ಬೀದರ – ಬೀದರ್‌ನ ಬ್ರಿಮ್ಸ್ ಜಿಲ್ಲಾ ಆಸ್ಪತ್ರೆಯಲ್ಲಿ ಸಮಾಜ ತಲೆತಗ್ಗಿಸುವಂತ ಘಟನೆ ಬೆಳಕಿಗೆ ಬಂದಿದೆ.
ಆಸ್ಪತ್ರೆಯ ಶವಾಗಾರದಲ್ಲಿ ಕೆಲಸ ಮಾಡುತ್ತಿದ್ದ ನೀಚನೊಬ್ಬ ಮಾನವೀಯತೆಯೇ ತಲೆ ತಗ್ಗಿಸುವಂಥ ಕೆಲಸ ಮಾಡಿದ್ದು ಈತ ಶವಾಗಾರಕ್ಕೆ ಬರುವ ಮೃತ ಮಹಿಳೆಯರ ಬೆತ್ತಲೆ ಪೊಟೋ ಸಂಗ್ರಹಿಸುತ್ತಿದ್ದನೆನ್ನಲಾಗಿದೆ
ಹಲವಾರು ವರ್ಷಗಳಿಂದ ಇದೇ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಟೆಂಡರ್ ಮುನೀರ್ ಅಹ್ಮದ ಎಂಬಾತ ಈ ಕೃತ್ಯ ಎಸಗಿರುವ ಪ್ರಕರಣ ನಡೆದಿದ್ದು ಆತನ ವಿರುದ್ಧ ದೂರು ದಾಖಲಾಗಿದೆ
ಮುನೀರ್ ಮೃತ ಮಹಿಳೆಯರ ಶವದ ಪೋಸ್ಟ್‌ಮಾರ್ಟಮ್ ಮಾಡುವಾಗ ಮಹಿಳೆಯರ ಬೆತ್ತಲೆ ಫೋಟೋ ಸೆರೆ ಹಿಡಿದು ವಿಕೃತಿ ಮೆರೆಯುತ್ತಿದ್ದ.ಆರೋಪಿಯ ಮೊಬೈಲ್‌ನಲ್ಲಿ ಮೃತ ಮಹಿಳೆಯರ ಹಲವು ಬೆತ್ತಲೆ ಚಿತ್ರಗಳು ಪತ್ತೆಯಾಗಿವೆ.
ಈ ಕುರಿತು ನ್ಯೂ ಟೌನ್ ಪೊಲೀಸ್ ಠಾಣೆಗೆ ಬ್ರಿಮ್ಸ್ ಮುಖ್ಯಸ್ಥ ಪ್ರೊ. ಡಾ. ಮೋಸಿನ್ ಉಲ್ ಹಕ್ ದೂರು ನೀಡಿದ್ದಾರೆ. ದೂರು ದಾಖಲಾಗುತ್ತಿದಂತೆ ಅಟೆಂಡರ್ ಮುನೀರ್ ಅಹ್ಮದ್ ಪರಾರಿಯಾಗಿದ್ದಾನೆ.
ಆರೋಪಿಯ ಕೃತ್ಯದಿಂದಾಗಿ ಮಹಿಳೆಯರ ಘನತೆಗೆ ವೈದ್ಯಕೀಯ ಸಂಸ್ಥೆಯ ಗೌಪ್ಯತೆಗೆ ಧಕ್ಕೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ವರದಿ : ನಂದಕುಮಾರ ಕರಂಜೆ, ಬೀದರ