ವರ್ಷ ಧಾರೆ
ಇಳೆಗೆ ಇಳಿದು
ಕೊಳೆಯ ಕಳೆದು
ಜೀವ ಕಳೆ ಹೊತ್ತು
ತುಂತುರು ಹನಿಗಳ ಝೇಂಕಾರ.
ಕಾದ ನೆಲವ ಸಂತೈಸಿ
ಬಿರುಕಿಗೆ ತಂಪನೆರೆದು
ಮಣ್ಣ ಕಣದಿ ಹಾದು
ಭಿನ್ನ ಭೇದ ತೊರೆದ ಮಮಕಾರ.
ಮಡು ಗಟ್ಟಿದ ಮೌನ
ಸುಡು ಬಿಸಿಲು ತಡೆದು
ಮೋಡ ಗರ್ಭ ಧರಿಸಿ
ಹನಿಯೊಡೆಸಿದ ಸರದಾರ.
ಜೇವ ಚೈತನ್ಯದ ಚಿಲುಮೆ
ಹಸಿರು ತೋರಣ ಕಟ್ಟಿ
ಸೃಷ್ಠಿ ರಹಸ್ಯದ ತಾಣ
ಮಾಸದ ಚೈತ್ರ ಚೆಲುವ ಮಾರ.
ರೇಷ್ಮಾ ಕಂದಕೂರ, ಶಿಕ್ಷಕಿ
ಸಿಂಧನೂರು