Homeಸುದ್ದಿಗಳುನಿವೃತ್ತ ಚಿತ್ರಕಲಾ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ

ನಿವೃತ್ತ ಚಿತ್ರಕಲಾ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ

Published on

 ಮೂಡಲಗಿ:-ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ಮೂಡಲಗಿ ತಾಲೂಕಾ ಚಿತ್ರಕಲಾ ಸಂಘ ಹಾಗೂ ಕಲ್ಲೋಳಿಯ ಪಿ ಜೆ ಎನ್ ಪ್ರೌಢ ಶಾಲೆ ಇವುಗಳ ಜಂಟಿಯಾಗಿ ನಿವೃತ್ತ ಚಿತ್ರಕಲಾ ಶಿಕ್ಷಕರಿಗೆ,ತಾಲೂಕಿಗೆ ಹೊಸದಾಗಿ ಬಂದಂಥ ಚಿತ್ರಕಲಾ ಶಿಕ್ಷಕರಿಗೆ ಸನ್ಮಾನ ಮತ್ತು ಕಾರ್ಯಾಗಾರ ಉದ್ಘಾಟನೆ ಕಾರ್ಯಕ್ರಮ ಜರುಗಿತು.
   ನಿವೃತ್ತಿಯಾಗುತ್ತಿರುವ ಚಿತ್ರಕಲಾ ಶಿಕ್ಷಕ ಎ.ಆರ್.ಕುರಬರ ಅವರನ್ನು ಅಭಿಮಾನದಿಂದ ಸತ್ಕರಿಸುವ ಕಾರ್ಯ ನಡೆಯಿತು.
    ಕಲೆ ಅನ್ನುವುದು ಒಂದು ಅಪರೂಪವಾದ ಸಾಧನೆ.ಅದು ಎಲ್ಲರಿಗೂ ಸಿಗುವುದು ಸುಲಭವಲ್ಲ ವೆಂದು ಮೂಡಲಗಿ ತಾಲೂಕಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎನ್.ಬಿ.ಕದಂ ಸತ್ಕರಿಸಿ ಮಾತನಾಡಿದರು.
    ರಂಗು ರಂಗಿನ ಚಿತ್ರಣವನ್ನು ಬಿಡಿಸಿ ನಿವೃತ್ತಿ ಆಗುತ್ತಿರುವವರು ನನ್ನ ಆತ್ಮೀಯರು. ಸಾಧನೆ ಅನ್ನುವುದು ಸಾಧಕನ ಸೊತ್ತು. ಕುರುಬರ ಅವರು ಸಾಧಕರು ಎಂದು ಚಿತ್ರಕಲಾ ಸಂಘದ ತಾಲೂಕಿನ ಉಪಾಧ್ಯಕ್ಷರಾದ ಸುಭಾಸ ಕುರಣಿ ಅವರು ಬಣ್ಣಿಸಿದರು.
  ಬಿ.ಐ.ಬಡಿಗೇರ, ಕೆ.ವಿ.ಕಡ್ಡಿ, ಗುಡುಗುಡಿ, ಆರ್.ಎಸ್.ಬಡೇಸ್  ಮತ್ತು ಇನ್ನು ಅನೇಕ ಚಿತ್ರಕಲಾವಿದರು ಹಾಗೂ ಗುರು ಮಾತೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Latest articles

More like this