ಮೂಡಲಗಿ- ಪ್ರತಿ ವರ್ಷವೂ ನಂದಿವಾಲೆ ಸಮಾಜದವರು ಒಗ್ಗಟ್ಟಿನಿಂದ ಕೂಡಿಕೊಂಡು ಅದ್ದೂರಿಯಾಗಿ ವೆಂಕಟೇಶ್ವರ ಜಾತ್ರೆಯನ್ನು ಆಚರಿಸುತ್ತಿರುವುದು ದೈವಿಭಕ್ತಿಯನ್ನು ಎತ್ತಿತೋರಿಸುತ್ತದೆ ಎಂದು ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.
ಪಟ್ಟಣದ ವೆಂಕಟೇಶ ನಗರದಲ್ಲಿರುವ ಝಂಡೇಕುರುಬರ ಸಮಾಜದವರು ಹಮ್ಮಿಕೊಳ್ಳುವ ವೆಂಕಟೇಶ್ವರ ಜಾತ್ರೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಈ ಸಮಾಜದವರ ದೈವ ಭಕ್ತಿಯನ್ನು ಪ್ರಶಂಶಿಸಿದರು.
ನಾವೆಲ್ಲರೂ ದೇವರನ್ನು ನಂಬಿ ಬದುಕುತ್ತಿದ್ದೇವೆ. ನಮ್ಮ ಮಧ್ಯೆ ದೇವರು ಇದ್ದಾನೆ ಎಂಬುದು ನಮ್ಮ ಕಲ್ಪನೆ. ಇದು ಸತ್ಯವೂ ಕೂಡ. ಕೆಲವರು ದೇವರಿಲ್ಲ ಎಂಬುದನ್ನು ವಾದವನ್ನು ಸಹ ಮಾಡುತ್ತಿರುತ್ತಾರೆ. ಆದರೆ, ದೇವರು ಇದ್ದಾನೆ. ಈ ಜಗತ್ತು ನಿಂತಿರುವುದು ದೇವರಿಂದಲೇ ಎಂಬುದು ನಮ್ಮ ವಾದವಾಗಿದೆ. ಎಲ್ಲ ಜಾತಿ, ಜನಾಂಗದವರು ಯಾವುದೇ ಜಾತಿ ಬೇಧವಿಲ್ಲದೇ ಜಾತ್ರೆಯಲ್ಲಿ ಭಾಗವಹಿಸುತ್ತಾರೆ. ದೇವರ ಕೃಪೆಗೆ ಪಾತ್ರರಾಗುತ್ತಾರೆ. ಇದುವೇ ನಮ್ಮ ದೇಶದ ಸಂಸ್ಕೃತಿಯಾಗಿದೆ ಎಂದು ತಿಳಿಸಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿಯವರನ್ನು ಸಮಾಜದ ಪರವಾಗಿ ಸತ್ಕರಿಸಲಾಯಿತು.
ಸಮಾಜದ ಮುಖಂಡರಾದ ರಾಮು ಪೂಜೇರಿ, ಗುಂಡು ಹರಿಕೃಷ್ಣ, ಬಾಳಪ್ಪ ಜಂಡೇಕುರುಬರ, ಬಸು ಜಂಡೆಕುರುಬರ, ಲಕ್ಷ್ಮಣ ಜಂಡೇಕುರುಬರ, ರಾಜು ಜಂಡೇಕುರುಬರ, ರಾಮು ಜಂಡೇಕುರುಬರ, ವೆಂಕಟೇಶ ಜಂಡೇಕುರುಬರ, ಪುರಸಭೆಯ ಮಾಜಿ ಸದಸ್ಯರು, ಹಲವು ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.