ಹುನಗುಂದ: ಕಿತ್ತೂರು ಚೆನ್ನಮ್ಮ ದೇಶಪ್ರೇಮ, ತ್ಯಾಗ, ಮತ್ತು ಶೌರ್ಯದ ಪ್ರತೀಕ ಎಂದು ಶಿಕ್ಷಕ ಎಸ್ ಎಲ್ ಕಣಗಿ ಹೇಳಿದರು.
ಅವರು ತಾಲೂಕಿನ ಹೊನ್ನರಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಸ್ವಾರ್ಥ ಮತ್ತು ದುರಾಸೆಗಾಗಿ ಭಾರತೀಯ ಸ್ಥಳೀಯ ರಾಜರ ಮೇಲೆ ಕುತಂತ್ರದ ಕಾನೂನು ಬಳಸಿ ಆಸ್ಥಾನಗಳನ್ನು ಕಬಳಿಸುತ್ತಿದ್ದ ಬ್ರಿಟಿಷರ ವಿರುದ್ಧ ಸಿಡಿದದ್ದು ಶೌರ್ಯ ಸಾಹಸ ಮೆರೆದ ಕಿತ್ತೂರು ಚೆನ್ನಮ್ಮ ಇಂದಿನ ಮಹಿಳೆಯರಿಗೆ ಆದರ್ಶಪ್ರಾಯಳಾಗಿದ್ದಾಳೆ. ಬ್ರಿಟಿಷರನ್ನು ಭಾರತದಿಂದ ಹೊಡೆದೋಡಿಸಲು ರಣರಂಗದಲ್ಲಿ ವೀರಾವೇಷದಿಂದ ಹೋರಾಡಿ, ದೇಶಪ್ರೇಮ ಮೆರೆದು ಪ್ರಾಣ ತ್ಯಾಗ ಮಾಡಿದ್ದಾಳೆ ಎಂದರು.
ಅತಿಥಿ ಶಿಕ್ಷಕಿ ಈಶ್ವರಿ ಭಜಂತ್ರಿ ಮಾತನಾಡುತ್ತ, ಬ್ರಿಟಿಷರು ಬಲಿಷ್ಠರನ್ನು ಮಟ್ಟ ಹಾಕಲು ದುರ್ಬಲರಿಗೆ ಬೆಂಬಲ ಮತ್ತು ಸಹಾಯ ಹಸ್ತ ನೀಡಿ ತಮ್ಮ ಬೇಳೆ ಬೇಯಿಸಿಕೊಂಡರು. ಅವರ ಒಳಮರ್ಮ ಅರಿಯದ ಸ್ವಾರ್ಥಿ ಭಾರತೀಯರಿಂದಲೇ ಎರಡುನೂರು ವರ್ಷ ಭಾರತ ಗುಲಾಮಗಿರಿ ಅನುಭವಿಸಿತು ಎಂದರು.
ಮಕ್ಕಳ ಪರವಾಗಿ ಬಸವ್ವ ಕೊಣ್ಣೂರ, ಶ್ರವಣಕುಮಾರ ಈರಣ್ಣವರ ಮಾತನಾಡಿದರು.ಶಿಕ್ಷಕರಾದ ಎಂ.ಬಿ. ವಂದಾಲಿ, ಅಶೋಕ ಬಳ್ಳಾ ಉಪಸ್ಥಿತರಿದ್ದರು.