ಬಾಗಲಕೋಟೆ – ಶ್ರೀಮತಿ ಜಯಶ್ರೀ ಜಿ. ಗಣಾಚಾರಿ (ಭಂಡಾರಿ) ಮುಖ್ಯಾಧ್ಯಾಪಕರು, ನೂತನ ಪ್ರೌಢಶಾಲೆ, ಜಾಲಿಹಾಳ ಇವರ ಸೇವಾ ನಿವೃತ್ತಿ ನೀಲಕಂಠಜಿ ಗಣಾಚಾರಿ ಸಂಸ್ಮರಣ ಗ್ರಂಥ ಹಾಗೂ ಗಾಂಧೀಜಿಯವರ ತತ್ವಾನುಯಾಯಿ ನೀಲಕಂಠಜಿ ಗಣಾಚಾರಿ ಸಂಸ್ಮರಣ ಗ್ರಂಥ ಬಿಡುಗಡೆ ಸಮಾರಂಭ 31 ಮೇ 2026 ರವಿವಾರ, ಬೆಳಿಗ್ಗೆ 10.30 ಕ್ಕೆ ಜಿಲ್ಲೆಯ ಬದಾಮಿ ಪಟ್ಟಣದ ಶ್ರೀ ಕುಮಾರೇಶ್ವರ ಸಭಾಭವನ, ಕಾಲೇಜ್ ರೋಡ್ ಬದಾಮಿಯಲ್ಲಿ ಜರುಗಲಿದೆ
ಕಾರ್ಯಕ್ರಮದ ಸಾನ್ನಿಧ್ಯ ಶ್ರೀ ಮ.ನಿ.ಪ್ರ. ಶಿವಕುಮಾರ ಮಹಾಸ್ವಾಮಿಗಳು ಕಪ್ಪತಗುಡ್ಡ ನಂದಿವೇರಿಮಠ, ಗದಗ ವಹಿಸಲಿದ್ದಾರೆ ಅಧ್ಯಕ್ಷತೆಯನ್ನು ಎಂ.ಬಿ. ಹಂಗರಗಿ ಅಧ್ಯಕ್ಷರು, ಶ್ರೀ ಕುಮಾರೇಶ್ವರ ಪಟ್ಟಿ ಸಹಕಾರಿ ಸಂಘ ನಿಯಮಿತ, ಬಾದಾಮಿ ವಹಿಸಲಿದ್ದಾರೆ.
ಸಂಸ್ಮರಣ ಗ್ರಂಥ ಬಿಡುಗಡೆಯನ್ನು ಭೀಮಸೇನ ಬಿ. ಚಿಮ್ಮನಕಟ್ಟಿ ಶಾಸಕರು, ಬಾದಾಮಿ ಮಾಡಲಿದ್ದಾರೆ ಸಂಸ್ಮರಣ ಗ್ರಂಥದ ಅವಲೋಕನ ಗುಳೇದಗುಡ್ಡದ ಸಾಹಿತಿ ಚಂದ್ರಶೇಖರ ಬಿ. ಹೆಗಡೆ ಕನ್ನಡ ಸಹಾಯಕ ಪ್ರಾಧ್ಯಾಪಕರು, ಸರಕಾರಿ ಪ್ರಥಮ ದರ್ಜೆ ಕಾಲೇಜ್, ಬಾದಾಮಿ ಇವರು ಗ್ರಂಥದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ , ಬಾಗಲಕೋಟೆ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಸದಸ್ಯ ಎಸ್ ಆರ್ ಮನಹಳ್ಳಿ ಅತಿಥಿಗಳಾಗಿ ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಭಾಜಪ ಜಿಲ್ಲಾಧ್ಯಕ್ಷ ಶಾಂತಗೌಡ ಟಿ ಪಾಟೀಲ , ಜಾಲಿಹಾಳ ಪಿ.ಕೆ.ಪಿ.ಎಸ್. ಅಧ್ಯಕ್ಷ ಸಿದ್ದನಗೌಡ ಬಿ ಪಾಟೀಲ್ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ನಿವೃತ್ತ ಪ್ರಧಾನ ವ್ಯವಸ್ಥಾಪಕ ಎಲ್ ಬಿ ಕುರ್ತುಕೋಟಿ, ಬಾಗಲಕೋಟೆ ಸಿ ವಿ ಮ ಸಂಸ್ಥೆಯ, ಅಧ್ಯಕ್ಷ ಅವಿನಾಶ್ ಎಸ್ ಸಾಲಿಮನಿ, ಜಾಲಿಹಾಳ ಗ್ರಾಮ ಪಂಚಾಯತಿಯ ಮಾಜಿ ಸದಸ್ಯ ಅಜೀಜ ಡಿ ಮುಲ್ಲಾ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಕಾರ್ಯಕ್ರಮಕ್ಕೆ ಆಗಮಿಸುವ ಸರ್ವರನ್ನು ಭಂಡಾರಿ ಹಾಗೂ ಗಣಾಚಾರಿ ಪರಿವಾರದವರು ಪ್ರಕಟಣೆಯಲ್ಲಿ ಸ್ವಾಗತ ಕೋರಿದ್ದಾರೆ