Homeಸುದ್ದಿಗಳುಕವಿ ಸಮಯ ವೇದಿಕೆಯಿಂದ ನಾಳೆ 'ಯು.ಆರ್. ಅನಂತಮೂರ್ತಿ ಬದುಕು-ಬರಹ' ಕುರಿತು ಸರಣಿ ಉಪನ್ಯಾಸ

ಕವಿ ಸಮಯ ವೇದಿಕೆಯಿಂದ ನಾಳೆ ‘ಯು.ಆರ್. ಅನಂತಮೂರ್ತಿ ಬದುಕು-ಬರಹ’ ಕುರಿತು ಸರಣಿ ಉಪನ್ಯಾಸ

Published on

​ಹುನಗುಂದ: ‘ಕವಿ ಸಮಯ ವೇದಿಕೆ’ಯ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿರುವ ‘ಕನ್ನಡ ನಾಡಿನ ಹೆಮ್ಮೆಯ ಸಾಹಿತಿಗಳ ಬದುಕು-ಬರಹ’ ಸರಣಿ ಉಪನ್ಯಾಸ ಮಾಲಿಕೆ-೬ ಕಾರ್ಯಕ್ರಮವು ಅಕ್ಟೋಬರ್ 25ರ ಭಾನುವಾರ ಸಂಜೆ 7:00 ಗಂಟೆಗೆ ವರ್ಚುವಲ್ (ಝೂಮ್/ಗೂಗಲ್ ಮೀಟ್) ಮಾಧ್ಯಮದ ಮೂಲಕ ಜರುಗಲಿದೆ.

​ಸದರಿ ಕಾರ್ಯಕ್ರಮದಲ್ಲಿ ಬಾಗಲಕೋಟೆಯ ಬಸವೇಶ್ವರ ವಿದ್ಯಾವರ್ಧಕ ಸಂಘದ ಸಹಾಯಕ ಪ್ರಾಧ್ಯಾಪಕರಾದ ಡಾ. ಬಸವರಾಜ ಕುಂಬಾರ ಅವರು ‘ಯು.ಆರ್. ಅನಂತಮೂರ್ತಿಯವರ ಬದುಕು ಮತ್ತು ಬರಹ’ ಎಂಬ ವಿಷಯದ ಕುರಿತು ಪ್ರಧಾನ ಉಪನ್ಯಾಸ ನೀಡಲಿದ್ದಾರೆ.

​ಕಾರ್ಯಕ್ರಮದ ಆರಂಭದಲ್ಲಿ ಹುನಗುಂದದ ಬಿ.ಆರ್.ಪಿ ಶ್ರೀಮತಿ ವಿಜಯಲಕ್ಷ್ಮೀ ನಾಗಲೋಟಿ ಅವರ ಪ್ರಾರ್ಥನೆಯೊಂದಿಗೆ ಸಭೆ ಪ್ರಾರಂಭವಾಗಲಿದ್ದು, ಕಮತಗಿಯ ಸಾಹಿತಿ ಶ್ರೇಯಾಂಶ ಕೋಲಾರ ಅವರು ಎಲ್ಲರನ್ನೂ ಸ್ವಾಗತಿಸಲಿದ್ದಾರೆ. ಉಪನ್ಯಾಸದ ನಂತರ ವಿಷಯದ ಕುರಿತು ಇಬ್ಬರು ಸಾಹಿತ್ಯಾಸಕ್ತರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ.

​ಸೂಳೇಭಾವಿಯ ಸಾಹಿತಿ ಅಶೋಕ ಬಳ್ಳಾ ಕಾರ್ಯಕ್ರಮ ನಿರೂಪಿಸಲಿದ್ದು, ಇಳಕಲ್ಲಿನ ಸಾಹಿತಿ ಬಸವರಾಜ ಬಲಕುಂದಿ ವಂದನಾರ್ಪಣೆ ನೆರವೇರಿಸಲಿದ್ದಾರೆ.
​ಸರ್ವ ಕನ್ನಡ ಕವಿ ಮನಸ್ಸುಗಳು ಹಾಗೂ ಸಾಹಿತ್ಯ ಪ್ರೇಮಿಗಳು ಸಂಜೆ 6:55ಕ್ಕೆ ಸಭೆಗೆ ಜಾಯಿನ್ ಆಗುವ ಮೂಲಕ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಸಂಘಟಕರು ಕೋರಿದ್ದಾರೆ.
​ಕಾರ್ಯಕ್ರಮದ ಲಿಂಕ್: https://meet.google.com/xnk-eest-vmu

Latest articles

More like this