Homeಕವನಕವನ : ಭರವಸೆಯ ಬೆಳಕಿರಲಿ

ಕವನ : ಭರವಸೆಯ ಬೆಳಕಿರಲಿ

Published on

ಭರವಸೆಯ ಬೆಳಕಿರಲಿ

ಬಾನ ಅಂಗಳದಿ ಮೋಡಗಳ ನರ್ತನ,
ಧರೆಗೆ ಇಳಿಯಲು ಸಜ್ಜಾದ ವರುಣ
ಒಣಗಿದ ಭೂಮಿಗೆ ಜೀವ ತುಂಬುವ ಕ್ಷಣ,
ಬರಡಾದ ಬದುಕಿಗೆ ತಂದ ಹೊಸ ಕಿರಣ.

ಹನಿ ಹನಿಯು ಮುತ್ತಾಗಿ ಮಣ್ಣ ಸೇರಲಿ,
ಸಸ್ಯ ಸಂಕುಲವು ಹಸಿರು ಸೀರೆಯ ಉಡಲಿ.
ರೈತನ ಕಣ್ಣಲಿ ಕನಸಿನ ಬೆಳೆ ಅರಳಲಿ,
ಹಸಿವು ನೀಗಿ ಸಮೃದ್ಧಿ ಬೆಳಗಲಿ.

ಗುಡುಗು ಸಿಡಿಲ ಅಬ್ಬರವಲ್ಲದ ಮಳೆ,
ನೊಂದ ಜೀವಗಳ ಕಣ್ಣೀರು ಒರೆಸುವ ಮಳೆ.
ಸೋತ ಮನಗಳಿಗೆ ಸಾಂತ್ವನದ ಧಾರೆ,
ಜೀವಜಗತ್ತಿಗೆ ಹೊಸ ಚೈತನ್ಯದ ಸಾರೇ.

ಸುರಿಸು ಮಳೆಯೇ ಕರುಣೆಯ ಹನಿ,
ತೊಳೆಯು ಜಗದಕಲ್ಮಶದ ಮನೆ.
ಪ್ರೀತಿ ವಿಶ್ವಾಸದ ಹೊಳೆ ಹರಿಯಲಿ ಎಲ್ಲೆಡೆ,
ಭರವಸೆಯ ಬೆಳಕಿರಲಿ ಸಾಗುವ ಹೆಜ್ಜೆಯಲಿ.

_______________________________

ಭಾಗ್ಯಶ್ರೀ ಕೋಟಿ ಜಮಖಂಡಿ

Latest articles

More like this