ನಾಡಿನ ಹಿರಿಯ ಕವಿ ಕನ್ನಡಕ್ಕೆ ಮೊದಲ ಜ್ಞಾನಪೀಠ ತಂದುಕೊಟ್ಟ ಮಹಾ ಕವಿ ಕುವೆಂಪು ಅವರ ನಾಡಗೀತೆ ಕನ್ನಡಿಗರ ನಾಡಿಗೀತೆಯಾಗಿದೆ ಅವರು ತಮ್ಮ ಅಭಿಲಾಷೆಯಂತೆ ಬರೆದ ಆ ಕಾಲದ ಕವನ ಅದನ್ನು ವಿವಾದ ಗೊಳಿಸುವುದು ತಿದ್ದುವುದು ಪ್ರಶ್ನಿಸುವುದು ತಿರುಚುವುದು ಬೇಕಾದಂತೆ ಸೇರಿಸುವುದು ಮುಂತಾದ ರೀತಿಯಲ್ಲಿ ಅಗೌರವ ತರುವ ರೀತಿಯಲ್ಲಿ ಕವಿತೆಯೊಂದಿಗೆ ನಡೆದುಕೊಳ್ಳುತ್ತಿರುವುದು ಕುವೆಂಪು ಅವರ ಗೀತೆಗೆ ಮಾಡಿದ ಅಗೌರವವಾಗುತ್ತದೆ ಇದು ತರವಲ್ಲವೆಂದು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಗೌರವ ಕಾರ್ಯದರ್ಶಿ ನೇ ಭ ರಾಮಲಿಂಗಶೆಟ್ಟಿ ಅಭಿಪ್ರಾಯ ಪಟ್ಟರು.
ಕರ್ನಾಟಕದಲ್ಲಿ ಕುವೆಂಪು ಅವರಿಗೆ ಮೊದಲ ಬಾರಿಗೆ ಕರ್ನಾಟಕ ರತ್ನ ಪ್ರಶಸ್ತಿ ಸೇರಿದಂತೆ ಕನ್ನಡಿಗರ ಗೌರವಕ್ಕೆ ಕುವೆಂಪು ಅವರು ಪಾತ್ರರಾಗಿದ್ದರು ಅವರ ಸಾಹಿತ್ಯ ಎಲ್ಲ ಕಾಲದಲ್ಲೂ ಜೀವಂತವಾಗಿದೆ ಅವರನ್ನು ಮತ್ತಷ್ಟು ಗೌರವಿಸುವ ಕೆಲಸ ಆಗಬೇಕಾಗಿದೆ ಎಂದು ಕರುನಾಡಸಿರಿ ಸಾಹಿತ್ಯ ವೇದಿಕೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ವಿಕಾಸ ರಂಗದ ಅಧ್ಯಕ್ಷರಾದ ವ ಚ ಚೆನ್ನೆ ಗೌಡ ಅವರು ಕುವೆಂಪು ಅವರು ತಮ್ಮ ಸಾಹಿತ್ಯದ ಮೂಲಕ ಕನ್ನಡಿಗರಿಗೆ ಶಕ್ತಿಯನ್ನು ನೀಡಿದರು ಆ ಮೂಲಕ ಕನ್ನಡ ಭಾಷೆಯ ಬೆಳವಣಿಗೆಯ ಹೋರಾಟಕ್ಕೆ ಬಲವನ್ನು ತಂದುಕೊಟ್ಟವರು ಏಕೀಕರಣ ಹೋರಾಟವನ್ನು ಸಂಘಟಿಸಿ ಕನ್ನಡ ಪರವಾದ ಕವಿತೆಗಳನ್ನು ಬರೆದು ಕನ್ನಡಿಗರಿಗೆ ಕುವೆಂಪು ಸದಾಕಾಲ ಆದರ್ಶಪ್ರಾಯರು ತ್ರಿಭಾಷಾ ಸೂತ್ರವನ್ನು ವಿರೋಧಿಸಿದ್ದರು ಎಂದು ಹೇಳಿದರು
ಕರುನಾಡ ಸಿರಿ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಶಾಂತಲಾ ಸುರೇಶ್ ಹಾಗೂ ಕಾರ್ಯದರ್ಶಿ ಡಾ ಇಂದಿರಾ ಶರಣ್ ಜಮ್ಮಲದಿನ್ನಿ ಶ್ರೀಮತಿ ಮಂಜುಳಾ ಶಿವಾನಂದ, ಮುಂತಾದವರು ಉಪಸ್ಥಿತರಿದ್ದರು
ಕುವೆಂಪು ಮತ್ತು ಕನ್ನಡ ಪ್ರಜ್ಞೆ ಕುರಿತು ಸಾಹಿತಿಗಳಾದ ಡಾ ವಸಂತ ಕುಮಾರ ಅವರು ಮಾತನಾಡುತ್ತಾ ಕುವೆಂಪುರವರು ತಮ್ಮ ಸಾಹಿತ್ಯದಲ್ಲಿ ರಾಷ್ಟ್ರೀಯ ಚಿಂತನೆಯನ್ನು ಇಟ್ಟುಕೊಂಡು ಬರವಣಿಗೆ ಮತ್ತು ಕವಿತೆಗಳ ಮೂಲಕ ನಾಡಿನ ಜನರನ್ನು ಪ್ರಜ್ಞಾವಂತರಾಗುವಂತೆ ಮಾಡಿದ್ದಾರೆ ಮೈಸೂರು ರಾಜ್ಯಕ್ಕೆ ಕರ್ನಾಟಕ ರಾಜ್ಯವಾಗಬೇಕು ಎಂಬ ಆಲೋಚನೆಯನ್ನು ಹೊಂದಿದವರು ಮುಖ್ಯವಾಗಿ ವಿಶ್ವಮಾನವ ಸಂದೇಶವನ್ನು ನೀಡಿ ರೈತರನ್ನು ನೇಗಿಲ ಯೋಗಿ ಎಂದು ಕರೆದು ಗೌರವಿಸಿದರು ಎಂದು ಉಪನ್ಯಾಸ ನೀಡಿದ್ದರು ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಮಂಜುಳಾ ಪಾವಗಡ, ಕೆ ವಿ ರಾಜೇಶ್ವರಿ, ಮ ಚಂದ್ರಶೇಖರ್, ಇವರನ್ನು ಗೌರವಿಸಿ ಸನ್ಮಾನಿಸಲಾಯಿತು ಕವಿಗೋಷ್ಠಿಯಲ್ಲಿ 17 ಮಂದಿ ಕವಿಗಳು ಕವಿತಾ ವಾಚನ ಮಾಡಿದರು