ಟಿಕರ್ತ ಲಿಂಗದೇವರು, ಪರಶಿವ ಮತ್ತು ವಿಶ್ವಗುರು ಬಸವಣ್ಣನವರಲ್ಲಿ ಪ್ರಾರ್ಥಿಸುತ್ತೇವೆ.

ಶ್ರೀಮತಿ ರಾಜಶ್ರೀ ಶ್ರೀಕಾಂತ ಸ್ವಾಮಿ, ರಾಜ್ಯ ಉಪಾಧ್ಯಕ್ಷರು, ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಮತ್ತು ಮಾಜಿ ಅಧ್ಯಕ್ಷೆ ಜಿಲ್ಲಾ ಪಂಚಾಯತ್ ಬೀದರ. ಶ್ರೀ ಶ್ರೀಕಾಂತ ಸ್ವಾಮಿ, ಕರ್ನಾಟಕ ರಾಜ್ಯ ಸಂಚಾಲಕ, ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ.

Latest articles

More like this