Homeಸುದ್ದಿಗಳುವಚನ ಕಮ್ಮಟ ಪರೀಕ್ಷೆಯಲ್ಲಿ ದ್ವಿತೀಯ ರ್ಯಾಂಕ್ ಪಡೆದ ಮುಕ್ತಾಯಕ್ಕನಿಗೆ ಸನ್ಮಾನ

ವಚನ ಕಮ್ಮಟ ಪರೀಕ್ಷೆಯಲ್ಲಿ ದ್ವಿತೀಯ ರ್ಯಾಂಕ್ ಪಡೆದ ಮುಕ್ತಾಯಕ್ಕನಿಗೆ ಸನ್ಮಾನ

Published on

ಸಿಂದಗಿ- ಪ್ರತಿಭೆ ಯಾರ ಸ್ವತ್ತೂ ಅಲ್ಲ ಪ್ರಯತ್ನ ಮತ್ತು ಆತ್ಮವಿಶ್ವಾಸ ನಮ್ಮ ಸಾಧನೆಗೆ ಕಾರಣವಾಗುವ ಅಂಶಗಳು ನಿರಂತರ ಹೋರಾಟವೆ ಬದುಕಿಗೆ ದಾರಿ ದೀಪವಾಗುತ್ತವೆ ಎಂದು ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ ಹೇಳಿದರು.

ಪಟ್ಟಣದ ಎಚ್.ಜಿ.ಕಾಲೇಜಿನಲ್ಲಿ ಚಿತ್ರದುರ್ಗದ ಬೃಹನ್ಮಠದ ಬಸವಕೇಂದ್ರ ಹಮ್ಮಿಕೊಂಡಿರುವ ರಾಜ್ಯಮಟ್ಟದ
ವಚನ ಕಮ್ಮಟ ಪರೀಕ್ಷೆಯಲ್ಲಿ ಕಾಲೇಜಿನ ವಿದ್ಯಾರ್ಥಿ ಮಾದೇಶ ಘೋಡಕೆ ರಾಜ್ಯಮಟ್ಟದಲ್ಲಿ ದ್ವಿತೀಯ ರ‍್ಯಾಂಕ ಪಡೆದ ಹಿನ್ನೆಲೆ ಮತ್ತು ಅವರನ್ನು ತರಬೇತಿ ನೀಡಿದ ಉಪನ್ಯಾಸಕಿ ಮುಕ್ತಾಯಕ್ಕ ಕತ್ತಿ ಅವರನ್ನು ಗೌರವಿಸಿ ಮಾತನಾಡಿ, ಸಾಧನೆ ಎಂಬುದು ಸಾಧಕನ ಸ್ವತ್ತೇ ಹೊತರು ಸೋಮಾರಿಯ ಸ್ವತ್ತಲ್ಲ ವಿದ್ಯಾರ್ಥಿ ಜೀವನದಲ್ಲಿ ಮೂಲವಾಗಿ ಗುರು ಮುಖ್ಯ. ಗುರಿ ಇಲ್ಲದೆ ನಾವು ಯಾವತ್ತು ಯಾವ ಕಾರ್ಯ ಮಾಡಬಾರದು. ನಮ್ಮ ಕಾಯಕ ಯಾವುದೆ ಇರಲಿ ಆ ಕಾಯಕದಲ್ಲಿ ಆಸಕ್ತಿ ಮತ್ತು ಭಕ್ತಿ ಅತ್ಯಗತ್ಯ
ಮುಖ್ಯ ಎಂದರು.

ಈ ವೇಳೆ ಕಾಲೇಜಿನ ಉಪನ್ಯಾಸಕರಾದ ಎಮ್.ಎನ್.ಅಜ್ಜಪ್ಪ, ಎಫ್.ಎ.ಹಾಲಪ್ಪನವರ, ಎಸ್.ಪಿ.ಬಿರಾದಾರ, ಸಿದ್ದಲಿಂಗ ಕಿಣಗಿ, ಎ.ಬಿ.ಪಾಟೀಲ, ಎಸ್.ಎ.ಬಸರಕೋಡ, ಡಾ.ಎಸ್.ಎಸ್.ಚವ್ಹಾಣ, ಎ.ಆರ್.ಸಿಂದಗಿಕರ, ಎಸ್.ಎಸ್.ಪಾಟೀಲ,
ಜ್ಯೋರ್ತಿಲೇಖ ಚೆನ್ನೂರ ಸೇರಿದಂತೆ ಇತರರು ಇದ್ದರು.

Latest articles

More like this